ತ್ವರಿತ ಅಲರ್ಟ್ ಗಳಿಗಾಗಿ
For Daily Alerts

ಶಾಹಿ ಈದ್ಗಾ ಮಸೀದಿ ತೆರವಿಗೆ ಮಥುರಾ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ
ಮಥುರಾ, ಡಿಸೆಂಬರ್ 25: ಶ್ರೀಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿರುವ ಶಾಹಿ ಈದ್ಗಾ ಮಸೀದಿ ತೆರವಿಗೆ ಮಥುರಾ ನ್ಯಾಯಾಲಯದಲ್ಲಿ ಮತ್ತೊಂದು ಅರ್ಜಿ ಸಲ್ಲಿಸಲಾಗಿದೆ.
ಇಲ್ಲಿನ ಶ್ರೀಕಷ್ಣನ ಜನ್ಮಭೂಮಿ ಬಳಿ ಇರುವ ಮಸೀದಿಯನ್ನು ತೆರವುಗೊಳಿಸಲೇಬೇಕು ಎಂದು ಕೋರಿ ಅರ್ಜಿ ಸಲ್ಲಿಕೆಯಾಗಿದೆ.
ಮುಖ್ಯ ಅರ್ಚಕರಾದ ವಿರಾಜಮಾನ್ ಠಾಕೂರ್ ಕೇಶವ್ ದೇವ್ ಜಿ ಮಹಾರಾಜ್ ಕತ್ರ ಕೇಶವ್ ದೇವ್, ವಕೀಲರಾದ ರಾಜೇಂದ್ರ ಮಹೇಶ್ವರಿ, ಯುನೈಟೆಡ್ ಹಿಂದೂ ಫ್ರಂಟ್‌ನ ಜೇ ಭಗವಾನ್ ಗೋಯಲ್, ಧರ್ಮ ರಕ್ಷ ಸಂಘ ವೃಂದಾವನ ಅಧ್ಯಕ್ಷ ಸೌರಬ್ ಗೌರ್ ಜಂಟಿಯಾಗಿ ಅರ್ಜಿ ಸಲ್ಲಿಸಿದ್ದಾರೆ.
ಸಿವಿಲ್ ನ್ಯಾಯಾಧೀಶರಾದ ನೇಹಾ ಬಧೌರಿಯಾ ಅವರ ನ್ಯಾಯಾಲಯದಲ್ಲಿ ಈ ಅರ್ಜಿ ಸಲ್ಲಿಸಲಾಗಿದ್ದು, ಮಥುರಾ ನ್ಯಾಯಾಲಯವೊಂದರ ತೀರ್ಪಿನಂತೆ 1968ರಲ್ಲಿ ಮಾಡಿಕೊಂಡ ಸಂಧಾನವನ್ನು ಅಸಿಂಧುಗೊಳಿಸುವಂತೆ ಕೋರಲಾಗಿದೆ.
ಶ್ರೀಕೃಷ್ಣ ಜನ್ಮಭೂಮಿಯಲ್ಲಿರುವ ಮಸೀದಿಯನ್ನು ಸ್ಥಳಾಂತರಗೊಳಿಸಬೇಕು ಎನ್ನುವುದೇ ಅರ್ಜಿಯ ಪ್ರಮುಖ ಮನವಿಯಾಗಿದೆ ಎಂದು ವಕೀಲರು ತಿಳಿಸಿದ್ದಾರೆ.
Comments
English summary
A third plea has been filed in a Mathura court seeking removal of the Shahi Idgah mosque near the birthplace of Lord Krishna here.
Story first published: Friday, December 25, 2020, 22:12 [IST]