ದುರ್ಗಾ ಮಾತೆಯ ಅವತಾರದಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ ವಾದ್ರಾ
Recommended Video

ಲಕ್ನೋ, ಫೆಬ್ರವರಿ 11 : ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಪ್ರಿಯಾಂಕಾ ವಾದ್ರಾ ಅವರು ಮೊದಲ ಬಾರಿ ಅಧಿಕೃತವಾಗಿ ಬಹಿರಂಗ ಸಮಾವೇಶದಲ್ಲಿ ಭಾಗವಹಿಸಲಿದ್ದು, ಬೃಹತ್ ರೋಡ್ ಶೋನಲ್ಲಿ ಸಹೋದರ ರಾಹುಲ್ ಗಾಂಧಿ ಅವರ ಜೊತೆ ಭಾಗವಹಿಸಲಿದ್ದಾರೆ.
ಇತ್ತೀಚೆಗೆ ಮಧ್ಯ ಪ್ರದೇಶದಲ್ಲಿ ನಡೆದ ಸಮಾವೇಶದ ಬ್ಯಾನರ್ ನಲ್ಲಿ ರಾಹುಲ್ ಗಾಂಧಿ ಅವರು ಶ್ರೀರಾಮನಾಗಿ ಬಿಲ್ಲು ಬಾಣ ಹಿಡಿದು ನಿಂತಿದ್ದರೆ, ಪ್ರಿಯಾಂಕಾ ವಾದ್ರಾ ಅವರು ದುಷ್ಟ ಸಂಹಾರಕಿಯಾಗಿ ದುರ್ಗಾ ಮಾತೆಯ ಅವತಾರದಲ್ಲಿ ಬ್ಯಾನರ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ.
Banner seen in Lucknow ahead of Congress General Secretary for UP East Priyanka Gandhi Vadra, UP West Jyotiraditya Scindia and party President Rahul Gandhi's visit to the city today. pic.twitter.com/i7Fojhb49m
— ANI UP (@ANINewsUP) February 11, 2019
ರಾಹುಲ್ ಗಾಂಧಿ ಅವರು, "ನಾನು ಲಕ್ನೋಗೆ ಬರುತ್ತಿದ್ದೇನೆ. ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಅವರು ಕೂಡ ನನ್ನ ಜೊತೆಗಿರಲಿದ್ದಾರೆ. ಮಧ್ಯಾಹ್ನ ಸುಮಾರು 12 ಗಂಟೆಯಿಂದ ವಿಮಾನ ನಿಲ್ದಾಣದಿಂದ ಪಕ್ಷದ ಕಚೇರಿಯವರೆಗೆ ರಸ್ತೆ ಶೋನ ಆಯೋಜನೆ ಮಾಡಲಾಗಿದೆ. ನಿಮ್ಮೆಲ್ಲರನ್ನು ಭೇಟಿಯಾಗಲು ಉತ್ಸಾಹಿತನಾಗಿದ್ದೇನೆ" ಎಂದು ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಪೂರ್ವಕ್ಕೆ ಪ್ರಿಯಾಂಕಾ ವಾದ್ರಾ ಅವರನ್ನು ಇನ್ ಚಾರ್ಜ್ ಆಗಿ ನಿಯೋಜಿಸಲಾಗಿದ್ದರೆ, ಉತ್ತರ ಪ್ರದೇಶದ ಪಶ್ಚಿಮ ಭಾಗಕ್ಕೆ ಜ್ಯೋತಿರಾಧಿತ್ಯ ಸಿಂಧಿಯಾ ಅವರನ್ನು ಇನ್ ಚಾರ್ಜ್ ಆಗಿ ಜವಾಬ್ದಾರಿ ನೀಡಲಾಗಿದೆ. ಪ್ರಿಯಾಂಕಾ ವಾದ್ರಾ ಅವರು ರಾಲ್ ಬರೇಲಿಯಿಂದ ಸ್ಪರ್ಧಿಸುವುದು ಹೆಚ್ಚೂಕಡಿಮೆ ಖಚಿತವಾದಂತಿದೆ. ಅನಾರೋಗ್ಯದ ಕಾರಣ ಸೋನಿಯಾ ಗಾಂಧಿ ಅವರು ಅಲ್ಲಿಂದ ಸ್ಪರ್ಧಿಸುವ ಸಾಧ್ಯತೆ ಕಡಿಮೆ.

ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶ ಕಾಂಗ್ರೆಸ್ಸಿಗೆ ಭಾರೀ ಮುಖ್ಯದ್ದಾಗಿದೆ. ಏಕೆಂದರೆ, 80 ಸೀಟುಗಳಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದು ಕೇವಲ 2 ಸೀಟು ಮಾತ್ರ. ಅಮೇಥಿಯಲ್ಲಿ ರಾಹುಲ್ ಗಾಂಧಿ ಮತ್ತು ರಾಯ್ ಬರೇಲಿಯಲ್ಲಿ ಸೋನಿಯಾ ಗಾಂಧಿ ಗೆದ್ದಿದ್ದು ಬಿಟ್ಟರೆ, 71 ಸೀಟುಗಳನ್ನು ಬಿಜೆಪಿ ಕಬಳಿಸಿತ್ತು. ಇದನ್ನು ತಿರುವುಮುರುವು ಮಾಡುವ ಉತ್ಸಾಹದಿಂದ ಕಾಂಗ್ರೆಸ್ ಪ್ರಚಾರ ಆರಂಭಿಸಲಿದೆ.

ರೋಡ್ ಶೋ ಮಾರ್ಗ : ಲಕ್ನೋ ಏರ್ಪೋರ್ಟ್ ನಿಂದ, ಶಹೀದ್ ಪಥ್ ತಿರಾಹಾ, ಅವಧ್ ಚೌರಾಹಾ, ಆಲಂಬಾಘ್ ಚೌರಾಹಾ, ನಾಥಾ ಹೋಟೆಲ್ ತಿಹಾರಾ, ಹುಸೇನ್ ಗಂಜ್ ಚೌರಾಹಾ, ಬರ್ಲಿಂಗ್ಟನ್ ಚೌಹಾರಾ, ಲಾಲ್ ಬಾಗ್ ತಿರಾಹಾ, ಹಜರತ್ ಗಂಜ್ ಚೌರಾಹಾ, ವಿಕ್ರಮಾದಿತ್ಯ ಚೌರಾಹಾ.












Click it and Unblock the Notifications