ಶಾಲೆಗೆ ವಿದ್ಯಾರ್ಥಿಗಳನ್ನು ಕರೆಸಿ ಪಾಠ ಮಾಡಿದ ಖಾಸಗಿ ಶಾಲೆ!
ಲಕ್ನೋ, ಆಗಸ್ಟ್ 19 : ಕೋವಿಡ್ 19 ಭೀತಿಯ ಕಾರಣ ದೇಶಾದ್ಯಂತ ಶಾಲೆಗಳು ಮುಚ್ಚಿವೆ. ಸರ್ಕಾರದ ಯಾವುದೇ ಆದೇಶವಿಲ್ಲದಿದ್ದರೂ ಉತ್ತರ ಪ್ರದೇಶದ ಖಾಸಗಿ ಶಾಲೆಯೊಂದು ಮಕ್ಕಳನ್ನು ಶಾಲೆಗೆ ಕರೆಸಿ ತರಗತಿ ನಡೆಸಿದೆ.
Recommended Video
ಉತ್ತರ ಪ್ರದೇಶದ ಜಲಾನ್ ಎಂಬ ಪ್ರದೇಶದಲ್ಲಿ ಖಾಸಗಿ ಶಾಲೆಯೊಂದು ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದೆ. ಆಗಸ್ಟ್ 31ರ ತನಕ ಶಾಲೆ, ಕಾಲೇಜು ತೆರೆಯುವಂತಿಲ್ಲ ಎಂಬ ಆದೇಶವನ್ನು ಉಲ್ಲಂಘನೆ ಮಾಡಿ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಸಿದೆ.
ಸಾಮಾಜಿಕ ಅಂತರವನ್ನು ಪಾಲಿಸದೇ ಮಕ್ಕಳನ್ನು ಶಾಲೆಯಲ್ಲಿ ಕೂರಿಸಿ ತರಗತಿಯನ್ನು ನಡೆಸಲಾಗಿದೆ. ಈ ಕುರಿತು ಪೋಷಕರು ಶಿಕ್ಷಣ ಇಲಾಖೆಗೆ ದೂರು ನೀಡಿದ್ದಾರೆ. ಶಾಲೆಗಳನ್ನು ತೆರೆಯಲು ಸರ್ಕಾರ ಆದೇಶ ನೀಡದಿದ್ದರೂ ತರಗತಿ ನಡೆಸಿದ್ದು ಏಕೆ? ಎಂದು ಪೋಷಕರು ಪ್ರಶ್ನೆ ಮಾಡಿದ್ದಾರೆ.

ಕ್ಷೇತ್ರದ ಶಿಕ್ಷಣಾಧಿಕಾರಿ ಈ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. "ಶಾಲೆಯನ್ನು ತೆರೆಯಲು ಸರ್ಕಾರದಿಂದ ಯಾವುದೇ ಸೂಚನೆ ಬಂದಿಲ್ಲ. ಶಾಲೆಯ ಮ್ಯಾನೇಜರ್ ಮತ್ತು ಪ್ರಿನ್ಸಿಪಾಲ್ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1,62,432. ಮಂಗಳವಾ ರಾಜ್ಯದಲ್ಲಿ 4,218 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದುವರೆಗೂ ರಾಜ್ಯದಲ್ಲಿ 2,585 ಜನರು ಮೃತಪಟ್ಟಿದ್ದಾರೆ.












Click it and Unblock the Notifications