ಮದುಮಗನ ವೇಷ ಧರಿಸಿ ಕುದುರೆಯೇರಿ ಬಂದು ನಾಮಪತ್ರ ಸಲ್ಲಿಸಿದ ಅಭ್ಯರ್ಥಿ

ಶಹಜಾನ್‌ಪುರ, ಏಪ್ರಿಲ್ 9: ನಾಮಪತ್ರ ಸಲ್ಲಿಕೆ ಗಳಿಗೆಯನ್ನು ಸಾಮಾನ್ಯವಾಗಿ ಅಭ್ಯರ್ಥಿಗಳು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಾರೆ. ಇನ್ನು ಕೆಲವರು ನಾಮಪತ್ರ ಸಲ್ಲಿಕೆಯ ಕ್ಷಣಗಳನ್ನು ರಂಜನೀಯವಾಗಿರಿಸುತ್ತಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ವಿನಯ್ ರಾಜಾವತ್ ಎತ್ತಿನ ಗಾಡಿಯಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದರು. ಜತೆಗೆ ಠೇವಣಿ ಮೊತ್ತವನ್ನು ಸಂಪೂರ್ಣವಾಗಿ ಚಿಲ್ಲರೆ ಹಣದಲ್ಲಿಯೇ ನೀಡಿದ್ದರು. ತಮಿಳುನಾಡಿನಲ್ಲಿ ಕೂಡ ಒಬ್ಬ ಅಭ್ಯರ್ಥಿ ಚಿಲ್ಲರೆ ನಾಣ್ಯಗಳಲ್ಲಿಯೇ ನಾಮಪತ್ರದ ಠೇವಣಿ ಸಲ್ಲಿಸಿದ್ದರು.

ಆದರೆ, ಉತ್ತರ ಪ್ರದೇಶದ ಶಹಜಾನ್‌ಪುರದಲ್ಲಿನ ಅಭ್ಯರ್ಥಿಯೊಬ್ಬರು ಹೊಸ ರೀತಿಯ ವೇಷ ಧರಿಸಿ ಗಮನ ಸೆಳೆದಿದ್ದಾರೆ.

ಸಂಯುಕ್ತ ವಿಕಾಸ ಪಕ್ಷದ ಅಭ್ಯರ್ಥಿ ವೈಧ್ ರಾಜ್ ಕಿಶನ್ ಅವರು ಶಹಜಾನ್‌ಪುರ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಹಾಗೆ ನಾಮಪತ್ರದೊಂದಿಗೆ ತೆರಳುವಾಗ ರಸ್ತೆಯಲ್ಲಿ ಎಲ್ಲರ ಗಮನ ಅವರತ್ತಲೇ ಇತ್ತು. ಏಕೆಂದರೆ ಠಾಕುಠೀಕಾಗಿ ಮದುಮಗನ ವೇಷ ಧರಿಸಿದ್ದ ಅವರು ಕುದುರೆ ಮೇಲೆ ಕುಳಿತು ನಾಮಪತ್ರ ಹಿಡಿದುಕೊಂಡು ಸಾಗಿದ್ದರು. ಅವರ ಜತೆ ಬಾಜಾ ಭಜಂತ್ರಿಯ ತಂಡ ಭರ್ಜರಿ ಸಂಗೀತ ಮೊಳಗಿಸುತ್ತಾ ಸಾಗಿತ್ತು.

uttar Pradesh shahjanpur constituency vaidh raj kishan dressed up like briedgroom filed nomination

ಮದುಮಗನ ವೇಷ ತೊಟ್ಟು ನಾಟಕೀಯವಾಗಿ ನಾಮಪತ್ರ ಸಲ್ಲಿಸಿದ್ದಕ್ಕೆ ಕಿಶನ್ ಅವರು ನೀಡಿದ ವಿವರಣೆ ಏನು ಗೊತ್ತೇ? 'ನಾನು ರಾಜಕಾರಣದ ಅಳಿಯನಾಗಿ ನಾಮಪತ್ರ ಸಲ್ಲಿಸುತ್ತಿದ್ದೇನೆ' ಎಂದು.

ಪಾಲಿಕೆ ಕೌನ್ಸಿಲರ್, ಅಧ್ಯಕ್ಷ ಮತ್ತು ವಿಧಾನಸಭೆ ಚುನಾವಣೆ ಸೇರಿದಂತೆ ಅನೇಕ ಚುನಾವಣೆಗಳಲ್ಲಿ ಸ್ಪರ್ಧಿಸಿದ್ದರೂ 'ಮದುಮಗ'ನ ಕಡೆಗೆ ಅದೃಷ್ಟದೇವತೆ ನಗೆ ಬೀರಿಲ್ಲ ಎಂಬ ಬೇಸರವಿದೆ.

'ಹಣದ ಸಹಾಯದಿಂದ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂದು ನಾಯಕರುಗಳಿಗೆ ಹೇಳಲು ಬಯಸುತ್ತೇನೆ. ಶಹಜಾನ್‌ಪುರದ ಜನರು ನನ್ನ ಜತೆ ಇದ್ದಾರೆ. ಈ ಚುನಾವಣೆಯಲ್ಲಿ ನಾನು ಜಯಭೇರಿ ಭಾರಿಸಲಿದ್ದೇನೆ' ಎಂದು ವಿಶ್ವಾಸದಿಂದ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+