ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಂಬಲ್ ಕಣಿವೆ ಲೇಡಿ ಡಾನ್ ಫೂಲಂದೇವಿ ಪತಿಗೆ ಕಾಂಗ್ರೆಸ್ ಟಿಕೆಟ್

|
Google Oneindia Kannada News

ಲಕ್ನೋ,ಏ.15: ಚಂಬಲ್ ಕಣಿವೆ ರಾಣಿ ಹಾಗೂ ಲೇಡಿ ಡಾನ್ ಎಂದೇ ಕುಖ್ಯಾತರಾಗಿದ್ದ ಫೂಲಂದೇವಿ ಪತಿಗೆ ಕಾಂಗ್ರೆಸ್ ಲೋಕಸಭಾ ಟಿಕೆಟ್ ನೀಡಿದೆ.

ಉತ್ತರಪ್ರದೇಶದ ಅಂಬೇಡ್ಕರ್ ನಗರದಿಂದ ಫೂಲಂ ಪತಿ ಉಮೇದ್ ಸಿಂಗ್‌ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಪ್ರಕಟಿಸಿದೆ.

ಪೂಲನ್ ದೇವಿ ಹತ್ಯೆಗೈದ ರಾಣಾಗೆ ಜೀವಾವಧಿ ಶಿಕ್ಷೆಪೂಲನ್ ದೇವಿ ಹತ್ಯೆಗೈದ ರಾಣಾಗೆ ಜೀವಾವಧಿ ಶಿಕ್ಷೆ

ಉತ್ತರ ಪ್ರದೇಶಕ್ಕೆ ಕಾಂಗ್ರೆಸ್ ಬಿಡುಗಡೆ ಮಾಡಿರುವ 9 ಅಭ್ಯರ್ಥಿಗಳ ಪಟ್ಟಿಯಲ್ಲಿ ಫೂಲಂದೇವಿ ಪತಿಯ ಹೆಸರೂ ಕೂಡ ಸೇರಿರುವುದು ಆಶ್ಚರ್ಯ ಮೂಡಿಸಿದೆ.

Phoolan devi husband got congress ticket for parliamentary election

ಫೂಲಂದೇವಿ ಕೂಡ ಉತ್ತರಪ್ರದೇಶದ ಮಿರ್ಜಾಪುರದಿಂದ ಒಮ್ಮೆ ಸಂಸದೆಯಾಗಿದ್ದರು. 1999ರಲ್ಲಿ ಸಮಾಜವಾದಿ ಪಕ್ಷದಿಂದ ಮಿರ್ಜಾಪುರ್ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಆದರೆ 2000ದಲ್ಲಿ ಫೂಲಂದೇವಿ ಹತ್ಯೆಯಾಗಿತ್ತು. ಬಳಿಕ ಫೂಲಂ ಪತಿ ಉಮೇದ್ ಸಿಂಗ್ ಎಸ್‌ಪಿ ಹಾಗೂ ಬಿಎಸ್‌ಪಿ ಜೊತೆ ಗುರುತಿಸಿಕೊಂಡಿದ್ದರು. 2017ರಲ್ಲಿ ಉಮೇದ್ ಸಿಂಗ್ ಕಾಂಗ್ರೆಸ್ ಸೇರಿದ್ದರು.

'ಫೂಲನ್‌' ಎಂಬ ದುರಂತ

ಚಂಬಲ್ ಕಣಿವೆಯಲ್ಲಿ ನಾನಾ ಕಾರಣಗಳಿಂದ ಫೂಲಂದೇವಿ ಹೆಸರು ಮಾಡಿದ್ದರು.ಮೇಲ್ವರ್ಗಗಳ ಅತ್ಯಾಚಾರ ಹಾಗೂ ದಬ್ಬಾಳಿಕೆಗೆ ಬೇಸತ್ತು ಆಕೆ ಲೇಡಿ ಡಾನ್ ಆಗಿದ್ದರು ಎನ್ನುವ ಮಾತುಗಳೂ ಇವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಆದರೆ ದರೋಡೆತನ ಹಾಗೂ ಇತರೆ ಭೂಗತ ಚಟುವಟಿಕೆಗಳಿಂದ ದೂರವಾಗಿ ಅಂತಿಮವಾಗಿ 1999ರಲ್ಲಿ ಸಾರ್ವಜನಿಕ ರಾಜಕೀಯ ಜೀವನ ಪ್ರವೇಶಿಸಿದ್ದರು.

ಆಕೆಯ ವಿರುದ್ಧದ ಶಿಕ್ಷೆಗಳನ್ನು ಹಾಗೂ ಪ್ರಕರಣಗಳನ್ನು ಕೈಬಿಡಲಾಗಿತ್ತು. ಆದರೆ ಚಂಬಲ್ ಕಣಿವೆಯ ಹಳೆಯ ದ್ವೇಷವೇ ಕೊಲೆಗೆ ಕಾರಣವಾಯಿತು.

English summary
In famous lady Don Phoolan devi's Husband got Congress Ticket for Lok sabha elections 2019. He is contesting from Ambedkar nagar Constituency of Uttar pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X