• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಯೋಧ್ಯೆ: ದುರ್ಗಾ ಪೂಜೆ ವೇಳೆ ಗುಂಡಿನ ದಾಳಿ, ಓರ್ವ ಸಾವು

|
Google Oneindia Kannada News

ಲಕ್ನೋ, ಅಕ್ಟೋಬರ್ 14: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ನಡೆಯುತ್ತಿದ್ದ ದುರ್ಗಾ ಪೂಜೆ ವೇಳೆ ಗುಂಡಿನ ದಾಳಿ ನಡೆದಿದ್ದು, ಘಟನೆಯಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ.

ದುರ್ಗಾ ಪೂಜೆ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಓರ್ವ ಮೃತಪಟ್ಟು ಮೂವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಅಯೋಧ್ಯೆಯ ಬಳಿಯ ಫೈಜಾಬಾದ್ ಕೊತ್ವಾಲಿ ಬಳಿ ನಡೆದಿದೆ.

ದುರ್ಗಾ ಪೂಜೆ 2021: ಮಹತ್ವ ಹಾಗೂ ಪೂಜಾ ವಿಧಾನದುರ್ಗಾ ಪೂಜೆ 2021: ಮಹತ್ವ ಹಾಗೂ ಪೂಜಾ ವಿಧಾನ

ಬಾಲಕಿಯರಿಗೆ ಲಕ್ನೋದಲ್ಲಿರುವ ಕೆಜಿಎಂಯು ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯುವಕನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ಸದ್ಯಕ್ಕೆ ಎರಡೂ ಬೈಕ್​ಗಳನ್ನು ಜಪ್ತಿ ಮಾಡಲಾಗಿದೆ. ಓರ್ವ ಶಂಕಿತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವೈಯಕ್ತಿಕ ದ್ವೇಷದ ಕಾರಣದಿಂದಾಗಿ ಈ ಹತ್ಯೆ ನಡೆದಿರಬಹುದು ಎಂದು ಪ್ರಾಥಮಿಕ ಮಾಹಿತಿ ಸಿಕ್ಕಿದೆ ಎಂದು ಲಖನೌ ವಲಯದ ಎಡಿಜಿ ಎಸ್​.ಎನ್​.ಸಬತ್​ ಹೇಳಿದ್ದಾರೆ. ತನಿಖೆಗಾಗಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ.

ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಮಂಜೀತ್ ಯಾದವ್ ಎಂಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆತನ ಪಕ್ಕದಲ್ಲಿ ಕುಳಿತಿದ್ದ ಇಬ್ಬರು ಬಾಲಕಿಯರು ಸೇರಿದಂತೆ ಮೂವರಿಗೆ ಗಾಯಗಳಾಗಿದೆ ಎಂದು ಅಯೋಧ್ಯೆಯ ಎಸ್​ಎಸ್​ಪಿ ಶೈಲೇಶ್ ಪಾಂಡೆ ತಿಳಿಸಿದರು.

ರಾಜ್ಯಗಳಿಗೆ ನೀಡಲಾಗಿರುವ ಮಾರ್ಗಸೂಚಿಗಳು
-ಕಂಟೈನ್‌ಮೆಂಟ್ ವಲಯಗಳೆಂದು ಗುರುತಿಸಲಾದ ಪ್ರದೇಶಗಳಲ್ಲಿ ಮತ್ತು 5%ಕ್ಕಿಂತ ಹೆಚ್ಚಿನ ದೃಢಪಟ್ಟ ಪ್ರಕರಣಗಳನ್ನು ವರದಿ ಮಾಡುವ ಜಿಲ್ಲೆಗಳಲ್ಲಿ ಯಾವುದೇ ಬೃಹತ್ ಕೂಟಗಳು ಇರುವುದಿಲ್ಲ.

-5% ಮತ್ತು ಅದಕ್ಕಿಂತ ಕಡಿಮೆ ದೃಢಪಟ್ಟ ಪ್ರಕರಣಗಳನ್ನು ಹೊಂದಿರುವ ಜಿಲ್ಲೆಗಳಲ್ಲಿ ಮುಂಗಡವಾಗಿ ಅನುಮತಿ ಪಡೆದು ಮತ್ತು ಸೀಮಿತ ಜನರು (ಸ್ಥಳೀಯ ಪರಿಸ್ಥಿತಿಯ ಪ್ರಕಾರ) ಸೇರಲು ಅನುಮತಿಸಲಾಗಿದೆ.

-ಸಾಪ್ತಾಹಿಕ ದೃಢಪಟ್ಟ ಪ್ರಕರಣಗಳ ವರದಿಗಳನ್ನು ಆಧರಿಸಿ ಸಡಿಲಿಕೆಗಳು ಮತ್ತು ನಿರ್ಬಂಧಗಳನ್ನು ವಿಧಿಸಲಾಗುವುದು.

-ಯಾವುದೇ ಮುಂಚಿನ ಎಚ್ಚರಿಕೆ ಸಂಕೇತಗಳನ್ನು ಗುರುತಿಸಲು ರಾಜ್ಯಗಳು ಪ್ರತಿದಿನ ಎಲ್ಲಾ ಜಿಲ್ಲೆಗಳ ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ನಿರ್ಬಂಧಗಳನ್ನು ಹೇರುವುದನ್ನು ಮತ್ತು ಅದಕ್ಕೆ ಅನುಗುಣವಾಗಿ ಕೋವಿಡ್ ಸೂಕ್ತ ನಡವಳಿಕೆಯನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಬೇಕು.

-ಜನರ ವೈಯುಕ್ತಿಕ ಭೇಟಿಗಳು ಮತ್ತು ಬೆರೆಯುವಿಕೆಯನ್ನು ತಪ್ಪಿಸಬೇಕು.

-"ಆನ್‌ಲೈನ್ ದರ್ಶನಗಳು" ಮತ್ತು ವಾಸ್ತವೋಪಮ ಆಚರಣೆಗಳಿಗೆ ಪ್ರೋತ್ಸಾಹ ನೀಡುವುದು.

- ಪ್ರತಿಮೆಗಳನ್ನು ಸುಡುವುದು, ದುರ್ಗಾಪೂಜೆ ಪೆಂಡಾಲ್, "ದಾಂಡಿಯಾ", "ಗರ್ಬಾಗಳು " ಮತ್ತು "ಛಟ್ ಪೂಜೆ" ಮುಂತಾದ ಎಲ್ಲಾ ಆಚರಣೆಗಳು ಸಾಂಕೇತಿಕವಾಗಿರಬೇಕು.
-ಕೂಟಗಳು/ ಮೆರವಣಿಗೆಗಳಲ್ಲಿ ಭಾಗವಹಿಸಲು ಅನುಮತಿಸಲಾದ ಜನರ ಸಂಖ್ಯೆಯ ನಿಯಂತ್ರಣ.

-ಪೂಜೆಯ ಸ್ಥಳಗಳಲ್ಲಿ ಪ್ರತ್ಯೇಕ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳು ಮತ್ತು ಸಾಮಾನ್ಯ ಪ್ರಾರ್ಥನಾ ಚಾಪೆಗಳ ಬಳಕೆ, "ಪ್ರಸಾದ" ವಿನಿಯೋಗ, ಪವಿತ್ರ ನೀರನ್ನು ಸಿಂಪಡಿಸುವುದು ಇತ್ಯಾದಿಗಳನ್ನು ತಪ್ಪಿಸಬೇಕು.

ಕೇಂದ್ರ ಸಚಿವ ಮನ್ಸುಖ್ ಮಾಂಡವೀಯ ಅವರು ಮಾತನಾಡಿ, ಹಬ್ಬಗಳು ಸಾಮಾನ್ಯವಾಗಿ ಮಂಗಳಕರ, ಸಂತೋಷ ಮತ್ತು ದೊಡ್ಡ ಕೂಟಗಳಿಗೆ ಸಮಾನಾರ್ಥಕವಾಗಿದೆ, ಕೋವಿಡ್ ಮಾರ್ಗಸೂಚಿಗಳ ಅನುಸಾರವಾಗಿ ಮಾಡದಿದ್ದರೆ ಕೋವಿಡ್19 ನಿಯಂತ್ರಣ ಹಳಿ ತಪ್ಪಬಹುದು.

"ಇದಕ್ಕಿರುವ ಪರಿಹಾರವೆಂದರೆ ಕೋವಿಡ್ ಮಾರ್ಗಸೂಚಿಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಅನುಸರಿಸುವುದು ಮತ್ತು ಲಸಿಕೆ ನೀಡುವಿಕೆಯನ್ನು ಚುರುಕುಗೊಳಿಸುವುದು" ಎಂದು ಅವರು ಹೇಳಿದರು.

ತೀವ್ರವಾದ ಕೋವಿಡ್-19 ಭಾದಿಸದವರಲ್ಲಿ 1 ನೇ ಡೋಸ್ ಪಡೆದವರ ಸಂಖ್ಯೆಯನ್ನು 96% ಎಂದು ಸೂಚಿಸಿದ ಪ್ರಯೋಗಗಳ ಫಲಿತಾಂಶಗಳನ್ನು ಅವರು ಉಲ್ಲೇಖಿಸಿದರು ಮತ್ತು ಲಸಿಕೆಯ ಎರಡೂ ಡೋಸ್‌ಗಳನ್ನು ತೆಗೆದುಕೊಂಡ ಜನರಿಗೆ ಈ ಸಂಖ್ಯೆ ಸುಮಾರು 98% ಕ್ಕೆ ಹೆಚ್ಚಾಗುತ್ತದೆ ಎಂದು ಅವರು ಗಮನಸೆಳೆದರು.

ರಾಜ್ಯಗಳಲ್ಲಿ 8 ಕೋಟಿಗಿಂತಲೂ ಹೆಚ್ಚಿನ ಬಾಕಿ ಡೋಸ್ ಗಳು ಲಭ್ಯವಿರುವುದನ್ನು ಗಮನಿಸಿದ ಅವರು, ರಾಜ್ಯಗಳು ತಮ್ಮ ಲಸಿಕೆ ನೀಡುವಿಕೆಯ ವೇಗವನ್ನು ಹೆಚ್ಚಿಸಲು ಮತ್ತು ಅದರ ಪರಿಣಾಮವಾಗಿ ಉದ್ದೇಶಿತ ಸಂಖ್ಯೆಯಲ್ಲಿ ಲಸಿಕೆ ವ್ಯಾಪ್ತಿಯನ್ನು ಹೆಚ್ಚಿಸಲು. ನಿರ್ದಿಷ್ಟವಾದ ಅಡೆತಡೆಗಳು ಯಾವುದಾದರೂ ಇದೆಯೇ ಎಂದು ವಿಚಾರಿಸಿದರು. ಅನೇಕ ರಾಜ್ಯಗಳು ನಗರ ಪ್ರದೇಶಗಳಲ್ಲಿ ಲಸಿಕೆ ನೀಡುವ ಮುಕ್ತಾಯದ ಹಂತಕ್ಕೆ ಬರುತ್ತಿವೆ ಮತ್ತು ನಗರದಲ್ಲಿ ವಲಸೆಗಾರರಿಗೆ ಪೂರೈಸುತ್ತಿವೆ.

ಅಂತೆಯೇ, ಶ್ರಮ ಮತ್ತು ಸಮಯವನ್ನ ಹೆಚ್ಚು ತೆಗೆದುಕೊಳ್ಳುವ ಕೆಲವು ದೂರವಿರುವ ಕಡೆಗಳಲ್ಲಿ ಮನೆ ಬಾಗಿಲಿಗೇ ತಲುಪಿ ಲಸಿಕೆ ನೀಡುವಿಕೆಯನ್ನು ಕೈಗೊಳ್ಳಲಾಗುತ್ತದೆ, ಅಂತಹ ಕಡೆ ಮೊದಲ ಡೋಸ್ ನೀಡುವಿಕೆಯು ಪೂರ್ಣವಾಗುವ ಹಂತಕ್ಕೆ ಬರುತ್ತಿದೆ.

ಉತ್ತರಪ್ರದೇಶದಂತಹ ರಾಜ್ಯಗಳು ಸಾಮೂಹಿಕ ಲಸಿಕೆ ನೀಡುವಿಕೆಯ ಅಭಿಯಾನವನ್ನು ಕೈಗೆತ್ತಿಕೊಳ್ಳುತ್ತಿದ್ದು, ಕೋವಾಕ್ಸಿನ್‌ನ ತುಲನಾತ್ಮಕವಾಗಿ ಸೀಮಿತ ಪೂರೈಕೆ ಮತ್ತು ಡೋಸ್ ಗಳ ನಡುವಿನ ಕಡಿಮೆ ಅವಧಿಯನ್ನು ದರ ಪ್ರತಿಬಂಧಕ ಅಂಶವಾಗಿ ತೋರಿಸಿದೆ.

ಮುಂದಿನ ಕೆಲವೇ ದಿನಗಳಲ್ಲಿ 100 ಕೋಟಿ ಗಡಿ ತಲುಪಲು ಕೊನೆಯ 6 ಕೋಟಿ ಡೋಸ್‌ಗಳನ್ನು ನೀಡಲು ರಾಜ್ಯಗಳೊಂದಿಗೆ ಸಮಾಲೋಚಿಸಿ, ಪ್ರತಿ ರಾಜ್ಯವೂ ತಮ್ಮ ಗುರಿಯನ್ನು ಹೆಚ್ಚಿಸುವಂತೆ ಸಚಿವರು ಹೇಳಿದರು.

English summary
One person was killed and two were seriously injured around 10pm on Wednesday when four youths suddenly entered a Durga Puja pandal in the Korkhana area of Uttar Pradesh’s Ayodhya and opened fire.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X