'ಎಸ್‌ಪಿ ನಾಯಕರಿಗೆ ನಿದ್ದೆ ಮಾಡಿದಾಗೆಲ್ಲಾ ಅಧಿಕಾರದ ಕನಸು' ಎಂದ ಪ್ರಧಾನಿ
ಉನ್ನಾವೋ, ಫೆಬ್ರವರಿ 20: ಉತ್ತರ ಪ್ರದೇಶದಲ್ಲಿ ಮೂರನೇ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿದೆ. ಈ ನಡುವೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. "ಮೊದಲ ಎರಡು ಹಂತಗಳಲ್ಲಿ ಸೋತ ನಂತರವೂ, ಈ ಜನರು (ಸಮಾಜವಾದಿ ಪಕ್ಷದ ನಾಯಕರು) ಮಲಗಿದಾಗಲೆಲ್ಲಾ ಅವರು ಅಧಿಕಾರಕ್ಕೆ ಬರುವ ಕನಸುಗಳನ್ನು ಕಾಣುತ್ತಾರೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
"ಮೊದಲ ಎರಡು ಹಂತಗಳಲ್ಲಿ ಸೋತ ನಂತರವೂ, ಸಮಾಜವಾದಿ ಪಕ್ಷದ ನಾಯಕರು ಮಲಗಿದಾಗಲೆಲ್ಲಾ ಅವರು ಅಧಿಕಾರಕ್ಕೆ ಬರುವ ಕನಸುಗಳನ್ನು ನೋಡುತ್ತಾರೆ. 2017 ರಲ್ಲಿ ಅವರನ್ನು ಸೋಲಿಸಲಾಯಿತು, 2022 ರಲ್ಲಿ ಅವರನ್ನು ಸೋಲಿಸಲಾಗುತ್ತದೆ. ಯುಪಿಯಲ್ಲಿ ಜನರು ಯೋಗಿಯನ್ನು ಮರಳಿ ಕರೆತರುತ್ತಾರೆ," ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉನ್ನಾವೊದಲ್ಲಿ ತಿಳಿಸಿದ್ದಾರೆ.
ಎಸ್‌ಪಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, "ಎಸ್‌ಪಿ ಅತ್ಯಂತ ಸುರಕ್ಷಿತ ಎಂದು ಪರಿಗಣಿಸುತ್ತಿದ್ದ ಸ್ಥಾನವು ಅವರ ಕೈ ತಪ್ಪುತ್ತಿದೆ. ನೀವು ನೋಡಿರಬೇಕು, ವೇದಿಕೆಯಿಂದ ತಳ್ಳಲ್ಪಟ್ಟ (ಚುನಾವಣೆಯೊಂದ ಹೊರಕ್ಕೆ) ತಂದೆ (ಮುಲಾಯಂ ಎಸ್ ಯಾದವ್) ಅವರನ್ನು ಅವಮಾನಿಸಲಾಯಿತು. ಅವರ ಪಕ್ಷವನ್ನು ವಶಪಡಿಸಿಕೊಳ್ಳಲಾಯಿತು. ಅವರ ಮಗನ ಸ್ಥಾನವನ್ನು ಉಳಿಸಲು ಮನವಿ ಮಾಡಬೇಕಾಯಿತು," ಎಂದು ಕೂಡಾ ಟೀಕೆ ಮಾಡಿದ್ದಾರೆ.

"ಅವರು (ಸಮಾಜವಾದಿ ಪಕ್ಷ) ಯುಪಿಯ ಅಂತಹ ಚಿತ್ರವನ್ನು ಇಲ್ಲಿ ಬದಲಾಯಿಸಲು ಸಾಧ್ಯವಿಲ್ಲ. ಯೋಗಿ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಸುಧಾರಣೆ ತೋರಿಸಿದೆ. ರಾಜ್ಯದಲ್ಲಿ ಭದ್ರತೆ, ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ತಂದ ಯೋಗಿ ಜಿ ಅವರನ್ನು ಯುಪಿ ಮರಳಿ ಅಧಿಕಾರಕ್ಕೆ ತರುತ್ತದೆ," ಎಂದು ಕೂಡಾ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.
ಚನ್ನಿ ಹೇಳಿಕೆ ವಿರೋಧಿಸಿದ ಎಸ್‌ಪಿ ವಿರುದ್ಧ ಮೋದಿ ವಾಗ್ದಾಳಿ
"ಕೆಲ ದಿನಗಳ ಹಿಂದೆ ಚುನಾವಣೆಯಲ್ಲಿ ಮತ ಪಡೆಯುವ ಉದ್ದೇಶದಿಂದ ಉತ್ತರ ಪ್ರದೇಶದ ಬಡವರು, ದಲಿತರು, ಹಿಂದುಳಿದವರನ್ನು ಪಂಜಾಬ್ ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರು ನಿಂದಿಸಿದ್ದರು. ಆದರೆ ಇಲ್ಲಿನ ಸಮಾಜವಾದಿ ಪಕ್ಷ ಒಮ್ಮೆಯೂ ವಿರೋಧಿಸಲಿಲ್ಲ," ಎಂದು ಆರೋಪ ಕೂಡಾ ಮಾಡಿದ್ದಾರೆ.
ಉತ್ತರಪ್ರದೇಶದ ಹರ್ದೋಯಿಯಲ್ಲಿ ಪ್ರಧಾನಿ ನರೇಂದ್ರ ಮೋದಿ
"ಅಹಮದಾಬಾದ್ ಸ್ಫೋಟದ ಉಗ್ರರಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ದೇಶದ ಮುಂದೆ ವಿಷಯವನ್ನು ಪ್ರಸ್ತಾಪಿಸುತ್ತಿದ್ದೇನೆ. ಇಂತಹ ಭಯೋತ್ಪಾದಕರನ್ನು ಬೆಂಬಲಿಸುವ ಕೆಲವು ರಾಜಕೀಯ ಪಕ್ಷಗಳೂ ಇವೆ. ಈ ಜನರು ತಮ್ಮ ಸ್ವಾರ್ಥಕ್ಕಾಗಿ ದೇಶವನ್ನೇ ಪಣಕ್ಕಿಟ್ಟಿದ್ದಾರೆ," ಎಂದು ಇದಕ್ಕೂ ಮುನ್ನ ಉತ್ತರಪ್ರದೇಶದ ಹರ್ದೋಯಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. (ಒನ್‌ಇಂಡಿಯಾ ಸುದ್ದಿ)
-
By Election: ಸಿದ್ದರಾಮಯ್ಯರಿಂದ ಅಹಿಂದ ಜೊತೆಗೆ ಗುತ್ತಿಗೆ ರಾಜಕಾರಣ: ಮಾಜಿ ಸಿಎಂ ಗಡುಗು -
ಸೋಷಿಯಲ್ ಮೀಡಿಯಾಗೆ ವಯೋಮಿತಿ ಫಿಕ್ಸ್?: ಕಠಿಣ 'ಎಐ' ಕಾನೂನು ಜಾರಿಗೆ ಸಂಸದೀಯ ಸಮಿತಿ ಶಿಫಾರಸು -
IPL Tickets: ನಾವು ವಿಐಪಿಗಳು; 5 ಫ್ರೀ ಟಿಕೆಟ್ ಕೊಡಲಿ: ಕಾಂಗ್ರೆಸ್ ಶಾಸಕ ವಿಜಯಾನಂದ ಕಾಶಪ್ಪನವರ್ -
ದಾವಣಗೆರೆ ಉಪಚುನಾವಣೆ: ಕಣದಿಂದ ಹಿಂದೆ ಸರಿದ ಬಂಡಾಯ ಅಭ್ಯರ್ಥಿ ಸಾದಿಕ್ ಪೈಲ್ವಾನ್, ಕಾಂಗ್ರೆಸ್ ಬೆಂಬಲಕ್ಕೆ ನಿರ್ಧಾರ -
Price Hike: ಕೇಂದ್ರದಿಂದ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ ಹೇಳಿಕೆ, ದರ ಹೆಚ್ಚಿಸಿದ್ದೇ ಕಾಂಗ್ರೆಸ್; ಡಿಕೆಶಿಗೆ ತಿರುಗೇಟು -
Gen Z ಪ್ರತಿಭಟನೆಯಲ್ಲಿ 'ಪಾತ್ರ': ಬಲೆನ್ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ನೇಪಾಳ ಮಾಜಿ ಪ್ರಧಾನಿ ಕೆಪಿ ಶರ್ಮಾ ಒಲಿ ಬಂಧನ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
Viral Video: 11 ವರ್ಷದ ಬಾಲಕನಿಂದ ಯಶಸ್ವಿ ವಿಮಾನ ಲ್ಯಾಂಡಿಂಗ್; ನೆಟ್ಟಿಗರ ಮನಗೆದ್ದ ಈ ಪುಟ್ಟ ಪೋರ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ












Click it and Unblock the Notifications