ಉಸ್ಸಪ್ಪಾ, ಇಲ್ಲಿ ದೇವರಿಗೂ ಸೆಖೆ! ಗರ್ಭಗುಡಿಗೆ ಬಂತು ಫ್ಯಾನು!

ಕಾನ್ಪುರ, ಮೇ 10: ತಾಪಮಾನ ಹೆಚ್ಚಾಗಿ ಸೆಖೆ ತಡೆಯೋಕಾದೆ ಇದ್ದರೆ ಮನುಷ್ಯರೇನೋ ಫ್ಯಾನೋ, ಕೂಲರೋ ಅಥವಾ ಎಸಿ ಮುಂದೋ ಹೋಗಿ ನಿಲ್ತೇವೆ. ಆದ್ರೆ ಪಾಪ ದೇವರ ಕತೆ ಏನು?! ಗರ್ಭಗುಡಿಯಲ್ಲಿ, ಪಕ್ಕದಲ್ಲಿ 24x7 ಉರಿವ ನಂದಾದೀಪ, ಭಕ್ತರು ಬಂದಾಗೆಲ್ಲ ಬೆಳಗುವ ನಿಗಿನಿಗಿ ಮಂಗಳಾರತಿ... ನಡುವೆ ಆ ದೇವರು ಎಷ್ಟು ಬಾರಿ 'ಉಸ್ಸಪ್ಪಾ' ಎನ್ನುತ್ತ ಕೂರುತ್ತಾನೋ!

'ದೇವರ ಸಂಕಷ್ಟ'ವನ್ನು ಅರಿತ ಉತ್ತರ ಪ್ರದೇಶದ ಕಾನ್ಪುರದ ಸುರ್ಜಿತ್ ಕುಮಾರ್ ದುಬೆ ಎಂಬ ಸಿದ್ಧಿ ವಿನಾಯಕ ಗಣೇಶ ದೇವಾಲಯದ ಪೂಜಾರಿಯೊಬ್ಬರು ದೇವರ ಸೆಖೆಗೆ ಪರಿಹಾರ ನೀಡಿದ್ದಾರೆ. ದೇವಸ್ಥಾನದ ಗರ್ಭಗುಡಿಗೂ ಫ್ಯಾನು, ಕೂಲರ್ ಹಾಕಿಸಿ ದೇವರ ಆಶೀರ್ವಾದ ತಮಗೆ ತುಸು ಹೇಚ್ಚೇ ಸಿಗುವಂತೆ ಮಾಡಿಕೊಂಡಿದ್ದಾರೆ!

"ದೇವರಿಗೂ ಸೆಖೆಯಾಗುತ್ತದೆ. ಅವರೂ ಮನುಷ್ಯರಂತೆಯೇ. ಆದ್ದರಿಂದ ಫ್ಯಾನ್ ಮತ್ತು ಕೂಲರ್ ಗಳನ್ನು ಹಾಕಿದ್ದೇವೆ. ಅವರಿಗೆ ತೆಳು ಬಟ್ಟೆಯನ್ನೂ ಹಾಕುತ್ತೇವೆ. ಅದರಿಂದ ಹೆಚ್ಚು ಸೆಖೆಯಾಗುವುದಿಲ್ಲ" ಎನ್ನುತ್ತಾರೆ ಸುರ್ಜಿತ್ ಕುಮಾರ್.

Gods also feel hot: Coolers and fans installed at temples in Kanpur

ಉತ್ತರ ಪ್ರದೇಶ, ರಾಜಸ್ಥಾನ, ದೆಹಲಿ, ತಮಿಳುನಾಡು, ಆಂಧ್ರ ಪ್ರದೇಶ ಮುಂತಾದ ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ತಾಪಮಾನ ಇನ್ನೆರಡು ದಿನಗಳಲದಲಿ 45 ಡಿಗ್ರಿ ಸೆಲ್ಷಿಯಸ್ ತಲುಪಲಿದೆ ಎಂದು ಹವಾಮಾನ ಇಲಾಖೆಯೇ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+