Special Express Train: ಬೆಂಗಳೂರಿನಿಂದ ಇಲ್ಲಿಗೆ ಏಕಮಾರ್ಗ ವಿಶೇಷ ರೈಲು, ವೇಳಾಪಟ್ಟಿ ಹೀಗಿದೆ

ಬೆಂಗಳೂರು: ಬೇಸಿಗೆ ರಜಾ ಹಾಗೂ ವಾರಾಂತ್ಯ ರಜಾದಿನಗಳನ್ನು ಗಮನದಲ್ಲಿಟ್ಟುಕೊಂಡಿರುವ ನೈಋತ್ಯ ರೈಲ್ವೆಯು ರಾಜಧಾನಿ ಬೆಂಗಳೂರಿನ ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ ತಮಿಳುನಾಡಿನ ಎರಡು ಪ್ರಮುಖ ಸ್ಥಳಗಳಿಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಕಾರ್ಯಾಚರಣೆ ಮಾಡಲಾಗುತ್ತದೆ. ಪ್ರವಾಸ, ಇನ್ನಿತರ ಕಾರ್ಯಕ್ರಮ, ಮನೆಗಳಿಗೆ ತೆರಳುವ ಪ್ರಯಾಣಿಕರಿಗೆ ರೈಲು ಹೆಚ್ಚಿನ ಅನುಕೂಲ ಕಲ್ಪಿಸಲಿದೆ.

ಬೆಂಗಳೂರು ಕಂಟೋನ್ಮೆಂಟ್-ತೆಂಕಾಸಿ-ಸೆಂಗೊಟ್ಟೆ ನಡುವೆ ವಿಶೇಷ ರೈಲು ಪ್ರಯಾಣಿಕರ ಬೇಡಿಕೆಯ ಮೇರೆಗೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆ ಘೋಷಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ಇಂದು ಗುರುವಾರ ಮಾಹಿತಿ ನೀಡಿದ್ದಾರೆ.

Special Express Trains

ಬೆಂಗಳೂರು ಕಂಟೋನ್ಸೆಂಟ್ - ತೆಂಕಾಸಿ ಏಕಮಾರ್ಗ ಎಕ್ಸ್‌ಪ್ರೆಸ್ ವಿಶೇಷ ರೈಲು (ರೈಲು ಸಂಖ್ಯೆ 06513) ಮುಂದಿನ ಭಾನುವಾರ ಮೇ 24 ರಂದು ರಾತ್ರಿ 10.20 ಗಂಟೆಗೆ ಬೆಂಗಳೂರು ಕಂಟೋನ್ವೆಂಟ್‌ನಿಂದ ಹೊರಡುತ್ತದೆ. ಮರುದಿನ ಸೋಮವಾರ (ಮೇ 25) ಮಧ್ಯಾಹ್ನ 01.00 ಗಂಟೆಗೆ ತೆಂಕಾಸಿ ನಿಲ್ದಾಣ ತಲುಪುತ್ತದೆ.

Vande Bharat: ಬೆಂಗಳೂರು ವಂದೇ ಭಾರತ್, ಶತಾಬ್ಧಿ, ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಬದಲಾವಣೆ, ನಿಲುಗಡೆ ರದ್ದು
Vande Bharat: ಬೆಂಗಳೂರು ವಂದೇ ಭಾರತ್, ಶತಾಬ್ಧಿ, ಎಕ್ಸ್‌ಪ್ರೆಸ್ ರೈಲುಗಳ ಸಂಚಾರ ಬದಲಾವಣೆ, ನಿಲುಗಡೆ ರದ್ದು

ಮರಳಿ ಅದೇ ದಿಕ್ಕಿನಲ್ಲಿ ತೆಂಕಾಸಿ-ಬೆಂಗಳೂರು ಕಂಟೋನ್ಮೆಂಟ್ ವಿಶೇಷ ಎಕ್ಸ್‌ಪ್ರೆಸ್ ರೈಲು (06514) ಸೋಮವಾರ (ಮೇ 25) ರಾತ್ರಿ 11ಗಂಟೆಗೆ ಸೆಂಗೊಟ್ಟೆನಿಂದ ಪ್ರಯಾಣ ಆಂಭಿಸುತ್ತದೆ. ಮಾರನೇ ದಿನ ಮಧ್ಯಾಹ್ನ 01 ಗಂಟೆಗೆ ಬೆಂಗಳೂರು ಕಂಟೋನ್ವೆಂಟ್ ನಿಲ್ದಾಣಕ್ಕೆ ಬಂದು ಸೇರಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ರೈಲು ಸಂಚಾರ ಮಾರ್ಗ, ನಿಲುಗಡೆ ನಿಲ್ದಾಣಗಳು

ಈ ವಿಶೇಷ ರೈಲು ಕರ್ಮೇಲಂ, ಹೊಸೂರು, ಧರ್ಮಪುರಿ, ಸೇಲಂ, ನಾಮಕ್ಕಲ್, ಕರೂರು, ದಿಂಡಿಗಲ್, ಕೊಡೈಕೆನಾಲ್‌ ರಸ್ತೆ, ಮಧುರೈ, ವಿರುದುನಗರ, ಶಿವಕಾಶಿ, ಶ್ರೀವಿಲ್ಲಿಪುತ್ತೂರು, ರಾಜಪಾಳ್ಯಂ, ಶಂಕರಕೋವಿಲ್‌ ಹಾಗೂ ಕಡಯನಲ್ಲೂರು, ತೆಂಕಾಸಿ (ಹಿಂದಿರುಗುವ ದಿಕ್ಕಿನಲ್ಲಿ) ಮಾರ್ಗವಾಗಿ ಸಾಗುತ್ತದೆ. ಆಯಾ ನಿಲ್ದಾನಗಳಲ್ಲಿ ನಿಗದಿಯಂತೆ ನಿಲುಗಡೆ ನೀಡುತ್ತದೆ.

20 ಬೋಗಿಗಳ ವಿಶೇಷ ರೈಲು

ಈ ವಿಶೇಷ ರೈಲು ಒಟ್ಟು 20 ಕೋಚ್‌ಗಳನ್ನು ಒಳಗೊಂಡಿದೆ. 01 ತ್ರಿ-ಟೈರ್‌ (ಎಸಿ 3-ಟೈರ್) ಕೋಚ್, 05 ಸ್ಲಿಪರ್ ಕೋಚ್‌ಗಳು, 12 ಜನರಲ್ ಸೆಕೆಂಡ್ ಕ್ಲಾಸ್ ಕೋಚ್‌ಗಳು ಮತ್ತು 02 ಸೆಕೆಂಡ್ ಕ್ಲಾಸ್ ಕಮ್ ಲಗೇಜ್ ಕಮ್ ಬ್ರೇಕ್ ವಾನ್‌ಗಳನು ಹೊಂದಿರುತ್ತದೆ.

Bullet Train: ದೇಶದ ಮೊದಲ 'ಬುಲೆಟ್ ಟ್ರೈನ್' ಫಸ್ಟ್ ಲುಕ್ ಇದಲ್ಲ: ರೈಲ್ವೆ ಇಲಾಖೆ
Bullet Train: ದೇಶದ ಮೊದಲ 'ಬುಲೆಟ್ ಟ್ರೈನ್' ಫಸ್ಟ್ ಲುಕ್ ಇದಲ್ಲ: ರೈಲ್ವೆ ಇಲಾಖೆ

ವಂದೇ ಭಾರತ್, ಶತಾಬ್ಧಿ ರೈಲುಗಳ ಸಂಚಾರ ಬದಲಾವಣೆ

ಕೆ.ಆರ್.ಪುರ ಹಾಗೂ ವೈಟ್‌ಫಿಲ್ಡ್ ನಡುವೆ ರೈಲ್ವೆ ಎಂಜಿನಿಯರಿಂಗ್ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಕಾರಣಕ್ಕೆ ಬೆಂಗಳೂರು ಮೂಲಕ ಸಂಚರಿಸುವ ವಂದೇ ಭಾರತ್ ಸೇರಿ ಕೆಲವು ರೈಲುಗಳ ಮಾರ್ಗ, ನಿಲ್ದಾಣ ಬದಲಾಗಿದೆ.

ಜೂನ್ 7ಮತ್ತು 8ರಂದು ಕೆಎಸ್‌ಆರ್‌ ಬೆಂಗಳೂರು-ಕನ್ಯಾಕುಮಾರ್ ಎಕ್ಸ್‌ಪ್ರೆಸ್ ರೈಲು (16526), ಎರ್ನಾಕುಲಂ ಜಂಕ್ಷನ್-ಕೆಎಸ್‌ಆರ್ ಬೆಂಗಳೂರು ರೈಲು (16652), ಕೊಯಮತ್ತೂರು-ನಿಜಾಮುದ್ದೀನ್ ಕೊಂಗು ಎಕ್ಸ್‌ಪ್ರೆಸ್ ರೈಲು (12647), ಹುಬ್ಬಳ್ಳಿ-ಎಂಜಿಆರ್‌ ಚೆನ್ನೈ ಸೆಂಟ್ರಲ್ ಸೂಪರ್‌ಫಾಸ್ಟ್ ರೈಲು (22698), ಡಾ.ಎಂಜಿಆರ್ ಸೆಂಟ್ರಲ್-ಮೈಸೂರು ವಂದೇ ಭಾರತ್ ಎಕ್ಸಪ್ರೆಸ್ ರೈಲು ಮತ್ತು ಚೆನ್ನೈ ಸೆಂಟ್ರಲ್-ಕೆಎಸ್‌ಆರ್ ಬೆಂಗಳೂರು ಜನಶತಾಬ್ಧಿ ಎಕ್ಸ್‌ಪ್ರೆಸ್ ರೈಲುಗಳ ಮಾರ್ಗ, ನಿಲ್ದಾಣಗಳಲ್ಲಿ ಬದಲಾವಣೆ ಆಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+