Cockroach: 4 ದಿನದಲ್ಲಿ ಬಿಜೆಪಿ ದಾಖಲೆ ಮುರಿದ ಕಾಕ್ರೋಚ್ ಜನತಾ ಪಾರ್ಟಿ: ನಟ ಪ್ರಕಾಶ್ ರಾಜ್‌ ಬೆಂಬಲ, ಪೋಸ್ಟ್‌ ವೈರಲ್‌

Cockroach: ಭಾರತದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ವು ಇದೀಗ ಮತ್ತೊಂದು ಮಹತ್ವದ ಟ್ವೀಟ್ ಮಾಡಿದೆ. ಇದೀಗ ಈ ಅಭಿಯಾನಕ್ಕೆ ಬೆಂಬಲಿಸುವವರ ಸಂಖ್ಯೆ ಹೆಚ್ಚಾಗಿದ್ದು, ನಟ ಪ್ರಕಾಶ್ ರಾಜ್ ಅವರು ಸಹ ಈ ಕಾಕ್ರೋಚ್ ಪಾರ್ಟಿಗೆ ಬೆಂಬಲ ಕೊಟ್ಟಿದ್ದಾರೆ. ಭಾರತದಲ್ಲಿ ಈಚೆಗೆ ಪ್ರಾರಂಭವಾಗಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ದ ಸಂಸ್ಥಾಪಕ ಅಭಿಜೀತ್ ದೀಪ್ಕೆ (Abhijeet Dipke) ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡಿರುವ ಪೋಸ್ಟ್‌ವೊಂದು ಇದೀಗ ವೈರಲ್ ಆಗುತ್ತಿದೆ. ಈ GenZ ಚಳವಳಿ ನೇಪಾಳ ಅಥವಾ ಬಾಂಗ್ಲಾದೇಶದಲ್ಲಿ ನಡೆದಂತೆ ಬದಲಾಗುತ್ತದೆಯೇ ಎಂದು ಅನೇಕ ಪತ್ರಕರ್ತರು ನನ್ನನ್ನು ಕೇಳುತ್ತಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಮುಂದುವರಿದು ನಾನು ಇದನ್ನು ಸಂಪೂರ್ಣವಾಗಿ ಸ್ಪಷ್ಟಪಡಿಸುತ್ತೇನೆ. ಅಂತಹ ಹೋಲಿಕೆಗಳನ್ನು ಮಾಡುವ ಮೂಲಕ ಭಾರತದ GenZ ಅನ್ನು ಅವಮಾನಿಸಬೇಡಿ ಅಥವಾ ಕಡಿಮೆ ಅಂದಾಜು ಮಾಡಬೇಡಿ. ಈ ದೇಶದ ಯುವಕರು ಅನೇಕರು ಅವರಿಗೆ ನೀಡುವ ಮನ್ನಣೆಗಿಂತ ಹೆಚ್ಚು ಪ್ರಬುದ್ಧರು, ಜಾಗೃತರು ಮತ್ತು ರಾಜಕೀಯವಾಗಿ ಪ್ರಜ್ಞೆ ಹೊಂದಿದ್ದಾರೆ. ಅವರು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಅರ್ಥಮಾಡಿಕೊಳ್ಳುತ್ತಾರೆ ಮತ್ತು ಶಾಂತಿಯುತ ಮತ್ತು ಪ್ರಜಾಪ್ರಭುತ್ವ ವಿಧಾನಗಳ ಮೂಲಕ ತಮ್ಮ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ ಎಂದು ಹೇಳಿದ್ದಾರೆ.

Cockroach: ಭಾರತದಲ್ಲೂ ನೇಪಾಳ ಮಾದರಿ ಜೆನ್‌ಜೀ ಕ್ರಾಂತಿ: ನಾನೂ ಕ್ರಾಕೋಚ್ ಅಂತಿದ್ದಾರೆ ಯುವಕರು, ಏನಿದು ಅಭಿಯಾನ
Cockroach: ಭಾರತದಲ್ಲೂ ನೇಪಾಳ ಮಾದರಿ ಜೆನ್‌ಜೀ ಕ್ರಾಂತಿ: ನಾನೂ ಕ್ರಾಕೋಚ್ ಅಂತಿದ್ದಾರೆ ಯುವಕರು, ಏನಿದು ಅಭಿಯಾನ

ಮುಂದುವರಿದು ದಯವಿಟ್ಟು, ಯುವಕರನ್ನು ಕೀಳಾಗಿ ಕಾಣಬೇಡಿ. ಈ ಯುವಕರಲ್ಲಿ ಅನೇಕರು ಪ್ರಸ್ತುತ ಸರ್ಕಾರವನ್ನು ನಡೆಸುತ್ತಿರುವವರಿಗಿಂತ ಹೆಚ್ಚು ವಿದ್ಯಾವಂತರು ಮತ್ತು ಮಾಹಿತಿಯುಕ್ತರು ಎಂದೂ ಅವರು ಹೇಳಿಕೊಂಡಿದ್ದಾರೆ. ಅಭಿಜೀತ್ ದೀಪ್ಕೆ ಅವರು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಮಾಡಿರುವ ಪೋಸ್ಟ್‌ ವೈರಲ್ ಆಗುತ್ತಿದೆ. ಈ ಪೋಸ್ಟ್‌ಗೆ ನಟ ಪ್ರಕಾಶ್ ರಾಜ್ ಅವರು ಸೇರಿದಂತೆ ಹಲವರು ಬೆಂಬಲ ಸೂಚಿಸಿದ್ದಾರೆ. ನಾನು ಇದೇ ಆಗಲಿ ಎಂದು ಆಶಿಸುತ್ತೇನೆ. ನಮ್ಮ ದೇಶದ ಯುವಕರು ಎದ್ದು ನಿಂತು, ವಿರೋಧಿಸಿ ತಮ್ಮ ಹಕ್ಕುಗಳನ್ನು ಮರಳಿ ಪಡೆಯುವಂತಾಗಲಿ. ನಿಮ್ಮೆಲ್ಲರಿಗೂ ಇನ್ನಷ್ಟು ಶಕ್ತಿ ಸಿಗಲಿ ಎಂದು ನಟ ಪ್ರಕಾಶ್ ರಾಜ್ ಅವರು ಅಭಿಪ್ರಾಯಪಟ್ಟಿದ್ದಾರೆ.

Cockroach

Cockroach: World's largest party they said🤭 ಎಂದು ಟ್ವೀಟ್‌

ಇನ್ನು ಸೋಶಿಯಲ್ ಮೀಡಿಯಾದಲ್ಲಿ ಫಾಲೋವರ್ಸ್‌ಗಳ ಸಂಖ್ಯೆಯಲ್ಲಿ ಬಿಜೆಪಿ ಪಾರ್ಟಿಯ ದಾಖಲೆಯನ್ನು ಕಾಕ್ರೋಚ್ ಜನತಾ ಪಕ್ಷವು ಕೇವಲ 4 ದಿನಗಳಲ್ಲಿ ಮುರಿದಿದೆ. ಮುಂದುವರಿದು ಅವರು ಹೇಳಿದ್ದು ಜಗತ್ತಿನ ಅತಿ ದೊಡ್ಡ ಪಾರ್ಟಿ ಎಂದು ಅವರಿಗಿಂತ ಹೆಚ್ಚು ಫಾಲೋವರ್ಸ್‌ ಇರುವು ವಿಷಯವನ್ನು ಹಂಚಿಕೊಳ್ಳಲಾಗಿದೆ. ದೇಶದ ಯುವರಕನ್ನು ಕಡಿಮೆ ಅಂದಾಜು ಮಾಡಬೇಡಿ ಎಂದು ಕಾಕ್ರೋಚ್ ಜನತಾ ಪಕ್ಷ ಟ್ವೀಟ್ ಮಾಡಿದೆ.

ಕಾಕ್ರೋಚ್ ಜನತಾ ಪಕ್ಷದ ಫಾಲೋವರ್ಸ್ ಸಂಖ್ಯೆ 8.8 ಮಿಲಿಯನ್ ಆಗಿದ್ದರೆ, ಬಿಜೆಪಿ ಪಕ್ಷದ್ದು 8.7 ಮಿಲಿಯನ್ ಇದೆ. ಕೇವಲ ನಾಲ್ಕು ದಿನಗಳಲ್ಲಿ ಬಿಜೆಪಿಯ ದಾಖಲೆಯನ್ನು ಕಾಕ್ರೋಚ್ ಜನತಾ ಪಕ್ಷ ಮುರಿದಂತೆ ಆಗಿದೆ. ಆದರೆ ಈ ಫಾಲೋವರ್ಸ್‌ಗಳ ಸಂಖ್ಯೆಯಲ್ಲಿ ಹೆಚ್ಚಾಗಿ ಪಾಕಿಸ್ತಾನದವರು, ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶದ ಯುವಕರು ಇದ್ದಾರೆ ಎಂದು ಹಲವರು ವಿರೋಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+