ಉ. ಪ್ರದೇಶ ವಿಧಾನಸಭೆ ಅಧಿವೇಶನ, ಶಾಸಕರಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

ಲಕ್ನೋ, ಆಗಸ್ಟ್ 19 : ಕೋವಿಡ್ ಸೋಂಕಿನ ಭೀತಿಯ ನಡುವೆಯೇ ಉತ್ತರ ಪ್ರದೇಶ ವಿಧಾನಸಭೆ ಅಧಿವೇಶನ ಗುರುವಾರದಿಂದ ಆರಂಭವಾಗಲಿದೆ. ಸದನಕ್ಕೆ ಬರುವ ಎಲ್ಲಾ ಶಾಸಕರಿಗೆ ಕೋವಿಡ್ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.

Recommended Video

      ಸಡಕ್-2 ಟ್ರೈಲರ್ ವಿಶ್ವ ದಾಖಲೆ- ಕಾರಣ ಗೊತ್ತಾ?? | Oneindia Kannada

      ಉತ್ತರ ಪ್ರದೇಶ ವಿಧಾನಸಭೆ ಕಾರ್ಯದರ್ಶಿ ಪ್ರದೀಪ್ ದುಬೆ ಈ ಕುರಿತು ಎಲ್ಲಾ ಶಾಸಕರಿಗೆ ಪತ್ರವನ್ನು ಬರೆದಿದ್ದಾರೆ. ವಿಧಾನಸಭೆಗೆ ಆಗಮಿಸುವ ಮೊದಲು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ನಿರ್ದೇಶನ ನೀಡಿದ್ದಾರೆ.

      ಶಾಸಕರು ತಮ್ಮ ಕ್ಷೇತ್ರದಲ್ಲಿಯೇ ಬೇಕಾದರೆ ಕೋವಿಡ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು. ಆದರೆ, ಆಗಸ್ಟ್ 18ರ ನಂತರ ಮಾಡಿಸಿಕೊಂಡ ಪರೀಕ್ಷೆ ವರದಿಗಳನ್ು ಮಾತ್ರ ತರಬೇಕು ಎಂದು ಸೂಚಿಸಲಾಗಿದೆ. ವಿಧಾನಸಭೆಯಲ್ಲಿಯೂ ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಲಾಗಿದೆ.

      UP Assembly Session From August 20 COVID Test Mandatory For MLAs

      ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳುವ ಎಲ್ಲಾ ಸಿಬ್ಬಂದಿಗಳಿಗೆ ಮಂಗಳವಾರ ಮತ್ತು ಬುಧವಾರ ಕೋವಿಡ್ ಪರೀಕ್ಷೆ ಮಾಡಲಾಗುತ್ತಿದೆ. ಸದನದಲ್ಲಿಯೂ ಸಾಮಾಜಿಕ ಅಂತರ ಕಾಪಾಡಲು ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಕೆಲವು ಸದಸ್ಯರಿಗೆ ಛೇಂಬರ್‌ನಲ್ಲಿ ಆಸನ ವ್ಯವಸ್ಥೆಯಾಗಿದೆ.

      65 ವರ್ಷ ಮೀರಿದ ಸದಸ್ಯರು ವರ್ಚುವಲ್ ಮೂಲಕ ಅಧಿವೇಶನದಲ್ಲಿ ಪಾಲ್ಗೊಳ್ಲು ಅವಕಾಶ ನೀಡಬೇಕು ಎಂದು ಎಂಎಲ್‌ಸಿಯೊಬ್ಬರು ವಿಧಾನಸಭೆ ಕಾರ್ಯದರ್ಶಿಗೆ ಪತ್ರವನ್ನು ಬರೆದಿದ್ದರು. ಆದರೆ, ಈ ಪತ್ರಕ್ಕೆ ಉತ್ತರ ಬಂದಿಲ್ಲ ಎಂದು ಆರೋಪಿಸಲಾಗಿದೆ.

      ಉತ್ತರ ಪ್ರದೇಶದಲ್ಲಿ ಮಂಗಳವಾರ 4,218 ಹೊಸ ಕೋವಿಡ್ ಪ್ರಕರಣ ದಾಖಲಾಗಿದೆ. ರಾಜ್ಯದಲ್ಲಿನ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1,62,432. ಇದುವರೆಗೂ ರಾಜ್ಯದಲ್ಲಿ 2,585 ಜನರು ಮೃತಪಟ್ಟಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+