ತಂದೆಯನ್ನು ಕೊಂದು ಸಾಕ್ಷ್ಯ ಮುಚ್ಚಿಹಾಕಲು ಅಪ್ರಾಪ್ತ ಬಾಲಕ ಮಾಡಿದ್ದೇನು?
ಲಕ್ನೋ, ಅಕ್ಟೋಬರ್ 30: ಕ್ರೈಂ ಶೋಗಳಿಂದ ಸ್ಫೂರ್ತಿ ಪಡೆದು ಅಪ್ರಾಪ್ತ ಬಾಲಕನೊಬ್ಬ ತಂದೆಯನ್ನು ಹತ್ಯೆ ಮಾಡಿದ್ದಲ್ಲದೆ ಸಾಕ್ಷ್ಯವನ್ನು ನಾಶಮಾಡಲು ಇನ್ನೂ ಹಲವು ಕ್ರೈಂ ಶೋಗಳನ್ನು ವೀಕ್ಷಿಸಿದ್ದ.
ಮಥುರಾದಲ್ಲಿ ನಡೆದ ಘಟನೆ ಇದಾಗಿದ್ದು, ಮೇ ತಿಂಗಳಲ್ಲಿ ನಡೆದ ಘಟನೆ ಈಗ ಬೆಳಕಿಗೆ ಬಂದಿದೆ.ಮನೋಜ್ ಮಿಶ್ರಾ ಕೊಲೆಯಾದವರು,ಅವರು ತುಂಬಾ ಕೋಪದ ಸ್ವಭಾವ ಹೊಂದಿದ್ದರು, ಕೋಪದಲ್ಲಿ ಮಗಳಿಗೆ ಹೊಡೆಯುತ್ತಿದ್ದರು.
ಅದನ್ನು ಸಹಿಸಲಾಗದೆ ಅವರ ಪುತ್ರ ಕಬ್ಬಿಣದ ರಾಡ್‌ನಿಂದ ತಲೆಗೆ ಹೊಡೆದಿದ್ದ, ಬಳಿಕ ಸಾಯದಿದ್ದಾಗ ತಾಯಿಯ ಸಹಾಯದಿಂದ ಮತ್ತು ಸಾಕ್ಷ್ಯ ನಾಶಮಾಡುವ ಉದ್ದೇಶದಿಂದ ಗುರುತು ಸಿಗದ ಹಾಗೆ ಬಟ್ಟೆಯಿಂದ ಕತ್ತು ಹಿಸುಕಿ ಕೊಲೆ ಮಾಡಿ, ಬೈಕಿನಲ್ಲಿ ತೆಗೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಸುಟ್ಟು ಹಾಕಿದ್ದರು.

ಅದು ಆತ್ಮಹತ್ಯೆ ಎಂದು ಬಿಂಬಿಸಲು ಚಪ್ಪಲಿ, ಕನ್ನಡಕವನ್ನು ಅಲ್ಲಿಯೇ ಇಟ್ಟಿದ್ದ, ಮೇ 31ರವರೆಗೂ ಕುಟುಂಬದವರು ನಾಪತ್ತೆಯಾಗಿರುವ ಕುರಿತು ದೂರು ನೀಡಿರಲಿಲ್ಲ.
ವೈಷ್ಣೋ ಧಾಮ್ ಬಳಿ ಮೃತದೇಹವೊಂದು ದೊರೆತಿತ್ತು ಅದಾದ ಬಳಿಕ ಅಪ್ರಾಪ್ತ ಬಾಲಕ ಮತ್ತು ಆತನ ತಾಯಿಯನ್ನು ಪದೇ ಪದೇ ಪ್ರಶ್ನಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾರೆ.
ಅಪ್ರಾಪ್ತ ಬಾಲಕ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತಹ ವಿಡಿಯೋವನ್ನು 100 ಬಾರಿ ವೀಕ್ಷಿಸಿದ್ದ, ಹಾಗೆಯೇ ಸಂಚು ರೂಪಿಸಿದ್ದ. ಇದೀಗ ತಾವು ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ, ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.












Click it and Unblock the Notifications