ವಿವಾಹಿತೆಯ ಜೊತೆ ಪೊಲೀಸಪ್ಪನ ಚಕ್ಕಂದ; ವಿಡಿಯೋ ಮೂಲಕ ಯುವಕರಿಂದ ಬ್ಲ್ಯಾಕ್‌ಮೇಲ್
ಉನ್ನಾವೋ ಆಗಸ್ಟ್ 23: ಉತ್ತರ ಪ್ರದೇಶ ಪೊಲೀಸರನ್ನು ನಾಚಿಸುವ ವಿಡಿಯೋವೊಂದು ವೈರಲ್ ಆಗಿದೆ. ಪ್ರಕರಣ ಉನ್ನಾವೋ ಜಿಲ್ಲೆಯಲ್ಲಿ ನಡೆದಿದೆ. ಬಂಗಾರ್‌ಮೌ ಕೊತ್ವಾಲಿಯಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ಮಹಿಳೆಯೊಂದಿಗೆ ಹೆಡ್ ಕಾನ್‌ಸ್ಟೆಬಲ್ ಆಕ್ಷೇಪಾರ್ಹ ವಿಡಿಯೋ ಸಂಚಲನ ಮೂಡಿಸಿದೆ. ಈ ವಿಡಿಯೋ ಎರಡು ವರ್ಷಗಳ ಹಿಂದಿನದು ಎನ್ನಲಾಗಿದ್ದು, ಇದನ್ನು ಮಹಿಳೆಯೇ ವೈರಲ್ ಮಾಡಿದ್ದಾರೆ. ಈ ವಿಡಿಯೋ ಹೊರಬಿದ್ದ ಬಳಿಕ ಕಾನ್‌ಸ್ಟೆಬಲ್‌ನನ್ನು ಅಮಾನತು ಮಾಡಲಾಗಿದೆ.
ಅಶ್ಲೀಲ ವಿಡಿಯೊದಲ್ಲಿ ಕಂಡುಬಂದಿದ್ದು ಬಂಗಾರ್‌ಮೌ ಕೊಟ್ವಾಲಿಯ ಮುಖ್ಯ ಕಾನ್‌ಸ್ಟೆಬಲ್ ದೀಪ್ ಸಿಂಗ್. ಕಾನ್‌ಸ್ಟೆಬಲ್ ದೀಪ್ ಸಿಂಗ್ ಸಮವಸ್ತ್ರದಲ್ಲಿದ್ದು, ಕೊಠಡಿಯೊಂದರಲ್ಲಿ ಸೀರೆ ಉಟ್ಟ ಮಹಿಳೆಯೊಂದಿಗೆ ಅಶ್ಲೀಲ ಕೃತ್ಯಗಳನ್ನು ನಡೆಸುತ್ತಿರುವುದನ್ನು ಈ ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಬಹುದು. ಪೊಲೀಸ್ ಸಮವಸ್ತ್ರದಲ್ಲಿ ಮಹಿಳೆಯನ್ನು ಚುಂಬಿಸುತ್ತಾನೆ. ಜೊತೆಗೆ ಮಹಿಳೆಯ ಖಾಸಗಿ ಅಂಗಗಳನ್ನು ಸ್ಪರ್ಶಿಸುತ್ತಾನೆ. ಕಾನ್‌ಸ್ಟೆಬಲ್‌ನ ಈ ಅಶ್ಲೀಲ ವಿಡಿಯೋ ಸೋಮವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪತಿ-ಪತ್ನಿಯರ ನಡುವಿನ ಜಗಳ ಬಿಡಿಸಲು ಹೋಗಿ
ಮೂರು ವರ್ಷಗಳ ಹಿಂದೆ ಮುಖ್ಯ ಪೇದೆ ದೀಪ್ ಸಿಂಗ್ ಅವರನ್ನು ಗಂಗಾಘಾಟ್ ಪೊಲೀಸ್ ಠಾಣೆಯಲ್ಲಿ ನಿಯೋಜಿಸಲಾಗಿತ್ತು. ಪತಿ-ಪತ್ನಿಯರ ನಡುವಿನ ಜಗಳ ಬಿಡಿಸುವಾಗ ವೈರಲ್ ವಿಡಿಯೋದಲ್ಲಿ ಕಂಡುಬಂದ ಮಹಿಳೆಯ ಸಂಪರ್ಕಕ್ಕೆ ದೀಪ್ ಸಿಂಗ್ ಬಂದಿದ್ದರು. ಇದಾದ ಬಳಿಕ ಪತಿ ಇಲ್ಲದ ಹಿನ್ನೆಲೆಯಲ್ಲಿ ಮಹಿಳೆಯ ಮನೆಗೆ ತೆರಳಿ ಆಕೆಯೊಂದಿಗೆ ಅಶ್ಲೀಲ ಕೃತ್ಯ ಎಸಗಿದ್ದಾನೆ. ಮುಖ್ಯ ಪೇದೆಯ ಸತ್ಯಾಸತ್ಯತೆ ಬೆಳಕಿಗೆ ಬಂದಾಗ ಮಹಿಳೆಯ ಪತಿ, ಕಾರ್ ಗ್ಯಾರೇಜ್ ನಿರ್ವಾಹಕರ ಸಹಾಯದಿಂದ ಅಸಭ್ಯ ಸ್ಥಿತಿಯಲ್ಲಿ ತನ್ನ ಪತ್ನಿಯೊಂದಿಗೆ ಕಾನ್‌ಸ್ಟೆಬಲ್ ಇರುವುದನ್ನು ವಿಡಿಯೋ ಮಾಡಿದ್ದಾನೆ.

ಅಶ್ಲೀಲ ವಿಡಿಯೋ ವೈರಲ್
ಸುಮಾರು ಮೂರು ವರ್ಷಗಳಿಂದ ವಿಡಿಯೋ ಮಾಡಿದ ಯುವಕರು ಮುಖ್ಯ ಪೇದೆಯನ್ನು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡುತ್ತಿದ್ದರು ಎಂದು ಎಸ್ಪಿ ದಿನೇಶ್ ತ್ರಿಪಾಠಿ ತಿಳಿಸಿದ್ದಾರೆ. ಎರಡು ದಿನಗಳ ಹಿಂದೆ ಕಾನ್‌ಸ್ಟೆಬಲ್ ಬಳಿ ಯುವಕ ಹಣಕ್ಕೆ ಬೇಡಿಕೆ ಇಟ್ಟಿದ್ದ, ಆದರೆ ತನ್ನ ಬಳಿ ಹಣವಿಲ್ಲ ಎಂದು ದೀಪ್ ಸಿಂಗ್ ಹೇಳಿದ್ದಾನೆ. ಹಣದ ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಕಾನ್‌ಸ್ಟೆಬಲ್ ಮಹಿಳೆಯೊಂದಿಗೆ ಇರುವ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗಿದೆ ಎಂದು ಹೇಳಲಾಗುತ್ತಿದೆ.

ದೀಪ್ ಸಿಂಗ್ ಅಮಾನತು
ಸಿಪಾಯಿ ದೀಪ್ ಸಿಂಗ್ ಅವರನ್ನು ಗಂಗಾಘಾಟ್ ಕೊಟ್ವಾಲಿಯಲ್ಲಿ ನಿಯೋಜಿಸಲಾಗಿತ್ತು. ವಿಡಿಯೊ ವೈರಲ್ ಆದ ನಂತರ, ಉನ್ನಾವೊ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ. ತಕ್ಷಣದ ಕ್ರಮ ಕೈಗೊಂಡಿದ್ದಾರೆ. ಕಾನ್‌ಸ್ಟೆಬಲ್ ದೀಪ್ ಸಿಂಗ್ ಅವರನ್ನು ಅಮಾನತುಗೊಳಿಸಲಾಗಿದೆ. ಉನ್ನಾವೋ ಪೋಲೀಸರ ಟ್ವೀಟ್ ಪ್ರಕಾರ, "ಠಾಣಾ ಬಂಗಾರ್‌ಮೌನಲ್ಲಿ ಪೋಸ್ಟ್ ಮಾಡಿದ ಮುಖ್ಯ ಕಾನ್ಸ್‌ಟೇಬಲ್ ದೀಪ್ ಸಿಂಗ್ ಅವರ ವಿಡಿಯೊ ಕೆಲವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿದೆ, ಇದನ್ನು ಗಮನದಲ್ಲಿಟ್ಟುಕೊಂಡು ಮೇಲಿನ ಮುಖ್ಯ ಕಾನ್ಸ್‌ಟೇಬಲ್ ಅನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಉನ್ನಾವ್ ಪೊಲೀಸ್ ಅಧೀಕ್ಷಕರು ಅಮಾನತುಗೊಳಿಸಿದ್ದಾರೆ. ಮತ್ತು ಇಲಾಖಾ ಕ್ರಮ ಕೈಗೊಳ್ಳಲಾಗುತ್ತಿದೆ'' ಎಂದಿದೆ.

ವಿಡಿಯೋ ರೆಕಾರ್ಡ್ ಮಾಡಿದ ಪತಿ
ಪತ್ನಿಯೊಂದಿಗಿನ ಕಾನ್‌ಸ್ಟೆಬಲ್ ಸಂಬಂಧ ಕಂಡು ಬೇಸರಗೊಂಡ ಪತಿ ಆತನ ವಿರುದ್ಧ ದೂರಿಗೆ ಮುಂದಾಗಿದ್ದನು. ಆದರೆ ಅದೇನಾಯ್ತೋ ಗೊತ್ತಿಲ್ಲ ತಾನೂ ಕೂಡ ಈ ಕೃತ್ಯದಲ್ಲಿ ಪಾಳು ಪಡೆದುಕೊಂಡಿದ್ದಾನೆ. ಹೆಂಡತಿಯೊಂದಿಗೆ ಸರಸವಾಡುತ್ತಿದ್ದ ಕಾನ್‌ಸ್ಟೆಬಲ್ ವಿಡಿಯೋವನ್ನು ತೋರಿಸಿ ಬ್ಲಾಕ್‌ಮೇಲ್ ಮಾಡಿದ್ದಾನೆ. ಜೊತೆಗೆ ಸಾಧ್ಯವಾದಷ್ಟು ಹಣವನ್ನು ಪೀಕಿದ್ದಾನೆ. ಬಳಿಕ ಹಣ ಪೀಕಲು ಸಾಧ್ಯವಾಗದೇ ಇದ್ದಾಗ ವಿಡಿಯೋವನ್ನು ಹರಿಬಿಟ್ಟಿದ್ದಾನೆ. ಪತಿ ಈ ವಿಡಿಯೋವನ್ನು ರೆಕಾರ್ಡ್ ಮಾಡಲು ತನ್ನ ಸ್ನೇಹಿತರ ಸಹಾಯವನ್ನೂ ಪಡೆದಿದ್ದಾನೆಂದು ವಿಚಾರಣೆಯಿಂದ ತಿಳಿದು ಬಂದಿದೆ.












Click it and Unblock the Notifications