• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಉತ್ತರ ಪ್ರದೇಶ ಚುನಾವಣೆ: ಬಿಜೆಪಿಗೆ ಬೆಂಬಲ ಘೋಷಿಸಿದ 7 ಪಕ್ಷಗಳು

|
Google Oneindia Kannada News

ಲಕ್ನೋ, ಅಕ್ಟೋಬರ್‌ 28: ಈ ಹಿಂದೆ ಭಾರತೀಯ ಜನತಾ ಪಕ್ಷದೊಂದಿಗೆ ಮೈತ್ರಿ ಹೊಂದಿದ್ದ, ಸುಹೇಲ್ದೇವ್ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ಮುಂಬರುವ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದೆ. ಈ ಬೆನ್ನಲ್ಲೇ 2022 ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಏಳು ಸಣ್ಣ ಪಕ್ಷಗಳ ಗುಂಪು ಘೋಷಣೆ ಮಾಡಿದೆ.

ಬುಧವಾರ ಮೌನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಸುಹೇಲ್ದೇವ್‌ ಭಾರತೀಯ ಸಮಾಜ ಪಕ್ಷ (ಎಸ್‌ಬಿಎಸ್‌ಪಿ) ನಾಯಕರುಗಳು ವೇದಿಕಯನ್ನು ಹಂಚಿಕೊಂಡಿದ್ದಾರೆ ಹಾಗೂ 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜೊತೆಯಾಗಿ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದ್ದಾರೆ.

ಬಿಹಾರ ಎನ್‌ಡಿಎ ಮೈತ್ರಿ ಪಕ್ಷ ಯುಪಿ ಚುನಾವಣೆಯಲ್ಲಿ ಕಣಕ್ಕೆ: ಆದರೆ ಬಿಜೆಪಿಯಿಂದ ಒಂದು ಷರತ್ತುಬಿಹಾರ ಎನ್‌ಡಿಎ ಮೈತ್ರಿ ಪಕ್ಷ ಯುಪಿ ಚುನಾವಣೆಯಲ್ಲಿ ಕಣಕ್ಕೆ: ಆದರೆ ಬಿಜೆಪಿಯಿಂದ ಒಂದು ಷರತ್ತು

ಎಸ್‌ಬಿಎಸ್‌ಪಿ "ಭಾಗಿದರಿ ಸಂಕಲ್ಪ ಮೋರ್ಚಾ" ದ ಮುಖ್ಯ ಘಟಕವಾಗಿದೆ. ಸಮಾಜವಾದಿ ಪಕ್ಷವು ನವೆಂಬರ್‌ನಲ್ಲಿ ರಾಜ್ಯದಲ್ಲಿ ಎಂಟು ರ್‍ಯಾಲಿಯನ್ನು ನಡೆಸಲಿದೆ. ಈ ರ್‍ಯಾಲಿಗಳನ್ನು ಎಸ್‌ಪಿ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಎಸ್‌ಬಿಎಸ್‌ಪಿ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ಗುರುವಾರ ಬಲ್ಲಿಯಾದಲ್ಲಿ ಪಿಟಿಐಗೆ ತಿಳಿಸಿದರು.

ಈ ನಡುವೆ ಎಳು ಸಣ್ಣ ಪಕ್ಷಗಳ ಒಕ್ಕೂಟ ಹಿಸ್ಸೆದಾರಿ ಮೋರ್ಚಾ 2022 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲವನ್ನು ನೀಡುವುದಾಗಿ ಘೋಷಣೆ ಮಾಡಿದೆ ಎಂದು ಪಕ್ಷದ ಹೇಳಿಕೆಯಲ್ಲಿ ಉಲ್ಲೇಖ ಮಾಡಲಾಗಿದೆ. ಏಳು ಪಕ್ಷಗಳ ನಾಯಕರುಗಳು ಬುಧವಾರ ಬಿಜೆಪಿಗೆ ಬೆಂಬಲ ಸೂಚಿಸಿ ಬಿಜೆಪಿ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ಗೆ ಪಕ್ಷವನ್ನು ನೀಡಿದ್ದಾರೆ.

ಭಾರತೀಯ ಮಾನವ ಸಮಾಜ ಪಕ್ಷದ ಕೇವತ್ ರಾಮಧಾನಿ ಬಿಂದ್, ಮುಸಾಹರ್ ಆಂದೋಲನ ಮಂಚ್‌ನ ಚಂದ್ರ ವನವಾಸಿ ಮತ್ತು ಶೋಷಿತ್ ಸಮಾಜ ಪಕ್ಷದ ಬಾಬುಲಾಲ್ ರಾಜ್‌ಭರ್, ಮಾನವ ಹಿತ ಪಕ್ಷದ ಕೃಷ್ಣ ಗೋಪಾಲ್ ಸಿಂಗ್ ಕಶ್ಯಪ್, ಭಾರತೀಯ ಸುಹೇಲ್ದೇವ್ ಜನತಾ ಪಾರ್ಟಿಯ ಭೀಮ್ ರಾಜಭರ್, ಪೃಥ್ವಿರಾಜ್ ಜನಶಕ್ತಿ ಪಕ್ಷದ ಚಂದನ್ ಸಿಂಗ್ ಚೌಹಾಣ್ ಮತ್ತು ಭಾರತೀಯ ಸಮತಾ ಸಮಾಜ ಪಕ್ಷದ ಮಹೇಂದ್ರ ಪ್ರಜಾಪತಿ ಈ ಪತ್ರವನ್ನು ಬಿಜೆಪಿಯ ಅಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ಗೆ ನೀಡಿದ್ದಾರೆ.

2022 ರ ವಿಧಾನಸಭೆ ಚುನಾವಣೆ: ಮತಕ್ಕಾಗಿ ಯುಪಿಯಲ್ಲಿ ಹೀಗಿದೆ ಬಿಜೆಪಿಯ ಕಾರ್ಯತಂತ್ರ..2022 ರ ವಿಧಾನಸಭೆ ಚುನಾವಣೆ: ಮತಕ್ಕಾಗಿ ಯುಪಿಯಲ್ಲಿ ಹೀಗಿದೆ ಬಿಜೆಪಿಯ ಕಾರ್ಯತಂತ್ರ..

ಭಾಗಿದರಿ ಸಂಕಲ್ಪ ಮೋರ್ಚಾದಲ್ಲಿ ಏನು ನಡೆಯುತ್ತಿದೆ?

2017 ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯು ಉತ್ತರ ಪ್ರದೇಶದಲ್ಲಿ ಎಸ್‌ಬಿಎಸ್‌ಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು. ಈ ಪಕ್ಷವು ಎಂಟು ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದು, ಒಟ್ಟು ನಾಲ್ಕು ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಈ ಕಾರಣದಿಂದಾಗಿ ಓಮ್‌ ಪ್ರಕಾಶ್‌ ರಾಜ್‌ಭರ್‌ರನ್ನು ಉತ್ತರ ಪ್ರದೇಶ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಲಾಗಿದೆ. ಆದರೆ ಓಮ್‌ ಪ್ರಕಾಶ ರಾಜ್‌ಭರ್‌ 2019 ರ ಲೋಕ ಸಭೆ ಚುನಾವಣೆಗೂ ಮುನ್ನ ಎನ್‌ಡಿಎ ಕೂಟದಿಂದ ಬೇರ್ಪಟ್ಟು "ಭಾಗಿದರಿ ಸಂಕಲ್ಪ ಮೋರ್ಚಾ" ಅನ್ನು ಆರಂಭ ಮಾಡಿದ್ದಾರೆ. ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್ ಮುಸ್ಲಿಮೀನ್ (ಎಐಎಂಐಎಂ) ಮತ್ತು ಇತರ ಕೆಲವು ಸಣ್ಣ ಪಕ್ಷಗಳು ಈ ಒಕ್ಕೂಟದಲ್ಲಿ ಇದೆ.

ಈ ನಡುವೆ ಅಸಾದುದ್ದೀನ್ ಓವೈಸಿ ಈ "ಭಾಗಿದರಿ ಸಂಕಲ್ಪ ಮೋರ್ಚಾ" ದಿಂದ ಹೊರನಡೆದಿದ್ದಾರೆ ಎಂದು ವರದಿ ಆಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಓಮ್‌ ಪ್ರಕಾಶ್‌ ರಾಜ್‌ಭರ್‌, "ನಾನು ಅಸಾದುದ್ದೀನ್ ಓವೈಸಿ ಜೊತೆ ಮಾತನಾಡಿದ್ದೇವೆ. ಹೊಸ ಮೈತ್ರಿಕೂಟದಲ್ಲಿ ಇರುವಂತೆ ಒತ್ತಾಯ ಮಾಡಿದ್ದೇನೆ. ತನ್ನ ಜನರೊಂದಿಗೆ ಮಾತನಾಡುವುದಾಗಿ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ. ಆ ಬಳಿಕ ಈ ಬಗ್ಗೆ ಸರಿಯಾದ ಮಾಹಿತಿ ನೀಡುವುದಾಗಿ ಹೇಳಿದ್ದಾರೆ," ಎಂದು ತಿಳಿಸಿದ್ದಾರೆ. "ಭಾಗಿದರಿ ಸಂಕಲ್ಪ ಮೋರ್ಚಾ"ದ ಇತರ ಘಟಕಗಳಾದ ಭೀಮ್ ಆರ್ಮಿ, ಜನ ಅಧಿಕಾರ ಪಕ್ಷ, ರಾಷ್ಟ್ರೀಯ ಉದಯ್ ಪಕ್ಷ, ರಾಷ್ಟ್ರೀಯ ಉಪೇಕ್ಷಿತ ಸಮಾಜ ಪಕ್ಷ ಮತ್ತು ಜನತಾ ಕ್ರಾಂತಿ ಪಕ್ಷದ ನಾಯಕರು ಕೂಡ ಬುಧವಾರ ನಡೆದ ಎಸ್‌ಪಿ-ಎಸ್‌ಬಿಎಸ್‌ಪಿ ರ್‍ಯಾಲಿಗೆ ಹಾಜರಾಗಿಲ್ಲ.

   ಒಂದು ವರ್ಷವಾದ್ರೂ ಆರದ ದೀಪ,ಬಾಡದ ಹೂವು:ದೇವಿ ಹಾಸನಾಂಬೆ ಮಹಿಮೆ | Oneindia Kannada

   (ಒನ್ಇಂಡಿಯಾ ಸುದ್ದಿ)

   English summary
   Seven Small Parties Announce Support To BJP For 2022 UP Assembly Polls.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X