Bengaluru Property: ಕೈತುಂಬಾ ಹಣವಿದ್ದರೂ ಬೆಂಗಳೂರು ಪ್ರಾಪರ್ಟಿ ಖರೀದಿಗೆ ಭಯವಾಗ್ತಿದೆ ಎಂದ ಐಟಿ ದಂಪತಿ, ಕಾರಣವೇನು

ಬೆಂಗಳೂರಿನಲ್ಲಿ ಬಾಡಿಗೆ ಮನೆ, ಮನೆ ಖರೀದಿ ಮಾಡುವುದು, ಜಾಗ ಹಾಗೂ ಪ್ರಾಪರ್ಟಿಗಳ ಖರೀದಿ ವಿಚಾರವು ಬಿಸಿಬಿಸಿ ಚರ್ಚೆಯ ವಿಷಯವಾಗಿ ಬದಲಾಗಿದೆ. ಬೆಂಗಳೂರಿನಲ್ಲಿ ಮನೆ ಹಾಗೂ ಪ್ರಾಪರ್ಟಿಗಳ ಬೆಲೆಯು ಗಗನಮುಖಿಯಾಗಿದೆ. ಅಲ್ಲದೆ ಬೆಂಗಳೂರಿನ ವಿವಿಧ ಭಾಗಗಳಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದಕ್ಕೆ ಶುರುವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯಿಂದಾಗಿ ಜನ ಪ್ರಾಪರ್ಟಿ ಖರೀದಿ ಮಾತ್ರವಲ್ಲ ದೊಡ್ಡ ಮೊತ್ತದ ಹಣ ಪಾವತಿ ಮಾಡಿ ಬಾಡಿಗೆ ಮನೆಗೆ ಹೋಗುವುದಕ್ಕೂ - ಅಪಾರ್ಟ್‌ಮೆಂಟ್‌ಗಳಲ್ಲಿ ವಾಸ ಮಾಡುವುದಕ್ಕೂ ಸಹ ಎರಡು ಬಾರಿ ಯೋಚನೆ ಮಾಡುತ್ತಿದ್ದಾರೆ. ಬೆಂಗಳೂರು ಮೂಲದ ಟೆಕ್ ದಂಪತಿ ದಶಕಕ್ಕೂ ಹೆಚ್ಚು ಅನುಭವವಿದ್ದರೂ ಪ್ರಾಪರ್ಟಿ ಖರೀದಿ ವಿಚಾರದಲ್ಲಿ ಆತಂಕ ಶುರುವಾಗಿದೆ ಎಂದು ಹೇಳಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾ ರೆಡ್ಡಿಟ್‌ನಲ್ಲಿ ಅವರು ಮಾಡಿರುವ ಪೋಸ್ಟ್‌ ವೈರಲ್ ಆಗಿದ್ದು, ಐಟಿ ವಲಯದಲ್ಲಿ ನಡೆಯುತ್ತಿರುವ ಬೃಹತ್ ಲೇಆಫ್ ಪ್ರಕ್ರಿಯೆಗೆ ಹಿಡಿದ ಕನ್ನಡಿಯಂತೆ ಇದೆ. ಬೆಂಗಳೂರಲ್ಲಿ ಆಸ್ತಿ ಖರೀದಿ ವಿಚಾರದಲ್ಲಿ ನಡೆದಿರುವ ಚರ್ಚೆಯ ವಿವರ ಇಲ್ಲಿದೆ.

ಬೆಂಗಳೂರಿನಲ್ಲಿ ಬಾಡಿಗೆ ಮನೆಗಳ ವಿಚಾರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯಂತೆಯೇ ಇದೀಗ ಬೆಂಗಳೂರಲ್ಲಿ ಪ್ರಾಪರ್ಟಿ ಖರೀದಿ ವಿಚಾರವೂ ಹೆಚ್ಚು ಚರ್ಚೆ ಆಗುತ್ತಿದೆ. ಬೆಂಗಳೂರಲ್ಲಿ ಫ್ಲಾಟ್‌ಗೆ ಡೌನ್ ಪೇಮೆಂಟ್ ಮತ್ತು ಇಎಂಐ ಪಾವತಿಯನ್ನು ನಾವು ಭರಿಸಬಲ್ಲೆವು ಎಂದು ದಂಪತಿಗಳು ಹೇಳಿದ್ದಾರೆ. ಆದರೆ, ಎಐ ಕಾರಣಕ್ಕೆ ಐಟಿಯಲ್ಲಿ ಉದ್ಯೋಗ ಭದ್ರತೆ ಇಲ್ಲದೆ ಇರುವುದು ಇದೀಗ ಗೃಹ ಸಾಲದ ತೆಗೆದುಕೊಳ್ಳುವ ವಿಚಾರದಲ್ಲಿ ಆತಂಕ ಶುರುವಾಗಿದೆ ಎಂದು ಅವರು ಹೇಳಿದ್ದಾರೆ. 10ರಿಂದ 11 ವರ್ಷಗಳ ಅನುಭವ ಹೊಂದಿರುವ ದಂಪತಿಯು, ಉತ್ಪನ್ನ ಆಧಾರಿತ ಕಂಪನಿಗಳಲ್ಲಿ ಸಾಫ್ಟ್‌ವೇರ್ ಡೆವಲಪರ್‌ಗಳಾಗಿದ್ದಾರೆ. ಆರಂಭದಲ್ಲಿ ನಾವು ಮನೆ ಖರೀದಿಸುವ ಬಗ್ಗೆ ಉತ್ಸುಕರಾಗಿದ್ದೆವೆ. ಆದರೆ ಬದಲಾಗುತ್ತಿರುವ ಪರಿಸ್ಥಿತಿಯಲ್ಲಿ ಮನ ಖರೀದಿ ಮಾಡುವ ಬಗ್ಗೆ ಎರಡು ಬಾರಿ ಯೋಚನೆ ಮಾಡುವಂತೆ ಆಗಿದೆ ಎಂದು ಅವರು ಹೇಳಿಕೊಂಡಿದ್ದಾರೆ.

Bengaluru Property

ಆರ್ಥಿಕವಾಗಿ, ನಾವು ಡೌನ್ ಪೇಮೆಂಟ್ ಮತ್ತು ಇಎಂಐ ಅನ್ನು ನಿರ್ವಹಿಸಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲಸದಿಂದ ತೆಗೆದು ಹಾಕುತ್ತಿರುವ ಪ್ರಕ್ರಿಯೆಗಳು ಮತ್ತು ತಂತ್ರಜ್ಞಾನ ಉದ್ಯಮದಲ್ಲಿನ ಅನಿಶ್ಚಿತತೆಯೊಂದಿಗೆ, ಇಷ್ಟು ದೊಡ್ಡ ಸಾಲವನ್ನು ತೀರಿಸಲು ಸಾಧ್ಯವೇ ಎನ್ನುವ ಬಗ್ಗೆ ತುಂಬಾ ಆತಂಕಕ್ಕೊಳಗಾಗಿದ್ದೇವೆ. ನಾವು ಆರಂಭದಲ್ಲಿ ಖರೀದಿಯ ಬಗ್ಗೆ ಉತ್ಸುಕರಾಗಿದ್ದೆವು, ಆದರೆ ಈಗ ಇದು ಸರಿಯಾದ ಸಮಯವೇ ಅಥವಾ ಇನ್ನೂ ಒಂದೆರಡು ವರ್ಷ ಕಾಯಬೇಕೇ ಎಂದು ನಾವು ವಿಚಾರ ಮಾಡುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಎಚ್ಚರಿಕೆಯ ನಂತರ ಪ್ರಾಪರ್ಟಿ ಖರೀದಿ ವಿಚಾರದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆದಿದೆ ಎಂದು ರಿಯಲ್ ಎಸ್ಟೇಟ್ ತಜ್ಞರು ಹೇಳಿದ್ದಾರೆ.

Bengaluru Property: ಬೆಂಗಳೂರಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಬ್ರೇಕ್ - ಆಸ್ತಿದಾರರಿಗೆ ಹೊಸ ಎಚ್ಚರಿಕೆ
Bengaluru Property: ಬೆಂಗಳೂರಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣಕ್ಕೆ ಬ್ರೇಕ್ - ಆಸ್ತಿದಾರರಿಗೆ ಹೊಸ ಎಚ್ಚರಿಕೆ

ಕಳೆದ ವರ್ಷವೇ ಮನೆ ಖರೀದಿ ಮಾಡಬೇಕು ಎಂದು ವಿಚಾರ ಮಾಡಿದ್ದೆವು. ಇದಕ್ಕೆ ಬೇಕಾದ ಸಿದ್ಧತೆಗಳನ್ನೂ ಸಹ ಮಾಡಿಕೊಂಡಿದ್ದೆವು. ಆದಾಗ್ಯೂ ಉದ್ಯೋಗ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮತ್ತು AI ಎಷ್ಟು ವೇಗವಾಗಿ ಪ್ರಗತಿ ಹೊಂದುತ್ತಿದೆ ಎಂದು ತಿಳಿದುಕೊಂಡು, ನನ್ನ ಉಳಿತಾಯವು ಮನೆಯ ಸಂಪೂರ್ಣ ಖರೀದಿಯನ್ನು ಸರಿದೂಗಿಸಬಹುದು ಮತ್ತು ಸಾಲವನ್ನು ತೆಗೆದುಕೊಳ್ಳದಿದ್ದರೂ ಸಹ, ಮನೆ ಖರೀದಿಸದಿರಲು ನಾನು ನಿರ್ಧರಿಸಿದೆ ಎಂದು ರೆಡ್ಡಿಟರ್ ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+