ಬೆಂಗಳೂರಿನಲ್ಲಿ ರಸ್ತೆ ಬದಿ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ; ಸಿಸಿಟಿವಿಯಲ್ಲಿ ವಿಕೃತನ ಕೃತ್ಯ ಸೆರೆ

ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಕಿಪೇಟೆ ಗಲ್ಲಿ ರಸ್ತೆಯಲ್ಲಿ ವಿಕೃತನೊಬ್ಬ ರಸ್ತೆ ಬದಿಯಲ್ಲಿ ಮಲಗಿದ್ದ ಹಸುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮೇ 5ರಂದು ತಡರಾತ್ರಿ ಸುಮಾರು 1:47ಕ್ಕೆ ಈ ಘಟನೆ ನಡೆದಿದೆ. ಆರೋಪಿಯು ಹಸುವಿನ ಮೇಲೆ ಅತ್ಯಂತ ವಿಕೃತವಾಗಿ ಎರಗಿದ್ದಾನೆ ಎಂದು ತಿಳಿದುಬಂದಿದೆ.

ಸಿಸಿಟಿವಿ ದೃಶ್ಯ ವೈರಲ್

ಈ ಘಟನೆ ತಕ್ಷಣಕ್ಕೆ ಯಾರಿಗೂ ತಿಳಿದುಬಂದಿರಲಿಲ್ಲ. ಆದರೆ, ಮೇ 17ರಂದು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ "GarudEyeIntel/Defence Intel" ಎಂಬ ಖಾತೆಯು ಈ ಕೃತ್ಯದ ಸಿಸಿಟಿವಿ (CCTV) ದೃಶ್ಯಾವಳಿಗಳನ್ನು ಹಂಚಿಕೊಂಡಿತ್ತು. ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ತಕ್ಷಣದ ಕ್ರಮಕ್ಕೆ ಒತ್ತಾಯಿಸಿದ ಬೆನ್ನಲ್ಲೇ ಈ ವಿಡಿಯೋ ಭಾರಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Bengaluru

ನಿರ್ಜನ ರಸ್ತೆಗಾಗಿ ಕಾದು ವಿಕೃತಿ ಮೆರೆದ ಪಾಪಿ

ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ವಿಕೃತ ಮನಸ್ಥಿತಿ ಕಂಡುಬಂದಿದೆ. ಆತ ದ್ವಿಚಕ್ರ ವಾಹನದಲ್ಲಿ ಬಂದು ರಸ್ತೆ ಬದಿಯಲ್ಲಿ ಮಲಗಿದ್ದ ಹಸುವಿನ ಬಳಿಯೇ ನಿಂತುಕೊಂಡಿದ್ದಾನೆ. ರಸ್ತೆಯಲ್ಲಿ ಜನರ ಓಡಾಟ ಸಂಪೂರ್ಣವಾಗಿ ನಿಂತು, ರಸ್ತೆ ನಿರ್ಜನವಾಗುವವರೆಗೂ ಕಾದು, ನಂತರ ತನ್ನ ವಿಕೃತ ಕಾಮದ ಕೃತ್ಯವನ್ನು ಎಸಗಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರಿಂದ ಸ್ವಯಂಪ್ರೇರಿತ ದೂರು ದಾಖಲು

ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಎಚ್ಚೆತ್ತ ಕಾಟನ್‌ಪೇಟೆ ಪೊಲೀಸರು, ಯಾರೂ ಅಧಿಕೃತ ದೂರು ನೀಡದಿದ್ದರೂ ತಾವಾಗಿಯೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡರು. ತಕ್ಷಣವೇ ಕಾರ್ಯಪ್ರವೃತ್ತರಾದ ಕಣ್ಗಾವಲು ಘಟಕದ ಅಧಿಕಾರಿಗಳು ಸಿಸಿಟಿವಿ ದೃಶ್ಯದ ನಿಖರ ಸ್ಥಳವನ್ನು ಪತ್ತೆಹಚ್ಚಿ ಆರೋಪಿಗೆ ಬಲೆ ಬೀಸಿದರು.

Bengaluru Property: ಕೈತುಂಬಾ ಹಣವಿದ್ದರೂ ಬೆಂಗಳೂರು ಪ್ರಾಪರ್ಟಿ ಖರೀದಿಗೆ ಭಯವಾಗ್ತಿದೆ ಎಂದ ಐಟಿ ದಂಪತಿ, ಕಾರಣವೇನು
Bengaluru Property: ಕೈತುಂಬಾ ಹಣವಿದ್ದರೂ ಬೆಂಗಳೂರು ಪ್ರಾಪರ್ಟಿ ಖರೀದಿಗೆ ಭಯವಾಗ್ತಿದೆ ಎಂದ ಐಟಿ ದಂಪತಿ, ಕಾರಣವೇನು

ಕೆಲವೇ ಗಂಟೆಗಳಲ್ಲಿ ಡೆಲಿವರಿ ಬಾಯ್ ಬಂಧನ

ಘಟನಾ ಸ್ಥಳದ ಸುತ್ತಮುತ್ತಲಿನ ಇತರ ಸಿಸಿಟಿವಿ ದೃಶ್ಯಗಳು ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು 24 ವರ್ಷದ ಶಹಬಾಜ್ ಆಲಂ ಎಂದು ಗುರುತಿಸಲಾಗಿದೆ. ಈತ ಕಳೆದ ಒಂದು ತಿಂಗಳಿನಿಂದ ಕಾಟನ್‌ಪೇಟೆಯಲ್ಲಿ ವಾಸಿಸುತ್ತಿದ್ದು, ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ತನಿಖೆಯ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಈತನಿಗೆ ಈ ಹಿಂದೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಬಂಧಿತ ಆರೋಪಿ ಶಹಬಾಜ್ ಆಲಂ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ. ಆತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 325 (ಅನೈಸರ್ಗಿಕ ಲೈಂಗಿಕ ದೌರ್ಜನ್ಯ) ಹಾಗೂ ಪ್ರಾಣಿ ಹಿಂಸೆ ತಡೆ ಕಾಯ್ದೆ ಸೆಕ್ಷನ್ 11 (ಪ್ರಾಣಿಗಳ ಮೇಲಿನ ಕ್ರೌರ್ಯ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳೆದ ಸೋಮವಾರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೋರ್ಟ್ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಪೊಲೀಸರು ಪ್ರಕರಣದ ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+