ಯುಪಿ ಪರಿಷತ್ ಚುನಾವಣೆಯಲ್ಲಿ 36ರ ಪೈಕಿ 33 ಸ್ಥಾನಗಳನ್ನು ಗೆದ್ದಕೊಂಡ ಬಿಜೆಪಿ

ಲಕ್ನೋ, ಏಪ್ರಿಲ್ 13: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಭಾರತೀಯ ಜನತಾ ಪಕ್ಷವು ಮೇಲ್ಮನೆಯಲ್ಲೂ ಮುನ್ನಡೆ ಕಾಯ್ದುಕೊಂಡಿದೆ. ಕಳೆದ ವಾರ ರಾಜ್ಯದ ವಿಧಾನ ಪರಿಷತ್ತಿಗೆ ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ 27 ಕ್ಷೇತ್ರಗಳ ಪೈಕಿ 22 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಇದರ ಜೊತೆಗೆ ರಾಜ್ಯದ ಮೇಲ್ಮನೆಗೆ ನಡೆದ ಈ ದ್ವೈವಾರ್ಷಿಕ ಚುನಾವಣೆಗಳಲ್ಲಿ 36 ಕ್ಷೇತ್ರಗಳ ಪೈಕಿ ಒಂಬತ್ತರಲ್ಲಿ ಬಿಜೆಪಿ ಸದಸ್ಯರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಆ ಮೂಲಕ 100 ಸದಸ್ಯ ಬಲದ ಸದನದಲ್ಲಿ ಬಿಜೆಪಿಯು ಅರ್ಥಕ್ಕಿಂತ ಹೆಚ್ಚು ಸ್ಥಾನಗಳನ್ನು ಹೊಂದುವಂತೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಲೋಕಸಭಾ ಕ್ಷೇತ್ರವಾದ ವಾರಣಾಸಿಯಲ್ಲಿ ಹಿನ್ನಡೆ ಅನುಭವಿಸಿದ್ದು, ಅಲ್ಲಿ ಬಿಜೆಪಿಯು ಮೂರನೇ ಸ್ಥಾನದಲ್ಲಿದೆ ಕಾಣಿಸಿಕೊಂಡಿದೆ. ರಾಜ್ಯದ ಪ್ರಮುಖ ಪ್ರತಿಪಕ್ಷವಾದ ಸಮಾಜವಾದಿ ಪಕ್ಷ ಹೀನಾಯವಾಗಿ ಸೋತಿದ್ದು, ಸ್ಥಳೀಯ ಆಡಳಿತ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಇಬ್ಬರು ಸ್ವತಂತ್ರ ಅಭ್ಯರ್ಥಿಗಳು ಮತ್ತು ಜನಸತ್ತಾ ದಳ (ಲೋಕತಾಂತ್ರಿಕ) ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

 Uttar Pradesh MLC Election: BJP claims 33 of 36 seats in resounding victory, SP comes up Zero

ಮೇಲ್ಮನೆಯಲ್ಲಿ 34 ಸ್ಥಾನಗಳನ್ನು ಹೊಂದಿದ್ದ ಬಿಜೆಪಿ:

ವಾರಣಾಸಿಯಲ್ಲಿ ಬಿಜೆಪಿಯ ಸುದಾಮ ಪಟೇಲ್ ಕೇವಲ 170 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರೆ, ಸ್ವತಂತ್ರ ಅಭ್ಯರ್ಥಿ ಅನ್ನಪೂರ್ಣ ಸಿಂಗ್ 4,234 ಮತಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ.

ಸಮಾಜವಾದಿ ಪಕ್ಷದ ಉಮೇಶ್ ಯಾದವ್ 345 ಮತಗಳನ್ನು ಪಡೆದಿದ್ದಾರೆ ಎಂದು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೌಶಲ್ ರಾಜ್ ಶರ್ಮಾ ತಿಳಿಸಿದ್ದಾರೆ. ಮತದಾನಕ್ಕೂ ಮುನ್ನ ಸದನದಲ್ಲಿ ಬಿಜೆಪಿ 34 ಸದಸ್ಯರನ್ನು ಹೊಂದಿತ್ತು. "2016 ರಲ್ಲಿ ನಡೆದ ಕೊನೆಯ ಚುನಾವಣೆಯಲ್ಲಿ ಬಿಜೆಪಿ ಯಾವುದೇ ಸ್ಥಾನಗಳನ್ನು ಗೆದ್ದಿರಲಿಲ್ಲ, ಅದು ಈ ಬಾರಿ ಚುನಾವಣೆಗೆ ಆಗಿಲ್ಲ," ಎಂದು ಯುಪಿ ಸಚಿವ ಜೆಪಿಎಸ್ ರಾಥೋಡ್ ಪಿಟಿಐಗೆ ತಿಳಿಸಿದ್ದಾರೆ.

 Uttar Pradesh MLC Election: BJP claims 33 of 36 seats in resounding victory, SP comes up Zero

ಗೆದ್ದ ಬಿಜೆಪಿ ಅಭ್ಯರ್ಥಿಗಳಿಗೆ ಯೋಗಿ ಅಭಿನಂನಂದನೆ:

ರಾಜ್ಯ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಭರ್ಜರಿ ಗೆಲುವು ರಾಜ್ಯದ ಜನರು ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದಿಸಿದರು.

ಆಡಳಿತಾರೂಢ ಬಿಜೆಪಿ ಮೊರಾದಾಬಾದ್-ಬಿಜ್ನೋರ್, ರಾಂಪುರ-ಬರೇಲಿ, ಪಿಲಿಭಿತ್-ಶಹಜಹಾನ್‌ಪುರ್, ಸೀತಾಪುರ್, ಲಕ್ನೋ-ಉನ್ನಾವ್, ರಾಯ್ ಬರೇಲಿ, ಸುಲ್ತಾನ್‌ಪುರ, ಬಾರಾಬಂಕಿ, ಬಹ್ರೈಚ್, ಗೊಂಡಾ, ಫೈಜಾಬಾದ್, ಬಸ್ತಿ-ಸಿದ್ದಾರ್ಥನಗರ, ಗೋರಖ್‌ಪುರ-ಮಹಾರಾಜ್‌ಗಂಜ್, ಡಿಯೋರಿಯಾಪುರ, ಬ್ಜಾಲ್ ಅಲಹಾಬಾದ್, ಝಾನ್ಸಿ-ಜಲೌನ್-ಲಲಿತ್‌ಪುರ್, ಇಟಾವಾ-ಫರೂಕಾಬಾದ್, ಮೀರತ್-ಘಾಜಿಯಾಬಾದ್, ಆಗ್ರಾ-ಫಿರೋಜಾಬಾದ್ ಮತ್ತು ಮುಜಾಫರ್‌ನಗರ-ಸಹಾರನ್‌ಪುರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.

ಬಿಜೆಪಿ ಅಭ್ಯರ್ಥಿಗಳು ಸೋತಿದ್ದು ಎಲ್ಲಿ?:

ಜನಸತ್ತಾ ದಳದ (ಲೋಕತಾಂತ್ರಿಕ್) ಅಕ್ಷಯ್ ಪ್ರತಾಪ್ ಸಿಂಗ್ ಅವರು ಪ್ರತಾಪ್‌ಗಢದಲ್ಲಿ ಬಿಜೆಪಿಯ ಹರಿ ಪ್ರತಾಪ್ ಸಿಂಗ್ ಅವರನ್ನು 1,107 ಮತಗಳ ಅಂತರದಿಂದ ಸೋಲಿಸಿದರು. ಬಿಜೆಪಿಯು ಅಜಂಗಢ್-ಮೌ ಕ್ಷೇತ್ರವನ್ನು ಸ್ವತಂತ್ರ ಅಭ್ಯರ್ಥಿ ವಿಕ್ರಾಂತ್ ಸಿಂಗ್ 'ರಿಶು' ವಿರುದ್ಧ 2,813 ಮತಗಳಿಂದ ಸೋಲು ಕಂಡಿತು. ಮೊರಾದಾಬಾದ್-ಬಿಜ್ನೋರ್ ಕ್ಷೇತ್ರದಲ್ಲಿ ಬಿಜೆಪಿಯ ಸತ್ಯಪಾಲ್ ಸೈನಿ ಎಸ್‌ಪಿಯ ಅಜಯ್ ಮಲಿಕ್ ಅವರನ್ನು ಸೋಲಿಸಿದ 5,939 ಮತಗಳ ಅಂತರದ ಗೆಲುವಿನ ಅಂತರವೇ ಅತ್ಯಧಿಕ ಎನಿಸಿದೆ.

ಮಾಜಿ ಪ್ರಧಾನಿ ಚಂದ್ರಶೇಖರ್ ಮೊಮ್ಮಗನಿಗೆ ಗೆಲುವಿನ ಮಾಲೆ:

ಝಾನ್ಸಿ-ಜಲೌನ್-ಲಲಿತ್‌ಪುರ ಕ್ಷೇತ್ರದಲ್ಲಿ ಗೆಲುವಿನ ಅಂತರ ಅತ್ಯಂತ ಕಡಿಮೆಯಾಗಿದ್ದು, ಬಿಜೆಪಿಯ ರಾಮ ನಿರಂಜನ್ ಅವರು ಎಸ್‌ಪಿಯ ಶ್ಯಾಮ್ ಸುಂದರ್ ಸಿಂಗ್ ಅವರನ್ನು 579 ಮತಗಳಿಂದ ಸೋಲಿಸಿದ್ದಾರೆ. ಬಲ್ಲಿಯಾ ಕ್ಷೇತ್ರದಿಂದ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಮೊಮ್ಮಗ ಬಿಜೆಪಿಯ ರವಿಶಂಕರ್ ಸಿಂಗ್ ಪಪ್ಪು ಗೆದ್ದಿದ್ದಾರೆ, ಎಸ್‌ಪಿಯ ಅರವಿಂದ್ ಗಿರಿ ಅವರನ್ನು 1,981 ಮತಗಳಿಂದ ಸೋಲಿಸಿದ್ದಾರೆ. ಲಕ್ನೋ-ಉನ್ನಾವ್ ಕ್ಷೇತ್ರದಲ್ಲಿ ಬಿಜೆಪಿಯ ರಾಮಚಂದ್ರ ಪ್ರಧಾನ್ ಅವರು ಸುನೀಲ್ ಸಿಂಗ್ 'ಸಜನ್' ಅವರನ್ನು 3,088 ಮತಗಳಿಂದ ಸೋಲಿಸಿದ್ದಾರೆ. ಬಿಜೆಪಿಯ ಸಿಪಿ ಚಂದ್ ಅವರು ಗೋರಖ್‌ಪುರ-ಮಹಾರಾಜ್‌ಗಂಜ್ ಕ್ಷೇತ್ರದಲ್ಲಿ ಎಸ್‌ಪಿಯ ರಜನೀಶ್ ಯಾದವ್ ಅವರನ್ನು 4,432 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಅದೇ ರೀತಿ ಅಲಹಾಬಾದ್ ನಲ್ಲಿ ಬಿಜೆಪಿಯ ಕೆಪಿ ಶ್ರೀವಾಸ್ತವ್ ಎಸ್‌ಪಿಯ ವಾಸುದೇವ್ ಯಾದವ್ ಅವರನ್ನು 1,658 ಮತಗಳಿಂದ ಸೋಲಿಸಿದ್ದಾರೆ. ಬಾರಾಬಂಕಿಯಲ್ಲಿ ಬಿಜೆಪಿಯ ಅಂಗದ್ ಸಿಂಗ್ ಅವರು ಎಸ್‌ಪಿಯ ರಾಜೇಶ್ ಕುಮಾರ್ ಯಾದವ್ ಅವರನ್ನು 1,745 ಮತಗಳಿಂದ ಸೋಲಿಸಿದರು. ಸೀತಾಪುರದಲ್ಲಿ ಬಿಜೆಪಿಯ ಪವನ್ ಕುಮಾರ್ ಸಿಂಗ್ ಸಮಾಜವಾದಿ ಪಕ್ಷದ (ಎಸ್‌ಪಿ) ಅರುಣೇಶ್ ಯಾದವ್ ಅವರನ್ನು 3,692 ಮತಗಳಿಂದ ಸೋಲಿಸಿದರೆ, ಬಸ್ತಿಯಲ್ಲಿ ಬಿಜೆಪಿ ನಾಯಕ ಸುಭಾಸ್ ಯದುವಂಶ್ ಎಸ್‌ಪಿಯ ಸಂತೋಷ್ ಯಾದವ್ ಅವರನ್ನು 4,294 ಮತಗಳಿಂದ ಸೋಲಿಸಿದ್ದಾರೆ.

ಫೈಜಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಹರಿ ಓಂ ಪಾಂಡೆ ಅವರು ಎಸ್‌ಪಿಯ ಹೀರಾಲಾಲ್ ಯಾದವ್ ಅವರನ್ನು 1,680 ಮತಗಳಿಂದ ಸೋಲಿಸಿದರು. 95 ಅಭ್ಯರ್ಥಿಗಳು ಕಣದಲ್ಲಿದ್ದು, 739 ಕೇಂದ್ರಗಳಲ್ಲಿ ಮತದಾನ ನಡೆದಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾಧಿಕಾರಿ ತಿಳಿಸಿದ್ದಾರೆ.

9 ಬಿಜೆಪಿ ಅಭ್ಯರ್ಥಿಗಳ ಅವಿರೋಧ ಆಯ್ಕೆ:

ಬದೌನ್, ಹಾರ್ದೋಯಿ, ಖೇರಿ, ಮಿರ್ಜಾಪುರ-ಸೋನ್‌ಭದ್ರ, ಬಂದಾ-ಹಮೀರ್‌ಪುರ್, ಅಲಿಗಢ್, ಬುಲಂದ್‌ಶಹರ್ ಮತ್ತು ಮಥುರಾ-ಎತಾಹ್-ಮೈನ್‌ಪುರಿ ಎಂಬ ಎಂಟು ಸ್ಥಳೀಯ ಆಡಳಿತ ಕ್ಷೇತ್ರಗಳಿಂದ ಒಂಬತ್ತು ಎಂಎಲ್‌ಸಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಮಥುರಾ-ಎತಾಹ್-ಮೈನ್‌ಪುರಿ ಕ್ಷೇತ್ರದಿಂದ ಇಬ್ಬರು ಎಂಎಲ್‌ಸಿಗಳು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ ಕ್ಷೇತ್ರಗಳಿಂದ ತಲಾ ಒಬ್ಬ ಎಂಎಲ್‌ಸಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಯುಪಿ ಪರಿಷತ್ತಿನಲ್ಲಿ 38 ಸ್ಥಾನ ಖಾಲಿ:

100 ಸದಸ್ಯರ ವಿಧಾನ ಪರಿಷತ್ತಿನಲ್ಲಿ ಬಿಜೆಪಿ 34, ಸಮಾಜವಾದಿ ಪಕ್ಷ (ಎಸ್‌ಪಿ) 17 ಮತ್ತು ಬಹುಜನ ಸಮಾಜ ಪಕ್ಷ 4 ಎಂಎಲ್‌ಸಿಗಳನ್ನು ಹೊಂದಿದೆ. ಕಾಂಗ್ರೆಸ್, ಅಪ್ನಾ ದಳ (ಸೋನೇಲಾಲ್) ಮತ್ತು ನಿಶಾದ್ ಪಕ್ಷವು ಸದನದಲ್ಲಿ ತಲಾ ಒಬ್ಬ ಸದಸ್ಯರನ್ನು ಹೊಂದಿದೆ. ಶಿಕ್ಷಕರ ಗುಂಪು ಎರಡು ಎಂಎಲ್‌ಸಿಗಳನ್ನು ಹೊಂದಿದ್ದರೆ ಸ್ವತಂತ್ರ ಗುಂಪು (ನಿರ್ದಲ್ ಸಮೂಹ್) ಮತ್ತು ಸ್ವತಂತ್ರರು ತಲಾ ಒಬ್ಬ ಎಂಎಲ್‌ಸಿಯನ್ನು ಹೊಂದಿದ್ದಾರೆ. ಸದ್ಯ 38 ಸೀಟುಗಳು ಖಾಲಿ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+