ಕೇದಾರನಾಥದಲ್ಲಿ ಮೋದಿ ಧ್ಯಾನ, ಕಾಶಿಯಲ್ಲಿ 'ಮತಧ್ಯಾನ'

ಲಕ್ನೋ, ಮೇ 19: ಮತ್ತೆ ಪ್ರಧಾನಿಯಾಗುವ ಕನಸು ಕಾಣುತ್ತಿರುವ ನರೇಂದ್ರ ಮೋದಿ ವಾರಣಾಸಿಯಿಂದ ಮರು ಆಯ್ಕೆ ಬಯಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕೊನೆಯ ಹಂತದ ಮತದಾನದಲ್ಲಿವಾರಣಾಸಿಗೆ ಚುನಾವಣೆ ನಡೆಯುತ್ತಿದ್ದು, ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ನಿಂದ ಅಲೋಕ್ ರೈ ಹಾಗೂ ಎಸ್‌ಪಿ-ಬಿಎಸ್ಪಿ ಮೈತ್ರಿಕೂಟದಿಂದ ಶಾಲಿನಿ ಯಾದವ್‌ ಸ್ಪರ್ಧಿಸುತ್ತಿದ್ದಾರೆ.

ಬಿಎಸ್ಎಫ್‌ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್‌ ನಾಮಪತ್ರ ತಿರಸ್ಕಾರ ಹಾಗೂ ಕಾಂಗ್ರೆಸ್‌ನಿಂದ ಪ್ರಿಯಾಂಕಾ ಗಾಂಧಿ ವಾದ್ರಾ ಸ್ಪರ್ಧಿಸದಿರುವುದು ಮೋದಿಗೆ ಈ ಕ್ಷೇತ್ರದಲ್ಲಿ ಗೆಲುವು ಸುಲಭವಾಗಿದೆ ಎನ್ನಲಾಗಿದೆ.

Narendra Modi eyeing on big margin at Varanasi

ಇದೇ ಕಾರಣಕ್ಕೆ ನಾಮಪತ್ರ ಸಲ್ಲಿಸುವ ಹಿಂದಿನ ದಿನ ಭರ್ಜರಿ ರೋಡ್‌ಶೋ ನಡೆಸಿದ್ದನ್ನು ಬಿಟ್ಟರೆ ವಾರಣಾಸಿಯಲ್ಲಿ ಮೋದಿ ಪ್ರಚಾರವನ್ನೇ ಮಾಡಿಲ್ಲ. ಹಿಂದೂಗಳ ಪವಿತ್ರ ಕ್ಷೇತ್ರ ಕಾಶಿ ಇರುವ ವಾರಣಾಸಿಯು ಬಿಜೆಪಿಗೆ ಪ್ರತಿಷ್ಠೆಯ ಕ್ಷೇತ್ರವಾಗಿದೆ.

ಹೀಗಾಗಿ ವಾರಣಾಸಿಯಲ್ಲಿ ಗೆಲುವಿನ ಜತೆಗೆ ದಾಖಲೆಯ ಅಂತರ ನಿರ್ಮಿಸುವುದು ಬಿಜೆಪಿ ಉದ್ದೇಶ ಎಂದು ಈಗಾಗಲೇ ಮೋದಿ ಹಾಗೂ ಅಮಿತ್‌ ಷಾ ಘೋಷಿಸಿದ್ದಾರೆ.

ಮೋದಿಯ ವಾರಣಾಸಿ ಜತೆಗೆ ಪಟನಾ ಸಾಹೀಬ್ನಲ್ಲಿ ರವಿಶಂಕರ್‌ ಪ್ರಸಾದ್‌ ಹಾಗೂ ಶತ್ರುಘ್ನ ಸಿನ್ಹಾ, ಪಂಜಾಬ್‌ನಲ್ಲಿ ಮಾಜಿ ಸಿಎಂ ಪ್ರಕಾಶ್‌ ಸಿಂಗ್‌ ಬಾದಲ್ ಸ್ಪರ್ಧೆ ಕೂಡ ಕುತೂಹಲ ಏರ್ಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+