ತುಮಕೂರು ಹೆಸರು ಬೆಂಗಳೂರು ಉತ್ತರ; ವಿಸ್ತೀರ್ಣ ಹೆಚ್ಚಾಗಲಿದೆಯೇ ಇಲ್ಲಿದೆ ಸಂಪೂರ್ಣ ವಿವರ

Tumkur: ಕಲ್ಪತರ ನಾಡು ತುಮಕೂರನ್ನು ಬೆಂಗಳೂರು ಉತ್ತರ ಎಂದು ಘೋಷಿಸಬೇಕು ಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಈಚೆಗೆ ಹೇಳಿದ್ದರು. ಇದೀಗ ಬೆಂಗಳೂರು ಉತ್ತರವಾಗಿ ತುಮಕೂರು ಬದಲಾಗಲಿದೆಯೇ, ಒಂದೊಮ್ಮೆ ಬೆಂಗಳೂರು ಉತ್ತರ ಎಂದು ತುಮಕೂರು ಬದಲಾದರೆ ಈ ಜಿಲ್ಲೆಯ ವಿಸ್ತೀರ್ಣವೂ ಹೆಚ್ಚಾಗಲಿದೆಯೇ ಎನೆಲ್ಲಾ ಬದಲಾವಣೆಗಳು ಆಗಲಿವೆ ಎನ್ನುವ ಬಗ್ಗೆ ಗಂಭೀರ ಚರ್ಚೆಗಳು ಪ್ರಾರಂಭವಾಗಿದ್ದವು. ಇದೀಗ ಈ ಎಲ್ಲ ಪ್ರಶ್ನೆಗಳಿಗೆ ಜಿ. ಪರಮೇಶ್ವರ್ ಅವರು ಉತ್ತರಿಸಿದ್ದಾರೆ. ತುಮಕೂರು ಜಿಲ್ಲೆಯನ್ನು ಬೆಂಗಳೂರು ಉತ್ತರ ಎಂದು ಘೋಷಣೆ ಮಾಡಬೇಕು ಎನ್ನುವುದು ಒಂದು ಕಲ್ಪನೆಯಾಗಿದೆ. ಆದರೆ ತುಮಕೂರು ಜಿಲ್ಲೆಯ ಹೆಸರು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ತುಮಕೂರು ಜಿಲ್ಲೆಯ ವಿಸ್ತೀರ್ಣವೂ ಸಹ ಬದಲಾಗುವುದಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ಹೇಳಿದ್ದಾರೆ. ಮುಂದುವರಿದು ನಾನು ಎಲ್ಲಿಯೂ ಹೆಸರು ಬದಲಾವಣೆಯ ಬಗ್ಗೆ ಮಾತನಾಡಿಲ್ಲ. ಬೆಂಗಳೂರು ಸೇರಿದೆ ಅಥವಾ ಬೆಂಗಳೂರು ಭಾಗ ಎಂದು ಹೇಳಿದಾಗ ಹೂಡಿಕೆದಾರರು ಬಂದು ಹೂಡಿಕೆ ಮಾಡಲಿದ್ದಾರೆ. ಬೆಂಗಳೂರು ಬ್ರ್ಯಾಂಡ್ ಪರಿಕಲ್ಪನೆಯಿಂದ ಹೇಳಲಾಗಿದೆ. ದೆಹಲಿಯಲ್ಲೂ ಈ ಮಾದರಿ ಮಾಡಿದ್ದಾರೆ. ಅದೇನು ಹೊಸದಲ್ಲ, ದೆಹಲಿ - ಎನ್‌ಸಿಆರ್ ಪರಿಕಲ್ಪನೆಯ ಅಡಿಯಲ್ಲಿ ಮೂರು ಪ್ರದೇಶಗಳಿವೆ. ಇದು ಹೊಸದೇನು ಅಲ್ಲ ಅಂತ ಅವರು ಹೇಳಿದ್ದಾರೆ. ಮುಂದುವರಿದು ತುಮಕೂರಿನಲ್ಲಿ ಯಾವುದೇ ಕಡ್ಡಿ ಅಲ್ಲಾಡಲ್ಲ. ಆದರೆ ಬೆಂಗಳೂರನ್ನ ಒಂದು ಭಾಗ ಎಂದು ಮಾಡಬೇಕು ಇದರಿಂದ ತುಮಕೂರಿಗೆ ಲಾಭವಾಗಲಿದೆ ಎನ್ನುವುದಷ್ಟೇ ಇದರ ಉದ್ದೇಶ ಎಂದು ಜಿ ಪರಮೇಶ್ವರ್ ಅವರು ಸ್ಪಷ್ಟಪಡಿಸಿದ್ದಾರೆ.

Tumkur: ಜಿ ಪರಮೇಶ್ವರ್ ಟ್ವೀಟ್

ಇನ್ನು ತುಮಕೂರು ಹೆಸರು ಬದಲಾವಣೆ ಹಾಗೂ ವಿಸ್ತೀರ್ಣಕ್ಕೆ ಸಂಬಂಧಿಸಿದಂತೆ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಜಿ. ಪರಮೇಶ್ವರ್ ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್‌ನಲ್ಲಿ ಕಲ್ಪತರ ನಾಡು ತುಮಕೂರಿನ ಹೆಸರು ಬದಲಾವಣೆ ಆಗುವುದಿಲ್ಲ. ಹೆಸರು ಬದಲಾಯಿಸಬೇಕು ಎಂದು ನಾನು ಯಾವುದೇ ರೀತಿಯ ಹೇಳಿಕೆಯನ್ನು ನೀಡಿಲ್ಲ. ಜಿಲ್ಲೆಯ ವಿಸ್ತೀರ್ಣವೂ ಬದಲಾಗುವುದಿಲ್ಲ.

Tumkur

ತುಮಕೂರನ್ನು ಬೆಂಗಳೂರು ಅಭಿವೃದ್ಧಿ ವಲಯದೊಂದಿಗಿನ ಸಂಪರ್ಕದ ಪರಿಕಲ್ಪನೆಯಡಿ ಪರಿಗಣಿಸುವ ಉದ್ದೇಶ, ಜಿಲ್ಲೆಯ ಸರ್ವಾಂಗೀಣ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡುವುದಾಗಿದೆ. ಬೆಂಗಳೂರು ಮಾದರಿಯ ಮೂಲಸೌಕರ್ಯ, ಕೈಗಾರಿಕಾ ಮತ್ತು ಹೂಡಿಕೆ ಅವಕಾಶಗಳ ಸಂಪರ್ಕದಿಂದ ತುಮಕೂರಿಗೆ ಹೆಚ್ಚಿನ ಹೂಡಿಕೆಗಳು ಹರಿದುಬಂದು, ಉದ್ಯೋಗ ಹಾಗೂ ಆರ್ಥಿಕ ಚಟುವಟಿಕೆಗಳು ವೃದ್ಧಿಯಾಗಲಿವೆ ಎಂಬ ನಂಬಿಕೆ ಇದೆ.

ಯಾವುದೇ ಕಾರಣಕ್ಕೂ ತುಮಕೂರಿನ ಹೆಸರು, ಗೌರವ ಮತ್ತು ಅಸ್ಮಿತೆಗೆ ಧಕ್ಕೆಯಾಗುವುದಿಲ್ಲ. "ಕಲ್ಪತರ ನಾಡು" ಎಂಬ ತನ್ನ ವೈಶಿಷ್ಟ್ಯ ಮತ್ತು ಗುರುತನ್ನು ತುಮಕೂರು ಸದಾ ಉಳಿಸಿಕೊಂಡೇ ಮುಂದುವರಿಯುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಸಾರ್ವಜನಿಕರು ಯಾವುದೇ ತಪ್ಪು ಕಲ್ಪನೆಗೆ ಒಳಗಾಗುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+