• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬುಲಂದ್ ಶಹರ್ ನಲ್ಲಿ ಇನ್ ಸ್ಪೆಕ್ಟರ್ ಹತ್ಯೆಯ ಅಂತಿಮ ಕ್ಷಣಗಳು ವಿಡಿಯೋದಲ್ಲಿ ಸೆರೆ

|

ಲಖನೌ, ಡಿಸೆಂಬರ್ 5: ಸಿಟ್ಟಾಗಿದ್ದ ಗುಂಪು ರಸ್ತೆಗಳಲ್ಲಿ ಓಡುತ್ತಾ, ಮಾರೋ ಮಾರೋ ಎಂದು ಕೂಗುತ್ತಿದ್ದು, ಕೆಲ ನಿಮಿಷದಲ್ಲಿ ಚಲನೆ ಇಲ್ಲದೆ ನೆಲದ ಮೇಲೆ ಬಿದ್ದಿದ್ದ ವ್ಯಕ್ತಿಯ ದೇಹ ಕಾಣಿಸುತ್ತದೆ. ಮೂರು ನಿಮಿಷಗಳ ಕಾಲ ಮೊಬೈಲ್ ನಲ್ಲಿ ಸೆರೆ ಆಗಿರುವ ದೃಶ್ಯಾವಳಿಗಳು ಇವು. ಉತ್ತರಪ್ರದೇಶದ ಬುಲಂದ್ ಶಹರ್ ನಲ್ಲಿ ಸೋಮವಾರ ಪೊಲೀಸ್ ಅಧಿಕಾರಿಯನ್ನು ಗುಂಪು ಹಲ್ಲೆ ಮಾಡಿ ಕೊಲ್ಲಲಾಗಿದೆ. ಆ ಹತ್ಯೆಗೆ ಸಂಬಂಧಿಸಿದ ವಿಡಿಯೋ ಇದು.

ಗೋಹತ್ಯೆ ಆರೋಪದಲ್ಲಿ ಈ ಘಟನೆ ನಡೆದಿದೆ. ಹತ್ಯೆಯಾದ ಇನ್ ಸ್ಪೆಕ್ಟರ್ ಸುಬೋಧ್ ಕುಮಾರ್ ಸಿಂಗ್ ಹಾಗೂ ಇಪ್ಪತ್ತು ವರ್ಷದ ಸುಮಿತ್ ಸಾವು ಈ ವಿಡಿಯೋಗೆ ಸಂಬಂಧಿಸಿದೆ. ಪೊಲೀಸರು ಗುಂಡು ಹಾರಿಸಿದ ಪ್ರತೀಕಾರವಾಗಿ ಇನ್ ಸ್ಪೆಕ್ಟರ್ ನನ್ನು ಕೊಲ್ಲಲಾಗಿದೆ. ಆ ನಂತರ ಪ್ರತಿಭಟನಾನಿರತರ ಪೈಕಿ ಒಬ್ಬಾತ ಗುಂಡಿಗೆ ಬಲಿಯಾಗಿದ್ದಾನೆ.

ಉ.ಪ್ರದೇಶ ಹಿಂಸಾಚಾರ: ಬಲಪಂಥೀಯ ಆರೋಪಿಗಳೆಲ್ಲ ನಿರುದ್ಯೋಗಿಗಳು

ಈ ವಿಡಿಯೋ ಬಗ್ಗೆ ಉತ್ತರಪ್ರದೇಶ ಪೊಲೀಸರು ಯಾವುದೇ ಹೇಳಿಕೆ ನೀಡಿಲ್ಲ. ಇನ್ನು ಸುಮಿತ್ ಗೆ ಎದೆಯಲ್ಲಿ ಗುಂಡಿನ ಗಾಯವಾಗಿದೆ. ಅವನು ಆ ಗಲಾಟೆ ನೋಡುತ್ತಿದ್ದ ಎಂಬುದು ಆತನ ಕುಟುಂಬದವರ ವಾದವಾದರೆ, ಆತ ಪೊಲೀಸರತ್ತ ಕಲ್ಲು ತೂರುತ್ತಿದ್ದ ಎಂಬುದು ವಿಡಿಯೋದಲ್ಲಿ ದಾಖಲಾಗಿದೆ.

ಉದ್ರಿಕ್ತ ಗುಂಪು ಪ್ರವೇಶ ಮಾಡಿ, ಆ ಪೈಕಿ ಕೆಲವರು ಗುಂಡು ಹಾರಿಸಿದ್ದಾರೆ ಎಂದು ಜೋರಾಗಿ ಕೂಗುತ್ತಿರುವುದು ಕೇಳಿಬಂದಿದೆ. ಆ ನಂತರ ರಕ್ತ ಒಸರುತ್ತಿದ್ದ ಸುಮಿತ್ ನ ರಕ್ಷಣೆಗೆ ಇಬ್ಬರು ವ್ಯಕ್ತಿಗಳು ಸಹಾಯ ಮಾಡಿದ್ದಾರೆ. ಗನ್ ಹಿಡಿದಿದ್ದ ಕಾನ್ಸ್ ಟೇಬಲ್ ಕೂಡ ವಿಡಿಯೋದಲ್ಲಿ ಕಂಡುಬಂದಿದ್ದು, ಗನ್ ಕಸಿದುಕೊಳ್ಳಿ, ಮಾರೋ ಮಾರೋ ಎಂದು ಕೂಗುವ ದೃಶ್ಯಾವಳಿಗಳು ಸೆರೆಯಾಗಿವೆ. ವಿಡಿಯೋದ ಅಂತಿಮ ದೃಶ್ಯದಲ್ಲಿ ಇನ್ ಸ್ಪೆಕ್ಟರ್ ನೆಲದ ಮೇಲೆ ಚಲನೆ ಇಲ್ಲದೆ ಬಿದ್ದಿರುವುದು ಕಾಣುತ್ತದೆ.

ಉತ್ತರ ಪ್ರದೇಶ ಪೊಲೀಸ್ ಸಾವಿನ ಪ್ರಕರಣ ಹೊಸ ತಿರುವಿನತ್ತ!

ಆ ನಂತರ ಇನ್ ಸ್ಪೆಕ್ಟರ್ ಚಾಲಕ ಪೊಲೀಸರಿಗೆ ನೀಡಿದ ಮಾಹಿತಿ ಪ್ರಕಾರ, ಗುಂಪಿನಿಂದ ಗುಂಡು ಹಾರಿಸಿದ್ದು, ಎಸ್ ಯುವಿಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಲಾಗಿದೆ. ಆದರೆ ವಾಹನವನ್ನು ತಡೆಯಲಾಗಿದೆ. ಆ ಗುಂಪನ್ನು ಬಲಪಂಥೀಯ ಬಜರಂಗ ದಳದ ಕಾರ್ಯಕರ್ತ ಯೋಗೇಶ್ ರಾಜ್ ಮುನ್ನಡೆಸುತ್ತಿದ್ದ ಎಂದು ಆರೋಪಿಸಲಾಗಿದೆ. ಕಾಡಿನಲ್ಲಿ ಗೋವಿನ ಮೃತ ದೇಹಗಳು ಪತ್ತೆಯಾಗಿವೆ, ಗೋ ಹತ್ಯೆ ಮಾಡಲಾಗಿದೆ ಎಂದು ಆತ ಪೊಲೀಸರಲ್ಲಿ ದೂರು ನೀಡಿದ್ದ.

ಉದ್ರಿಕ್ತಗೊಂಡಿದ್ದ್ ಗುಂಪನ್ನು ಚದುರಿಸಲು ಪೊಲೀಸರು ಯತ್ನಿಸಿದ್ದಾರೆ. ಯಾವಾಗ ಗುಂಪಿನಿಂದ ದಾಳಿಗೆ ಯತ್ನಿಸಲಾಯಿತೋ ಆಗ ಸನ್ನಿವೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಸಲುವಾಗಿ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ.

ಲಖನೌ ರಣಕಣ
ಮತದಾರರು
Electors
19,49,956
 • ಪುರುಷ
  10,52,171
  ಪುರುಷ
 • ಸ್ತ್ರೀ
  8,97,785
  ಸ್ತ್ರೀ
 • ತೃತೀಯ ಲಿಂಗಿ
  N/A
  ತೃತೀಯ ಲಿಂಗಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A wild, surging mob runs down the street, chanting "maaro, maaro (attack)". Cut to, a policeman lying motionless in a field. A three-minute mobile phone video reveals new details about the killing of a police officer in Uttar Pradesh's Bulandshahr on Monday in mob frenzy over cow slaughter allegations.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more