ನರೇಂದ್ರ ಮೋದಿ ರೋಡ್ ಶೋ, ವಾರಣಾಸಿಯೆಲ್ಲಾ ಕೇಸರಿಮಯ
Recommended Video

ವಾರಣಾಸಿ, ಏಪ್ರಿಲ್ 25: ಸ್ವಕ್ಷೇತ್ರ ವಾರಣಾಸಿಯಲ್ಲಿ ನರೇಂದ್ರ ಮೋದಿ ಅವರು ಇಂದು ರೋಡ್ ಶೋ ನಡೆಸಲಿದ್ದಾರೆ. ಕೆಲವೇ ನಿಮಿಷದಲ್ಲಿ ರೋಡ್ ಶೋ ಆರಂಭವಾಗಲಿದೆ.
ಮೋದಿ ಅವರನ್ನು ನೋಡಲು ಲಕ್ಷಾಂತರ ಸಂಖ್ಯೆಯಲ್ಲಿ ಜನರು ವಾರಣಾಸಿಗೆ ಬಂದಿದ್ದಾರೆ. ಈಗಾಗಲೇ ವಾರಣಾಸಿಯ ರಸ್ತೆಗಳ ಇಕ್ಕೆಲಗಳಲ್ಲಿ ಕೇಸರಿ ಬಾವುಟಗಳು ಹಿಡಿದ ಬಿಜೆಪಿ ಕಾರ್ಯಕರ್ತರು ನೆರೆದಿದ್ದಾರೆ. ವಾರಣಾಸಿಯ ರಸ್ತೆಗಳೆಲ್ಲಾ ಕೇಸರಿಮಯವಾಗಿದೆ.
ಮೋದಿಯವರು ಮದನ್ ಮೋಹನ್ ಮಾಳ್ವಿಯಾ ಅವರ ಪ್ರತಿಮೆಗೆ ಹೂ ಮಾಲೆ ಹಾಕಿ ರೋಡ್ ಶೋ ವನ್ನು ಪ್ರಾರಂಭಿಸಲಿದ್ದಾರೆ. ಬರೋಬ್ಬರಿ ಆರು ಕಿ.ಮೀ ದೂರದ ರೋಡ್ ಶೋ ಇದಾಗಿದ್ದು, ರೋಡ್ ಶೋ ಅಂತ್ಯದಲ್ಲಿ ಗಂಗಾ ಆರತಿ ಕಾರ್ಯಕ್ರಮದಲ್ಲಿ ಮೋದಿ ಅವರು ಪಾಲ್ಗೊಂಡು ಆಶೀರ್ವಾದ ಪಡೆಯಲಿದ್ದಾರೆ.

ಮೋದಿ ಅವರು ಕೆಲವೇ ಹೊತ್ತಿನಲ್ಲಿ ವಾರಣಾಸಿಗೆ ಬರಲಿದ್ದು, ಅವರ ಜೊತೆ ನಿತಿನ್ ಗಡ್ಕರಿ, ಸುಷ್ಮಾ ಸ್ವರಾಜ್ ಸೇರಿ ಹಲವು ಪ್ರಮುಖ ಮುಖಂಡರು ಭಾಗವಹಿಸಲಿದ್ದಾರೆ.
ವಾರಣಾಸಿಯ ತುಂಬೆಲ್ಲಾ ಈಗಾಗಲೇ ಮೋದಿ ಪರ ಘೋಷಣೆಗಳು ಮೊಳಗತೊಡಗಿವೆ. ಮೋದಿ ಅವರ ರೋಡ್ ಶೋ ನೊಡಲು ಬೆಳಿಗ್ಗಿನಿಂದಲೂ ಜನರು ಸೇರಿದ್ದಾರೆ. ಮೋದಿ ಅವರ ಮೇಲೆ ಎರಚಲೆಂದು ಹೂಗಳನ್ನು ಹಿಡಿದು, ಮನೆಯ ತಾರಸಿಗಳ ಮೇಲೆಲ್ಲಾ ಜನರು ಕಾಯುತ್ತಾ ಕೂತಿರುವುದು ಕಂಡು ಬರುತ್ತಿದೆ.
ನಾಳೆ ಇದೇ ಕ್ಷೇತ್ರದಿಂದ ಮೋದಿ ಅವರು ನಾಮಪತ್ರ ಸಲ್ಲಿಸಲಿದ್ದಾರೆ. ಕಳೆದ ಬಾರಿಯೂ ಮೋದಿ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸಿ 5.50 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದರು. 2014ರಲ್ಲಿಯೂ ಸಹ ಮೋದಿ ಅವರು ನಾಮಪತ್ರಕ್ಕೆ ಮುನ್ನಾ ಇದೇ ರೀತಿಯಾಗಿ ಬೃಹತ್ ರೋಡ್ ಶೋ ಹಮ್ಮಿಕೊಂಡಿದ್ದರು.
ವಾರಣಾಸಿಯಲ್ಲಿ ಮೋದಿ ಅವರನ್ನು ನೋಡಲು ಸುತ್ತ-ಮುತ್ತಲ ಹಳ್ಳಿಗಳಿಂದಲೂ ಜನರು ಆಗಮಿಸಿದ್ದು, ಭಾರಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ದೇಶದ ಇತಿಹಾಸದಲ್ಲೇ ಭಾರಿ ದೊಡ್ಡ ಚುನಾವಣಾ ರೋಡ್ ಶೋ ಇದಾಗಲಿದೆ ಎಂದು ಮಾಧ್ಯಮಗಳು ಬಿಂಬಿಸಿವೆ.












Click it and Unblock the Notifications