ಯುಪಿ: ಸಮಾಜವಾದಿ ಪಕ್ಷದ 56 ಅಭ್ಯರ್ಥಿಗಳ ಮೂರನೇ ಪಟ್ಟಿ ಪ್ರಕಟ

ಲಕ್ನೋ, ಜನವರಿ 27: ಉತ್ತರಪ್ರದೇಶ ವಿಧಾನಸಭೆಗೆ ಭಾರೀ ಸಿದ್ಧತೆ ನಡೆಸುತ್ತಿರುವ ಸಮಾಜವಾದಿ ಪಕ್ಷ ಗುರುವಾರ ತನ್ನ 56 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಘೋಷಿಸಿದೆ. ಸಮಾಜವಾದಿ ಪಕ್ಷ 403 ಸ್ಥಾನಗಳ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಇದುವರೆಗೆ 254 ಅಭ್ಯರ್ಥಿಗಳನ್ನು ಘೋಷಿಸಿದೆ.

ಹಿರಿಯ ಎಸ್‌ಪಿ ನಾಯಕ ಬೇನಿ ಪ್ರಸಾದ್ ವರ್ಮಾ ಅವರ ಪುತ್ರ ರಾಕೇಶ್ ವರ್ಮಾ ಅವರು ಕುರ್ಸಿ (ಬಾರಾಬಂಕಿ) ಕ್ಷೇತ್ರದಿಂದ ಸ್ಪರ್ಧಿಸಿದ್ದರೆ, ಮಾಜಿ ಸಚಿವ ಅರವಿಂದ್ ಸಿಂಗ್ ಗೋಪೆ ಮತ್ತು ಫರೀದ್ ಮೆಹಫೂಜ್ ಕಿದ್ವಾಯಿ ಅವರು ಕ್ರಮವಾಗಿ ಬಾರಾಬಂಕಿ ಜಿಲ್ಲೆಯ ದರಿಯಾಬಾದ್ ಮತ್ತು ರಾಮ್ ನಗರದಿಂದ ಟಿಕೆಟ್ ಪಡೆದಿದ್ದಾರೆ. ಮಾಜಿ ವಿಧಾನಸಭಾ ಸ್ಪೀಕರ್ ಮಾತಾ ಪ್ರಸಾದ್ ಪಾಂಡೆ ಎಟ್ವಾ (ಸಿದ್ಧಾರ್ಥ್ ನಗರ) ನಿಂದ ಟಿಕೆಟ್ ಪಡೆದರೆ, ಮಾಜಿ ಶಾಸಕ ಅಭಯ್ ಸಿಂಗ್ ಮತ್ತು ಮಾಜಿ ಸಚಿವ ಪರಸ್ನಾಥ್ ಯಾದವ್ ಅವರ ಪುತ್ರ ಲಕ್ನೋ ಯಾದವ್ ಅವರು ಕ್ರಮವಾಗಿ ಗೋಸೈಗಂಜ್ (ಅಯೋಧ್ಯೆ) ಮತ್ತು ಮಲ್ಹಾನಿ (ಜಾನ್‌ಪುರ್) ಸ್ಥಾನಗಳಿಂದ ಮತ್ತೊಮ್ಮೆ ಕಣಕ್ಕಿಳಿದಿದ್ದಾರೆ.

ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಮಾಜವಾದಿ ಪಕ್ಷ 159 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿತ್ತು. ಪಟ್ಟಿಯ ಪ್ರಕಾರ, ಮಾಜಿ ಮುಖ್ಯಮಂತ್ರಿ ಮತ್ತು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಕರ್ಹಾಲ್‌ನಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಮುಲಾಯಂ ಸಿಂಗ್ ಯಾದವ್ ಅವರ ಕ್ಷೇತ್ರ ಎಂದು ಪರಿಗಣಿಸಲಾದ ಮೈನ್‌ಪುರಿ ಲೋಕಸಭಾ ಕ್ಷೇತ್ರದ ಅಡಿಯಲ್ಲಿ ಬರುವ ಕರ್ಹಾಲ್ ನಿಂದ ಅಖಿಲೇಶ್ ಸ್ಪರ್ಧಿಸಲಿದ್ದಾರೆ. 2002 ಬಿಟ್ಟರೆ 1993 ರಿಂದ ಎಸ್‌ಪಿಗೆ ಇಲ್ಲಿನ ಜನ ಮತ ಚಲಾಯಿಸುತ್ತಾ ಬಂದಿದ್ದಾರೆ. ಇದಲ್ಲದೆ ಹಿರಿಯ ನಾಯಕ ಅಜಂ ಖಾನ್, ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ಮತ್ತು ಶಿವಪಾಲ್ ಸಿಂಗ್ ಯಾದವ್ ಕೂಡ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ.

Samajwadi Party Announces 56 More Candidates for UP Elections 2022
ಪಟ್ಟಿಯ ಪ್ರಕಾರ, ಸಮಾಜವಾದಿ ಪಕ್ಷವು ಸುವಾರ್‌ನಿಂದ ಅಬ್ದುಲ್ಲಾ ಅಜಂ ಖಾನ್, ತನ್ನ ಭದ್ರಕೋಟೆಯಾದ ರಾಂಪುರದಿಂದ ಅಜಂ ಖಾನ್ ಮತ್ತು ಜಸ್ವಂತ್‌ನಗರದಿಂದ ಶಿವಪಾಲ್ ಸಿಂಗ್ ಯಾದವ್ ಅವರನ್ನು ಕಣಕ್ಕಿಳಿಸಿದೆ. ಇದಲ್ಲದೆ, ಕೈರಾನಾದಿಂದ ನಹಿದ್ ಹಸನ್, ಬಬಿನಾದಿಂದ ಯಶಪಾಲ್ ಯಾದವ್ ಮತ್ತು ಝಾನ್ಸಿಯಿಂದ ಸೀತಾರಾಮ್ ಕುಶ್ವಾಹಾಗೆ ಪಕ್ಷವು ಟಿಕೆಟ್ ನೀಡಿದೆ.

ಸಮಾಜವಾದಿ ಪಕ್ಷ ಮಂಗಳವಾರ ಸಂಜೆ 39 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತು. ಎರಡನೇ ಪಟ್ಟಿಯಲ್ಲಿ ದಲಿತರು ಮತ್ತು ಮಹಿಳೆಯರಿಗೆ ಹೆಚ್ಚು ಟಿಕೆಟ್‌ಗಳನ್ನು ನೀಡಲಾಯಿತು. ಅಖಿಲೇಶ್‌ ಅವರು ಕರ್ಹಾಲ್‌ನಿಂದ ಸ್ಪರ್ಧಿಸುತ್ತಿದ್ದಾರೆ.

ಈ ಮಧ್ಯೆ, ಫೆಬ್ರವರಿ 2020 ರಿಂದ ಸೀತಾಪುರ್ ಜೈಲಿನಲ್ಲಿರುವ ಅಜಂ ಖಾನ್‌, ವಿಧಾನಸಭಾ ಚುನಾವಣೆಯಲ್ಲಿ ಪ್ರಚಾರ ಮಾಡಲು ಮಧ್ಯಂತರ ಜಾಮೀನು ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. 23 ತಿಂಗಳು ಜೈಲಿನಲ್ಲಿದ್ದು, ನಂತರ ಜಾಮೀನಿನ ಮೇಲೆ ಹೊರಗಿರುವ ಅವರ ಪುತ್ರ ಅಬ್ದುಲ್ಲಾ ಅಜಂ ಖಾನ್ ಕೂಡ ಮುಂಬರುವ ವಿಧಾನಸಭಾ ಚುನಾವಣೆಗೆ ಕಣದಲ್ಲಿದ್ದಾರೆ.

ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ಫೆಬ್ರವರಿ 10 ರಿಂದ ಏಳು ಹಂತಗಳಲ್ಲಿ ನಡೆಯಲಿದೆ. ಉತ್ತರ ಪ್ರದೇಶ ಚುನಾವಣೆಯ ಎರಡನೇ ಹಂತ ಫೆಬ್ರವರಿ 14 ರಂದು, ಮೂರನೇ ಹಂತ ಫೆಬ್ರವರಿ 20 ರಂದು, ನಾಲ್ಕನೇ ಹಂತ ಫೆಬ್ರವರಿ 23 ರಂದು, 5 ನೇ ಹಂತ ಫೆಬ್ರವರಿ 27 ರಂದು, ಮಾರ್ಚ್ 3 ಮತ್ತು 7 ರಂದು 6 ನೇ ಹಂತ ಮತ್ತು ಮಾರ್ಚ್ 7 ರಂದು ಕೊನೆಯ ಹಂತವನ್ನು ನಡೆಸಲಾಗುವುದು. ಉತ್ತರ ಪ್ರದೇಶದ 403, ಪಂಜಾಬ್‌ನ 117, ಉತ್ತರಾಖಂಡದ 70, ಮಣಿಪುರದ 60 ಮತ್ತು ಗೋವಾದ 40 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಮಾರ್ಚ್ 10 ರಂದು ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+