ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಡಾನ್, ಸ್ಪರ್ಧೆಯಿಂದ ಹಿಂದಕ್ಕೆ

ಲಕ್ನೋ, ಮೇ 13: ವಾರಣಾಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಿದ್ದ ಮಾಜಿ ಸಂಸದ, ಮಾಜಿ ಡಾನ್ ಆತಿಕ್ ಅಹ್ಮದ್ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಮೋದಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ್ದರು. ಈಗ ತಮ್ಮ ನಾಮಪತ್ರ ಹಿಂಪಡೆದಿರುವುದಾಗಿ ಸೋಮವಾರದಂದು ಘೋಷಿಸಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಆತಿಕ್, ಬಲವಂತವಾಗಿ ನಾಮಪತ್ರ ಹಿಂಪಡೆಯಬೇಕಾಯಿತು. ಕೋರ್ಟಿನಿಂದ ಸರಿಯಾದ ಸಮಯಕ್ಕೆ ಪೆರೋಲ್ ಸಿಗಲಿಲ್ಲ ಎಂದಿದ್ದಾರೆ. ಸದ್ಯ ಈ ಬಾರಿ ಚುನಾವಣಾ ರಾಜಕೀಯಕ್ಕಿಂದ ದೂರ ಉಳಿಯುವೆ, ಯಾವ ಅಭ್ಯರ್ಥಿ ಪರ ಕೂಡಾ ನಿಲ್ಲುವುದಿಲ್ಲ ಎಂದಿದ್ದಾರೆ.

ಚುನಾವಣಾ ಪ್ರಚಾರ ಕಾರ್ಯಕ್ಕಾಗಿ ಮೂರು ವಾರಗಳ ಪೆರೋಲ್ ಗಾಗಿ ಕೋರ್ಟಿನಲ್ಲಿ ಅರ್ಜಿ ಹಾಕಿದ್ದರು. ಆದರೆ, ಚುನಾವಣೆಯಲ್ಲಿ ಸ್ಪರ್ಧಿಸುವುದು ಪ್ರಜಾಪ್ರಭುತ್ವ ನೀಡಿರುವ ಹಕ್ಕು ಎನ್ನಬಹುದಾದರೂ, ಜೈಲಿನಿಂದ ಹೊರಗಡೆ ಬಿಡಲು ಸೂಕ್ತ ಕಾರಣಗಳು ಕಂಡು ಬಂದಿಲ್ಲ ಎಂದು ಹೇಳಿರುವ ಕೋರ್ಟ್, ಪೆರೋಲ್ ಅರ್ಜಿ ತಿರಸ್ಕರಿಸಿದೆ.

Don turned politician Atiq Ahmed withdraws from poll battle against PM Modi in Varanasi

ಜನಪ್ರತಿನಿಧಿಗಳ ಕೋರ್ಟ್, ಹೈಕೋರ್ಟ್ ಎರಡರಲ್ಲೂ ಅರ್ಜಿ ತಿರಸ್ಕಾರಗೊಂಡಿದೆ. ಆತಿಕ್ ಅವರ ಎಲೆಕ್ಷನ್ ಏಜೆಂಟ್ ಷಹನವಾಜ್ ಆಲಂ ಅವರು ಆತಿಕ್ ಅಹ್ಮದ್ ಅವರು ನೀಡಿದ ಪತ್ರವನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಲಹಾಬಾದ್ ಶೌತ್ಸ್ ವಿಶ್ವವಿದ್ಯಾಲಯದಲ್ಲಿ ಗಲಭೆ, ದೊಂಬಿ ಪ್ರಕರಣ ಸದ್ಯ ಜೈಲಿನಲ್ಲಿರುವ ಆತಿಕ್ ಗೆ ಉಳಿದ ಪ್ರಕರಣಗಳಲ್ಲಿ ಜಾಮೀನು ಸಿಕ್ಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+