ಲೋಕಸಭಾ ಚುನಾವಣೆ: ಸಮಾಜವಾದಿ ಪಕ್ಷದಿಂದ ಮೊದಲ ಪಟ್ಟಿ ಬಿಡುಗಡೆ
ಲಕ್ನೋ, ಮಾರ್ಚ್ 08: ಮುಂಬರುವ ಲೋಕಸಭಾ ಚುನಾವಣೆ ತನ್ನ ಆರು ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಮಾಜವಾದಿ ಪಕ್ಷ ಬಿಡುಗಡೆ ಮಾಡಿದೆ.
ಈ ಪಟ್ಟಿಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರ ಹೆಸರೂ ಇದೆ. ಉತ್ತರ ಪ್ರದೇಶದ ಮೈನ್ ಪುರಿಯಿಂದ ಕ್ಷೇತ್ರದಿಂದ ಮುಲಾಯಂ ಸಿಂಗ್ ಯಾದವ್ ಸ್ಪರ್ಧಿಸಲಿದ್ದಾರೆ.
ಇಂದು ಬಿಡುಗಡೆಯಾದ ಅಭ್ಯರ್ಥಿಗಳ ಪಟ್ಟಿ
ಮುಲಾಯಂ ಸಿಂಗ್ ಯಾದವ್(ಮೈನ್ ಪುರಿ)
ಧರ್ಮೇಂದ್ರ ಯಾದವ್ (ಬದೌನ್)
ಅಕ್ಷಯ್ ಯಾದವ್(ಫಿರೀಜಾಬಾದ್)
ಕಮಲೇಶ್ ಕಠಾರಿಯಾ(ಇಟಾವಾಹ್)
ಶಬ್ಬೀರ್ ವಾಲ್ಮಿಕಿ (ಬೆಹ್ರೈಚ್)
ಭೈ ಲಾಲ್ (ರಾಬರ್ಟ್ಸ್ ಗಂಜ್)
ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳಲ್ಲಿ ಸಮಾಜವಾದಿ, ಬಹುಜನ ಸಮಾಜ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ. ಒಟ್ಟು 76 ಕ್ಷೇತ್ರಗಳಲ್ಲಿ ಈ ಎರಡೂ ಪಕ್ಷಗಳೂ ಸ್ಪರ್ಧಿಸಲಿದ್ದು, ತಲಾ 38 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿವೆ.

ಗುರುವಾರವಷ್ಟೇ ಕಾಂಗ್ರೆಸ್ ತನ್ನ್ 15 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು.












Click it and Unblock the Notifications