ಲೋಕ ಸಮರ: ವಾರಣಾಸಿಯಲ್ಲಿ ಮೋದಿಗೆ ಪ್ರಿಯಾಂಕಾ ಗಾಂಧಿ ಸವಾಲು

ಲಕ್ನೋ, ಏ.13: ವಾರಾಣಾಸಿಯಲ್ಲಿ ನರೇಂದ್ರ ಮೋದಿಗೆ ಸವಾಲೊಡ್ಡಲು ಪ್ರಿಯಾಂಕಾ ಗಾಂಧಿ ತಯಾರಾಗಿದ್ದಾರೆ ಎನ್ನುವ ಮಾಹಿತಿ ಕಾಂಗ್ರೆಸ್ ಮೂಲದಿಂದ ಲಭ್ಯವಾಗಿದೆ. ಪ್ರಿಯಾಂಕಾ ಗಾಂಧಿ ಲೋಕಸಭೆಯಲ್ಲಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನರೇಂದ್ರ ಮೋದಿಯವರ ವಿರುದ್ಧ ಸ್ಪರ್ಧಿಸಲು ಪ್ರಿಯಾಂಕಾ ಒಪ್ಪಿಗೆ ನೀಡಿದ್ದು, ಮುಂದಿನ ತೀರ್ಮಾನವನ್ನು ರಾಹುಲ್ ಗಾಂಧಿ ಅವರಿಗೆ ಬಿಡಲಾಗಿದೆ ಎನ್ನಲಾಗಿದೆ.

ಸದ್ಯದ ಮಟ್ಟಿಗೆ ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಶ್ವಮೇಧ ಕುದುರೆಯನ್ನು ಕಟ್ಟಿ ಹಾಕುವಂತಾ ಪ್ರಬಲ ಸ್ಪರ್ಧಿ ಯಾರು ಕಣದಲ್ಲಿಲ್ಲ. ಮೋದಿ ಅವರ ಗೆಲುವು ಶತಸಿದ್ಧ ಎಂದು ಹೇಳಲಾಗುತ್ತಿತ್ತು. ಇದಕ್ಕೆ ತಡೆಯೊಡ್ಡಲು ಪ್ರಿಯಾಂಕಾ ವಾದ್ರಾ ವಾರಣಾಸಿಯಿಂದಲೇ ಕಣಕ್ಕಿಳಿಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

Priyanka will contest against Narendra modi from Varanasi?

ಪ್ರಧಾನಿ ಮೋದಿ 2014 ರಲ್ಲಿ ವಾರಣಾಸಿಯಿಂದ ಲೋಕಸಭೆಗೆ ಮೊದಲ ಬಾರಿಗೆ ಆಯ್ಕೆಯಾಗಿದ್ದರು.ಕಳೆದ ಚುನಾವಣೆಯಲ್ಲಿ ವಾರಣಾಸಿಯಲ್ಲಿ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ವಿರುದ್ದ ಪ್ರಧಾನಿ ಮೋದಿ ಅವರು 5,081,043 ಮತಗಳನ್ನು ಪಡೆದು 3,71,784 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಏಪ್ರಿಲ್ 11 ರಿಂದ ಮೇ 19 ವರೆಗೆ ಉತ್ತರ ಪ್ರದೇಶವು ಏಳು ಹಂತಗಳಲ್ಲೂ ಚುನಾವಣೆ ನಡೆಯುತ್ತಿದೆ.ಮೇ 23 ರಂದು ಮತಗಳ ಎಣಿಕೆಯು ನಡೆಯಲಿದೆ.

ಕಳೆದ ಮಾರ್ಚ್ ತಿಂಗಳಲ್ಲಿ ಪ್ರಯಾಗ್ ರಾಜ್ ನಿಂದ ವಾರಣಾಸಿವರೆಗೆ ಮೂರು ದಿನಗಳ ಕಾಲ ಗಂಗಾ ಯಾತ್ರೆಯನ್ನು ಹಮ್ಮಿಕೊಂಡಿದ್ದ ಪ್ರಿಯಾಂಕಾ ಗಾಂಧಿ ಪ್ರಧಾನಿ ವಿರುದ್ಧ ಕಿಡಿ ಕಾರುತ್ತಾ ಇಡೀ ಜಗತ್ತನ್ನೇ ಸುತ್ತುವ ಮೋದಿಗೆ ವಾರಣಾಸಿ ಹಳ್ಳಿಗಳಿಗೆ ಭೇಟಿ ನೀಡಲು ಸಮಯವಿಲ್ಲ ಎಂದು ವ್ಯಂಗ್ಯವಾಡಿದ್ದರು.

ಅಚ್ಚರಿಯೆಂದರೆ ಈ ಹಿಂದೆ ಪ್ರಿಯಾಂಕಾ ಗಾಂಧಿಯವರಿಗೆ ಅಮೇಥಿ ಅಥವಾ ರಾಯ್ ಬರೆಲಿಯಿಂದ ಚುನಾವಣೆಗೆ ಸ್ಪರ್ಧಿಸಲು ಕೇಳಿಕೊಂಡಿದ್ದಾಗ ವಾರಣಾಸಿ ಯಾಕಾಗಬಾರದು ಎನ್ನುವಂತೆ ಉತ್ತರಿಸಿದ್ದರು. ಅಲ್ಲದೆ ಪಕ್ಷ ಇಚ್ಚಿಸಿದ್ದಲ್ಲಿ ತಾವು ಚುನಾವಣೆ ಸ್ಪರ್ಧಿಸುವುದಾಗಿ ಕೂಡ ಸ್ಪಷ್ಟನೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+