ಚಾಲೆಂಜಿಗೆಂದು 41 ಮೊಟ್ಟೆ ತಿಂದವನು, 42ನೇ ಮೊಟ್ಟೆಗೆ ಕೊನೆಯುಸಿರೆಳೆದ!
ಜೌನ್ಪುರ, ಅಕ್ಟೋಬರ್ 05: ಉತ್ತರ ಪ್ರದೇಶದ ಜೌನ್ಪುರ ಎಂಬಲ್ಲಿ ನಡೆದ ವಿಚಿತ್ರ ಘಟನೆಯಲ್ಲಿ ಚಾಲೆಂಜ್ ಮಾಡಿಕೊಂಡು 41 ಮೊಟ್ಟೆ ತಿಂದ ವ್ಯಕ್ತಿಯೊಬ್ಬ 42 ನೇ ಮೊಟ್ಟೆ ತಿನ್ನುವ ಸಮಯದಲ್ಲಿ ಕೊನೆಯುಸಿರೆಳೆದ ಘಟನೆ ನಡೆದಿದೆ.
ಇಬ್ಬರು ವ್ಯಕ್ತಿಗಳ ನಡುವೆ ಜೌನ್ಪುರದ ಮಾರುಕಟ್ಟೆಯಲ್ಲಿ ಯಾವುದೋ ಕ್ಷುಲ್ಲಕ ವಿಷಯಕ್ಕಾಗಿ ಜಗಳ ಆರಂಭವಾಗಿತ್ತು. ನಂತರ ಇಬ್ಬರು ಒಂದು ಒಪ್ಪಂದಕ್ಕೆ ಬಂದರು. ನಮ್ಮಿಬ್ಬರಲ್ಲಿ ಯಾರು ಗೆದ್ದರು ಎಂಬುದನ್ನು ತಿಳಿಯುವುದಕ್ಕೆ ಇಬ್ಬರೂ ಒಂದು ಚಾಲೆಂಜ್ ಸ್ವೀಕರಿಸಬೇಕು. ಇಬ್ಬರು 50 ಮೊಟ್ಟೆಗಳನ್ನು ತಿನ್ನಬೇಕು. ಯಾರು ಈ ಚಾಲೆಂಜ್ ನಲ್ಲಿ ಗೆಲ್ಲುತ್ತಾರೋ, ಯಾರು 50 ಕ್ಕಿಂತ ಹೆಚ್ಚು ಮೊಟ್ಟೆಗಳನ್ನು ತಿನ್ನುತ್ತಾರೋ ಅವರಿಗೆ 2000 ರೂಪಾಯಿ ಬಹುಮಾನ ಎನ್ನಲಾಗಿತ್ತು.

ಸುಭಾಶ್ ಯಾದವ್(42) ಎಂಬ ವ್ಯಕ್ತಿ, ಚಾಲೆಂಜ್ ನಲ್ಲಿ ಗೆಲ್ಲುವುದಕ್ಕಾಗಿ 41 ಮೊಟ್ಟೆಗಳನ್ನು ಒಂದೇ ಬಾರಿ ತಿಂದಿದ್ದರು. ಆದರೆ 42 ನೇ ಮೊಟ್ಟೆ ತಿನ್ನುವ ಸಮಯದಲ್ಲಿ ಹಾಗೇ ಕುಸಿದುಬಿದ್ದು ಮೂರ್ಛೆ ಹೋದ ಆತ ಅಸುನೀಗಿದ್ದ.












Click it and Unblock the Notifications