ಯುಪಿ ಸರ್ಕಾರದ ಟ್ವಿಟರ್ ಹ್ಯಾಕ್: 30ಕ್ಕೂ ಹೆಚ್ಚು ನಕಲಿ ಟ್ವೀಟ್, ಡಿಪಿ ಚೇಂಜ್
ಲಕ್ನೋ ಏಪ್ರಿಲ್ 11: ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಖಾತೆ ಹ್ಯಾಕ್ ಆದ ಮೂರು ದಿನಗಳ ನಂತರ ಇದೀಗ ಯುಪಿ ಸರ್ಕಾರದ ಅಧಿಕೃತ ಟ್ವಿಟರ್ ಹ್ಯಾಂಡಲ್ ಕೂಡ ಹ್ಯಾಕ್ ಆಗಿದೆ. ಹ್ಯಾಕ್ ಆದ ಕೆಲವೇ ಸಮಯದಲ್ಲಿ 30 ಕ್ಕೂ ಹೆಚ್ಚು ನಕಲಿ ಟ್ವೀಟ್‌ಗಳನ್ನು ಸಹ ಮಾಡಲಾಗಿದೆ. ಹ್ಯಾಕರ್‌ಗಳು ಟ್ವಿಟರ್ ಖಾತೆಯ ಡಿಪಿಯನ್ನು ಕಾರ್ಟೂನ್‌ಗೆ ಬದಲಾಯಿಸಿದ್ದಾರೆ. ಜೊತೆಗೆ ಖಾತೆಯನ್ನೂ ಮರುಸ್ಥಾಪಿಸಲಾಗಿದೆ. ಸಿಎಂ ಕಚೇರಿ ಬಳಿಕ ಇದೀಗ ಯುಪಿ ಸರ್ಕಾರದ ಟ್ವಿಟರ್ ಖಾತೆ ಹ್ಯಾಕ್ ಆಗಿರುವ ಕಾರಣ ಅಧಿಕಾರಿಗಳಲ್ಲಿ ಸಂಚಲನ ಮೂಡಿದೆ.
ಸಿಎಂ ಕಚೇರಿಯ ಟ್ವಿಟರ್ ಖಾತೆ ಹ್ಯಾಕಿಂಗ್ ಪ್ರಕರಣದ ತನಿಖೆ ನಡೆಯುತ್ತಲೇ ಇದ್ದು, ಇದರ ಹಿಂದೆ ಯಾರಿದ್ದಾರೆನ್ನುವ ಬಗ್ಗೆ ಪತ್ತೆ ಕಾರ್ಯ ನಡೆಯುತ್ತದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಚೇರಿ @CMOfficeUP ನ ಅಧಿಕೃತ ಟ್ವಿಟರ್ ಹ್ಯಾಂಡಲ್ ಅನ್ನು ಶನಿವಾರ ರಾತ್ರಿ 12.43 ಕ್ಕೆ ಹ್ಯಾಕ್ ಮಾಡಲಾಗಿತ್ತು. ಹ್ಯಾಕರ್ ಸುಮಾರು 15 ನಿಮಿಷಗಳಲ್ಲಿ 500 ಕ್ಕೂ ಹೆಚ್ಚು ಟ್ವೀಟ್‌ಗಳನ್ನು ಮಾಡಿದ್ದಾರೆ. ಅಲ್ಲದೇ ಸುಮಾರು 5 ಸಾವಿರ ಜನರನ್ನು ಟ್ಯಾಗ್ ಮಾಡಿದ್ದಾರೆ.
ಹ್ಯಾಕಿಂಗ್ ನಂತರ, CMO ನ ಟ್ವಿಟರ್ ಹ್ಯಾಂಡಲ್‌ನ ಸ್ಕ್ರೀನ್‌ಶಾಟ್‌ಗಳನ್ನು ಹಲವಾರು ವೆಬ್‌ಸೈಟ್‌ಗಳು ಹಂಚಿಕೊಂಡವು. ಮಾಹಿತಿ ಬಂದ ತಕ್ಷಣ ಸಿಎಂ ಕಚೇರಿಯ ಸಾಮಾಜಿಕ ಜಾಲತಾಣ ತಂಡ ಸಕ್ರಿಯಗೊಂಡು ರಾತ್ರಿ ಒಂದು ಗಂಟೆ ಸುಮಾರಿಗೆ ಮತ್ತೊಮ್ಮೆ ಈ ಹ್ಯಾಂಡಲ್ ಅನ್ನು ಮರುಸ್ಥಾಪಿಸಿತು.

ಸೈಬರ್ ತಜ್ಞರು ಇಡೀ ವಿಷಯವನ್ನು ತನಿಖೆ ನಡೆಸುತ್ತಿದ್ದಾರೆ ಎಂದು ಯುಪಿ ಸರ್ಕಾರ ಹೇಳಿಕೆ ನೀಡಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಐಟಿ ಕಾಯ್ದೆಯಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಡಿಜಿಪಿ ಕಚೇರಿಯ ಸೈಬರ್ ತಂಡ ಇಡೀ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ಹೇಳಿದೆ.

ಯುಪಿ ಸಿಎಂ ಕಚೇರಿಯ ಟ್ವಿಟರ್ ಹ್ಯಾಂಡಲ್‌ನಿಂದ ಹ್ಯಾಕರ್, 'ಟ್ವಿಟರ್‌ನಲ್ಲಿ ನಿಮ್ಮ BAYC/MAYC ಅನಿಮೇಟೆಡ್ ಅನ್ನು ಹೇಗೆ ತಿರುಗಿಸುವುದು' ಎಂಬ ಟ್ಯುಟೋರಿಯಲ್ ಅನ್ನು ಪೋಸ್ಟ್ ಮಾಡಿದ್ದಾರೆ ಮತ್ತು ಪ್ರೊಫೈಲ್ ಚಿತ್ರವನ್ನು ಸಹ ಬದಲಾಯಿಸಿದ್ದಾರೆ. ಹ್ಯಾಕರ್‌ಗಳು ಪೋಸ್ಟ್ ಮಾಡಿದ ಪ್ರೊಫೈಲ್ ಚಿತ್ರವು ಬೋರ್ಡ್ ಏಪ್ ಯಾಚ್ ಕ್ಲಬ್ ಎನ್‌ಎಫ್‌ಟಿಯನ್ನು ಹೋಲುತ್ತದೆ. ಯುಪಿ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಿದ 30 ನಿಮಿಷಗಳ ನಂತರ ಮರುಪಡೆಯಲಾಗಿದೆ.

UP CMO (@CMOfficeUP) Twitter ಖಾತೆಯು ನಾಲ್ಕು ಮಿಲಿಯನ್ ಅನುಯಾಯಿಗಳನ್ನು ಹೊಂದಿದೆ. ಕಳೆದ ಎರಡು ದಿನಗಳಲ್ಲಿ ಐಎಂಡಿ (ಭಾರತೀಯ ಹವಾಮಾನ ಇಲಾಖೆ) ಮತ್ತು ಯುಜಿಸಿ (ವಿಶ್ವವಿದ್ಯಾಲಯ ಅನುದಾನ ಆಯೋಗ) ಖಾತೆಗಳನ್ನೂ ಹ್ಯಾಕ್ ಮಾಡಲಾಗಿದೆ.UGC ಖಾತೆಯು 2,96,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರೆ, IMD ಖಾತೆಯು 246,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.

ಈ ಖಾತೆಗಳನ್ನು ಯಾರು ಹ್ಯಾಕ್ ಮಾಡಿದ್ದಾರೆ ಎಂಬುದು ಇನ್ನೂ ದೃಢಪಟ್ಟಿಲ್ಲ. ಮಾತ್ರವಲ್ಲದೇ ಪಂಜಾಬ್ ಕಾಂಗ್ರೆಸ್ ಟ್ವಿಟ್ಟರ್ ಖಾತೆಯು ಕೂಡ ಒಂದು ಗಂಟೆಗೂ ಹೆಚ್ಚು ಕಾಲ ಹ್ಯಾಕ್ ಮಾಡಲಾಗಿತ್ತು ಎನ್ನಲಾಗಿದೆ.
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications