ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನವನ್ನು ಸಂತೋಷಪಡಿಸುವ ಕಾರ್ಯ ವಿಪಕ್ಷಗಳು ಬಿಡಬೇಕು: ಮೋದಿ

|
Google Oneindia Kannada News

ಗಾಜಿಯಾಬಾದ್, ಮಾರ್ಚ್‌ 08: ಸರ್ಜಿಕಲ್ ಸ್ಟ್ರೈಕ್ 2 ಸಾಕ್ಷ್ಯ ಕೇಳುತ್ತಿರುವ ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾರಿದ ಪ್ರಧಾನಿ ನರೇಂದ್ರ ಮೋದಿ, ದೇಶದ 130 ಕೋಟಿ ಜನರ ನಂಬಿಕೆಯೇ ಸಾಕ್ಷಿ ಎಂದು ಹೇಳಿದರು.

ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳು ಉದ್ದೇಶಪೂರ್ವಕವಾಗಿ ಸಾಕ್ಷ್ಯ ಕೇಳುತ್ತಿವೆ, ಇದರಿಂದ ಪಾಕಿಸ್ತಾನಕ್ಕೆ ಸಹಾಯವಾಗುತ್ತಿದೆ ಎಂದು ಹೇಳಿದರು.

'ಪಾಕಿಸ್ತಾನ ಬೆಳಿಗ್ಗೆ 5 ಗಂಟೆಗೆ ಟ್ವೀಟ್‌ ಮಾಡಿದೆ, ಪಾಕಿಸ್ತಾನ ಏನು ಮೂರ್ಖ ದೇಶವಾ, ನನಗೆ ಹೊಡೆದರು ಎಂದು ಹೇಳಿಕೊಳ್ಳಲು. ಆದರೆ ನಮ್ಮ ಜನ ಕೇಳುತ್ತಿದ್ದಾರೆ, ಹೊಡೆದಿದ್ದೀರಾದರೆ ಸಾಕ್ಷ್ಯ ಕೊಡಿ ಎಂದು. ದಯವಿಟ್ಟು ಪಾಕಿಸ್ತಾನವನ್ನು ಸಂತೋಷಪಡಿಸುವ ಕಾರ್ಯ ಬಂದ್ ಮಾಡಿ' ಎಂದು ನರೇಂದ್ರ ಮೋದಿ ವಿರೋಧ ಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.

Oppositions should leave making Pakistan happy: Modi

ಇದಕ್ಕೆ ಮುನ್ನಾ ಕಾನ್ಪುರದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಿದ ಮೋದಿ, ಕಾಶ್ಮೀರಿಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದರು. ಕೆಲವು ತಲೆತಿರುಕರು ಕಾಶ್ಮೀರಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎಂದರು.

ಕಲಬುರಗಿಗೆ ಬಂದರೂ ಖರ್ಗೆ ಹೆಸರೆತ್ತಲಿಲ್ಲ ಮೋದಿ, ಕಾರಣ ಏನಿರಬಹುದು? ಕಲಬುರಗಿಗೆ ಬಂದರೂ ಖರ್ಗೆ ಹೆಸರೆತ್ತಲಿಲ್ಲ ಮೋದಿ, ಕಾರಣ ಏನಿರಬಹುದು?

ದೇಶದಲ್ಲಿ ಒಗ್ಗಟ್ಟಿನ, ಸೌಹಾರ್ದದ ವಾತಾವರಣ ಕೆಡದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ, ಕಾಶ್ಮೀರಿಗಳ ಮೇಲೆ ಹಲ್ಲೆಗಳಾಗದಂತೆ ಆಯಾ ರಾಜ್ಯಗಳು ಜಾಗರೂಕತೆ ವಹಿಸಬೇಕು ಎಂದು ರಾಜ್ಯಗಳಿಗೆ ಮೋದಿ ಕರೆ ನೀಡಿದರು.

English summary
Prime minister Narendra Modi lambasted on who asking proof for surgical strike 2. He said some people trying to make Pakistan happy. He addressed a massive rally in Kanpur and Gajiyabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X