Meta Layoffs: 10 ವರ್ಷ ಸೇವೆ, ಹೊಸ ಎಂಜಿನಿಯರ್‌ಗೆ ತರಬೇತಿ ಕೊಟ್ಟ ಮರುದಿನವೇ ವಜಾ, ಉದ್ಯೋಗಿ ಪೋಸ್ಟ್ ವೈರಲ್
Meta Lay Offs: ಜಾಗತಿಕ ದೈತ್ಯ ಎಂಎನ್‌ಸಿ ಕಂಪನಿಯಾಗಿರುವ ಮೆಟಾ (Meta 2026) ಉದ್ಯೋಗ ವಜಾನಡಿ ಹೊರ ಬಂದ ಸಿಂಗಾಪೂರ ಉದ್ಯೋಗಿಯೊಬ್ಬರ ಪೋಸ್ಟ್ ಸಾಮಾಜಿಕ ಜಾಲತಾನದಲ್ಲಿ ವೈರಲ್ ಆಗುತ್ತಿದೆ. ಹೊಸ ನೌಕರರಿಗೆ ಅಗತ್ಯ ತರಬೇತಿ (KT) ನೀಡಿದ ಮಾರನೇ ದಿನವೇ ತಮ್ಮನ್ನು ವಜಾಗೊಳಿಸಲಾಯಿತು ಎಂದು ಬರೆದುಕೊಡಿದ್ದಾರೆ. ಸುಮಾರು ಒಂದು ದಶಕ ಕಾಲ ಕಂಪನಿಗಾಗಿ ದುಡಿದ ನೌಕರರ ಮನದಾಳದ ಭಾವವನ್ನು ಹಂಚಿಕೊಂಡಿದ್ದಾರೆ.
ಮೆಟಾ ಕಂಪನಿಯು ಇತ್ತೀಚೆಗೆ ನೆನ್ನೆ ಮೇ 20ರಂದು ವಿಶ್ವದಾದ್ಯಂತ ಸುಮಾರು 8000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿದೆ. ವಜಾಗೊಂಡವರಲ್ಲಿ ಅನೇಕರಿಗೆ ಸಮಸ್ಯೆ ಆಗಿದೆ. ಆಕಾಶವೇ ತಲೆಕೆಳಗಾದಂತ ಅನುಭವವಾಗಿದೆ. ಭವಿಷ್ಯವೇನು ಎಂಬ ಚಿಂತೆ ಆವರಿಸಿದೆ. ಸಿಂಗಾಪುರ ಮೂಲದ ಮೆಟಾ ಉದ್ಯೋಗಿಯೊಬ್ಬರು ಹುದ್ದೆ ಕಳೆದುಕೊಂಡಿದ್ದಾರೆ. "ಗ್ಯಾರಿ ಟೇ' ಅವರ ಭಾವನಾತ್ಮಕ ಲಿಂಕ್ಡ್‌ಇನ್ ಪೋಸ್ಟ್ ಇಂಟರ್‌ನೆಟ್‌ನಲ್ಲಿ ತೀವ್ರ ಗಮನ ಸೆಳೆದಿದೆ.

ಕಂಪನಿಗೆ ಜಾಯಿನ್ ಹೊಸ ಎಂಜಿನಿಯರ್‌ಗೆ ತರಬೇತಿ ನೀಡಿದ ಮರುದಿನವೇ ನಾನು ಕೆಲಸ ಕಳೆದುಕೊಂಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ. ಅವರ ಈ ಪೋಸ್ಟ್ ಅನೇಕ ಉದ್ಯೋಗಿಗಳಲ್ಲಿ ಆತಂಕ ಮೂಡಿಸಿದೆ.
ಹತ್ತು ವರ್ಷ ಮೆಟಾದಲ್ಲಿ ಕೆಲಸ, ಇಂದು ವಜಾ
ಕಂಪನಿಯಲ್ಲಿ ಆಡ್‌ಟೆಕ್ ಬ್ಯುಸಿನೆಸ್ ಸಪೋರ್ಟ್ ಇಂಜಿನಿಯರ್ ಆಗಿದ್ದ 'ಗ್ಯಾರಿ ಟೇ' ಅವರು ಸುಮಾರು 10 ವರ್ಷಗಳಿಂದ ಮೆಟಾದಲ್ಲಿ ಕೆಲಸ ಮಾಡಿದ್ದಾರೆ. ಲಂಡನ್‌ನಲ್ಲಿ ಸ್ಯಾಮಿಲ್ ಆಗಿ ಸೇರಿ ನಂತರ ಸಿಂಗಾಪುರದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಒಟ್ಟು ಬುಧವಾರ 'ಹೊಸ ಪಾಡ್ ಇಂಜಿನಿಯರ್‌ಗೆ ತರಬೇತಿ ನೀಡುತ್ತಿದ್ದೆ. ಎಲ್ಲವನ್ನೂ ಅರ್ಥವಾಗುವಂತೆ ತಿಳಿಸಿದ್ದೇನೆಂದು ಸಂತೋಷಗೊಂಡಿದ್ದೆ. ಅದರ ಮಾರನೇ ದಿನವೇ ನನ್ನನ್ನು ಹೊರದಬ್ಬಲಾಗಿದೆ ಎಂದು ದೀರ್ಘಾವಧಿ ತಮ್ಮ ಸೇವೆಯನ್ನು ನೆನಪಿಸಿಕೊಂಡಿದ್ದಾರೆ.
"ಜಾಗತಿಕವಾಗಿ ಪ್ರಸ್ತುತ ಉದ್ಯೋಗಿಗಳಲ್ಲಿ ಶೇ. 99.5 ಕ್ಕಿಂತ ಹೆಚ್ಚು ಜನರಿಗಿಂತಲೂ ನಾನು ಹೆಚ್ಚು ಕಾಲ ಕೆಲಸ ಮಾಡಿದ್ದೇನೆ. ಎಪಿಎಸಿ ಕಚೇರಿಯಲ್ಲಿನ ಬೇರೆ ಯಾವುದೇ ಉದ್ಯೋಗಿಗಿಂತಲೂ ಶೇ. 99.9ಕ್ಕೂ ಹೆಚ್ಚು ಕಾರ್ಯತತ್ಪರನಾಗಿದ್ದೆ ಎಂದಿದ್ದಾರೆ. ಫೇಸ್‌ಬುಕ್‌ನ ಆರಂಭಿಕ ವರ್ಷಗಳ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕೆ ಕೃತಜ್ಞನಾಗಿದ್ದೇನೆ. ಮೆಟಾ ಮತ್ತು ಮೈಕ್ರೋಸಾಫ್ಟ್‌ನಲ್ಲಿ 15 ವರ್ಷಗಳಿಗೂ ಹೆಚ್ಚು ಕಾಲ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದೇನೆ ಅವರು ಬರೆದುಕೊಂಡಿದ್ದಾರೆ.
ಕಂಪನಿಯಲ್ಲಿ AI ಇರಲಿದೆ, ನೌಕರರಲ್ಲ
ಕೃತಕ ಬುದ್ಧಿಮತ್ತೆ (AI) ಪ್ರಭಾವ ಕುರಿತು ಮಾತನಾಡಿರುವ ಅವರು, ಎಐ ಜೊತೆ ಸ್ವಯಂ ತರಬೇತಿ ಪಡೆದು, ತಂಡಗಳಿಗೆ ಸಿಸ್ಟಮ್‌ಗಳನ್ನು ಅಭಿವೃದ್ಧಿಪಡಿಸಲು ನಾನು ಅಪಾರ ಸಮಯ ಕಳೆದಿದ್ದೇನೆ. ಅತಿದೊಡ್ಡ ಜಾಗತಿಕ ಗ್ರಾಹಕರೊಂದಿಗೆ ಎಸ್‌ಎಲ್‌ಎಗಳನ್ನು ಕಾಪಾಡಿಕೊಳ್ಳುತ್ತಲೇ, ಕೆಲಸದ ವೇಗವನ್ನು ಶೇ. 2-300 ಪಟ್ಟು ಹೆಚ್ಚಿಸಲಾಗಿದೆ ಎಂದರು. ಪೋಸ್ಟ್ ಕೊನೆಯಲ್ಲಿ, 'AI ಇಲ್ಲಿಯೇ ಇರಲಿದೆ, ಆದರೆ ನೌಕರರು ಅಲ್ಲ ಎಂಬುದು ಸ್ಪಷ್ಟ' ಎಂದು ವ್ಯಂಗ್ಯವಾಡಿದ್ದಾರೆ.
ನೌಕರರ ವಜಾಗೆ ಮೆಟಾ ನೀಡಿದ ಕಾರಣವೇನು?
ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸಿರುವ ಕಂಪನಿಯು ವೆಚ್ಚ ಕಡಿತ ಮತ್ತು ದಕ್ಷತೆಯಲ್ಲಿ ಸುಧಾರಣೆ ತರುವ ಉದ್ದೇಶದಿಂದ ಉದ್ಯೋಗ ಕಡಿತಗೊಳಿಸಲಾಗಿದೆ ಎಂದು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಇನ್ನೊಂದು ಕಡೆ ಮೆಟಾ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಪ್ರಮುಖ ಹೂಡಿಕೆ ಮಾಡಿದ್ದು,ಅದನ್ನು ಹೇರಳ ಪ್ರಮಾಣದಲ್ಲಿ ಮುಂದುವರಿಸಿದೆ. ಈ ವಜಾಗಳ ಸುತ್ತ ಆತಂಕದ ವಾತಾವರಣ ಉಂಟಾಗಿದೆ ಎಂದು ನೌಕರರು ಹೇಳಿಕೊಂಡಿದ್ದಾರೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಸಿಂಗಾಪುರದಲ್ಲಿನ ಉದ್ಯೋಗಿಗಳು ಸ್ಥಳೀಯ ಕಾಲಮಾನ ಮುಂಜಾನೆ 4 ಗಂಟೆ ಸುಮಾರಿಗೆ ವಜಾಗೊಂಡಿದ್ದರ ಮಾಹಿತಿ ಪಡೆದುಕೊಂಡಿದ್ಆರೆ. ಇನ್ನೂ ಯುರೋಪ್ ಮತ್ತು ಅಮೆರಿಕಾದಲ್ಲಿನ ಸಿಬ್ಬಂದಿಗೂ ಅವರ ಆಯಾ ಸಮಯ ವಲಯಗಳಲ್ಲಿ ಮಾಹಿತಿ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು ಎಂದು ವರದಿ ಆಗಿದೆ.














Click it and Unblock the Notifications