ತಲೆಗೆ ಐಫೋನ್ ಕಟ್ಟಿಕೊಂಡು ಬೆಂಗಳೂರಿನಲ್ಲಿ ತರಕಾರಿ ವ್ಯಾಪಾರ; ಈತನ ಒಂದು ಗಂಟೆಯ ಆದಾಯ ಕೇಳಿ ಸಾಫ್ಟ್‌ವೇರ್ ಇಂಜಿನಿಯರ್‌ಗಳೂ ಶಾಕ್

ಬೆಂಗಳೂರು: ತಂತ್ರಜ್ಞಾನ ಬೆಳೆದಂತೆಲ್ಲಾ ಜಗತ್ತು ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂಬುದಕ್ಕೆ ಇಲ್ಲೊಂದು ಅತ್ಯುತ್ತಮ ಮತ್ತು ಅಷ್ಟೇ ಶಾಕಿಂಗ್ ಉದಾಹರಣೆಯೊಂದು ಸಿಕ್ಕಿದೆ. ಬೆಂಗಳೂರಿನ ರಸ್ತೆ ಬದಿಯ ತರಕಾರಿ ವ್ಯಾಪಾರಿಯೊಬ್ಬರು ಕಾರ್ಪೊರೇಟ್ ಉದ್ಯೋಗಿಗಳಿಗಿಂತಲೂ ಹೆಚ್ಚು ಸಂಪಾದನೆ ಮಾಡುತ್ತಿರುವ ವಿಚಾರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ವೈಭವ್‌ ಹೆಸರಿನ ಇನ್‌ಸ್ಟಾಗ್ರಾಮ್‌ ಬಳಕೆದಾರರೊಬ್ಬರು ತಮಗೆ ಎದುರಾದ ಈ ವಿಚಿತ್ರ ಮತ್ತು ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಬಳಕೆದಾರರೊಬ್ಬರು ತಮ್ಮ್ಮ ಸ್ಕೂಟಿಯಲ್ಲಿ ಸಾಮಾನ್ಯ ರಸ್ತೆಯಲ್ಲಿ ಹೋಗುತ್ತಿದ್ದಾಗ, ಎದುರಿಗೆ ಕಂಡ ದೃಶ್ಯಕ್ಕೆ ದಿಕ್ಕಾಪಾಲಾಗಿ ಬ್ರೇಕ್ ಹಾಕಬೇಕಾಯಿತು. ಅಲ್ಲಿ ಸ್ಥಳೀಯ ತರಕಾರಿ ವ್ಯಾಪಾರಿಯೊಬ್ಬರು ತಮ್ಮ ತಲೆಗೆ ಒಂದು ವಿಚಿತ್ರವಾದ ಹೆಡ್‌ಬ್ಯಾಂಡ್ ಧರಿಸಿದ್ದರು. ಅದಕ್ಕೆ ಒಂದು ಐಫೋನ್ (iPhone) ಹಾಗೂ ಮೆಮೊರಿ ಕಾರ್ಡ್ ಅನ್ನು ಜೋಡಿಸಲಾಗಿತ್ತು. ಇದನ್ನು ಕಂಡು ಕುತೂಹಲ ತಡೆಯಲಾಗದೆ ಅವರು ವ್ಯಾಪಾರಿಯನ್ನು ನಿಲ್ಲಿಸಿ ಪ್ರಶ್ನಿಸಿದ್ದಾರೆ.

Vegetable Vendor

ವ್ಯಾಪಾರಿ ನೀಡಿದ ಉತ್ತರಕ್ಕೆ ನೆಟ್ಟಿಗರು ಶಾಕ್

ತಲೆಗೆ ಐಫೋನ್ ಕಟ್ಟಿಕೊಂಡು ಓಡಾಡುತ್ತಿರುವ ರಹಸ್ಯವನ್ನು ವ್ಯಾಪಾರಿ ಬಿಚ್ಚಿಟ್ಟಾಗ ಕೇಳುಗರು ಹುಬ್ಬೇರಿಸಿದ್ದಾರೆ. ಆತ ಕೇವಲ ತರಕಾರಿ ಮಾರುತ್ತಿರಲಿಲ್ಲ, ಬದಲಿಗೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ತರಬೇತಿಗಾಗಿ ರಸ್ತೆಗಳಲ್ಲಿನ 'ರಿಯಲ್ ವರ್ಲ್ಡ್ ಡೇಟಾ' (ನೈಜ ಜಗತ್ತಿನ ದೃಶ್ಯ ಹಾಗೂ ಮಾಹಿತಿ) ಸಂಗ್ರಹಿಸುತ್ತಿದ್ದ. ಅದಕ್ಕಾಗಿ ಎಐ ಕಂಪನಿಯೊಂದು ಆತನಿಗೆ ಗಂಟೆಗೆ ₹350 ನೀಡುತ್ತಿತ್ತು ಎಂದು ತಿಳಿದುಬಂದಿದೆ.

Apple Store: ಐಫೋನ್‌ ಪ್ರಿಯರೇ ಗಮನಿಸಿ, ಬೆಂಗಳೂರಿನ ಈ ಭಾಗದಲ್ಲಿ ತಲೆಯೆತ್ತಲಿದೆ ಎರಡನೇ ಆಪಲ್‌ ಸ್ಟೋರ್‌
Apple Store: ಐಫೋನ್‌ ಪ್ರಿಯರೇ ಗಮನಿಸಿ, ಬೆಂಗಳೂರಿನ ಈ ಭಾಗದಲ್ಲಿ ತಲೆಯೆತ್ತಲಿದೆ ಎರಡನೇ ಆಪಲ್‌ ಸ್ಟೋರ್‌

ಸಾಫ್ಟ್‌ವೇರ್ ಉದ್ಯೋಗಿಗಳೂ ಬೆರಗಾಗುವ ಆದಾಯ

ಈ ವ್ಯಾಪಾರಿಯ ದಿನದ ಗಳಿಕೆಯ ಲೆಕ್ಕಾಚಾರ ಹೀಗಿದೆ. ಒಂದು ಗಂಟೆಗೆ ₹350, ದಿನಕ್ಕೆ 10 ಗಂಟೆ ಕೆಲಸ ಮಾಡಿದರೆ ₹3,500, ತಿಂಗಳ ಒಟ್ಟು ಗಳಿಕೆ ಸುಮಾರು ₹1,05,000ಕ್ಕೂ ಅಧಿಕ ಎಂದು ತಿಳಿದುಬಂದಿದೆ. "ತಲೆಗೆ ಒಂದು ಸ್ಮಾರ್ಟ್‌ಫೋನ್ ಕಟ್ಟಿಕೊಂಡು ರಸ್ತೆಯಲ್ಲಿ ಓಡಾಡುವ ಒಬ್ಬ ಸಾಮಾನ್ಯ ಬೀದಿ ಬದಿಯ ವ್ಯಾಪಾರಿ, ಇಂದು ಭಾರತದ ಅರ್ಧದಷ್ಟು ಕಾರ್ಪೊರೇಟ್ ವಲಯದ ಸಾಫ್ಟ್‌ವೇರ್ ಹಾಗೂ ಇತರೆ ಕಂಪನಿಗಳ ಉದ್ಯೋಗಿಗಳಿಗಿಂತಲೂ ಹೆಚ್ಚು ಸಂಪಾದಿಸುತ್ತಿದ್ದಾನೆ ಎಂಬ ಸತ್ಯವನ್ನು ನನಗಿನ್ನೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭವಿಷ್ಯ ನಿಜಕ್ಕೂ ಊಹಿಸಲಾಗದಷ್ಟು ವಿಚಿತ್ರವಾಗಿದೆ" ಎಂದು ಈ ವಿಡಿಯೋ ಪೋಸ್ಟ್ ಮಾಡಿರುವ ವ್ಯಕ್ತಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಭವಿಷ್ಯದ ದಿನಗಳು ಹೀಗೆಯೇ ಇರಲಿವೆಯೇ?

ಟೆಕ್ನಾಲಜಿ ಮತ್ತು ಎಐ ಲೋಕದಲ್ಲಿ ಡೇಟಾ (ಮಾಹಿತಿ) ಎಷ್ಟು ಮಹತ್ವದ್ದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಸಾಂಪ್ರದಾಯಿಕ ಉದ್ಯೋಗಗಳಿಗಿಂತ ವಿಭಿನ್ನವಾಗಿ, ತಂತ್ರಜ್ಞಾನದ ಹೊಸ ಆವಿಷ್ಕಾರಗಳು ಸಾಮಾನ್ಯ ಜನರ ಕೈಗೆ ದೊಡ್ಡ ಮಟ್ಟದ ಆದಾಯ ತಂದುಕೊಡುತ್ತಿರುವುದು ಜಾಗತಿಕ ಮಾರುಕಟ್ಟೆಯ ಬದಲಾವಣೆಯನ್ನು ತೋರಿಸುತ್ತಿದೆ. 'ಒಂದು ವೇಳೆ ನಿಮ್ಮ ಬೆಳಗ್ಗಿನ ಪ್ರಯಾಣದ ವೇಳೆ ಇಂತಹ ದೃಶ್ಯ ಕಂಡರೆ ನೀವು ಏನು ಮಾಡುತ್ತೀರಿ?' ಎಂದು ನೆಟ್ಟಿಗರು ಈಗ ಪರಸ್ಪರ ಪ್ರಶ್ನಿಸಿಕೊಳ್ಳುತ್ತಿದ್ದಾರೆ.

"ಇದು ಭವಿಷ್ಯದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯನ್ನು ದೊಡ್ಡ ಟೆಕ್ ಕಂಪನಿಗಳು ಹೇಗೆ ನಿಯಂತ್ರಿಸುತ್ತಾರೆ ಎಂಬುದಕ್ಕೆ ಮುನ್ನುಡಿ. ನೀವು ಕೆಲಸ ಮಾಡುವ ಕಂಪನಿಯೇ ನಿಮ್ಮ ಸಂಬಳವನ್ನು ನಿರ್ಧರಿಸುತ್ತದೆ ಮತ್ತು ಆ ಹಣವನ್ನು ನೀವು ಹೊರಗೆ ಹೇಗೆ ಖರ್ಚು ಮಾಡಬೇಕು ಎಂಬುದನ್ನೂ ಅವರೇ ನಿಯಂತ್ರಿಸುತ್ತಾರೆ. ಇಲ್ಲಿ ಯಾವುದೇ ಮಾನವ ಹಸ್ತಕ್ಷೇಪ ಇರುವುದಿಲ್ಲ, ಎಲ್ಲವೂ ಯಾಂತ್ರೀಕರಣಗೊಳ್ಳುತ್ತಿದೆ" ಎಂದು ಒಬ್ಬರು ಕಾಮೆಂಟ್‌ ಮಾಡುವ ಮೂಲಕ ಎಚ್ಚರಿಸಿದ್ದಾರೆ.

ಮುಂದಿದೆ ಕ್ಷಾಮ ಎಂದು ಎಚ್ಚರಿಕೆ

ಯುರೋಪ್‌ನಲ್ಲಿ ಈಗಾಗಲೇ ಪ್ಯಾಕೇಜ್ಡ್ ಕುಡಿಯುವ ನೀರಿನ ಬೆಲೆಯನ್ನು ಹೇಗೆ ನಿಯಂತ್ರಿಸಲಾಗುತ್ತಿದೆ ಎಂಬುದನ್ನು ನೆನಪಿಸಿರುವ ಅವರು, ಭಾರತದಲ್ಲೂ ಇಂತಹ ಪರಿಸ್ಥಿತಿ ಅತಿ ಶೀಘ್ರದಲ್ಲೇ ಬರಲಿದೆ ಎಂದಿದ್ದಾರೆ. "ಭಾರತದಲ್ಲಿ ಎಐ ಮತ್ತು ಟೆಕ್ನಾಲಜಿಗಾಗಿ ಸ್ಥಾಪನೆಯಾಗುತ್ತಿರುವ ಬೃಹತ್ 'ಡೇಟಾ ಸೆಂಟರ್'ಗಳು (Data Centres) ನಮ್ಮಲ್ಲಿರುವ ಸಿಹಿನೀರಿನ ಸಂಪನ್ಮೂಲವನ್ನು ಅತಿ ವೇಗವಾಗಿ ಹೀರಿಕೊಳ್ಳಲಿವೆ. ಇದರ ನೇರ ಪರಿಣಾಮವಾಗಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ತೀವ್ರ ಕ್ಷಾಮವನ್ನು ಪ್ರತಿಯೊಬ್ಬರೂ ಅನುಭವಿಸಬೇಕಾಗುತ್ತದೆ" ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಮೇಲ್ನೋಟಕ್ಕೆ ಗಂಟೆಗೆ ₹350 ಗಳಿಕೆಯ ಈ ಎಐ ಡೇಟಾ ಸಂಗ್ರಹಣೆ ಆಕರ್ಷಕವಾಗಿ ಕಂಡರೂ, ಅದರ ಹಿಂದೆ ಅಡಗಿರುವ ತಂತ್ರಜ್ಞಾನ ಮತ್ತು ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಈ ಕಾಮೆಂಟ್‌ನಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+