ಸುಮಾರು 50 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ: ಎಂಜಿನಿಯರ್ ಬಂಧನ

ಲಕ್ನೋ, ನವೆಂಬರ್ 18: ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ಲೈಂಗಿಕ ಶೋಷಣೆ ಮಾಡಿ ಅವುಗಳನ್ನು ವಿಡಿಯೋ ಚಿತ್ರೀಕರಿಸಿ ಡಾರ್ಕ್ ವೆಬ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದ ಎಂಜಿನಿಯರ್ ಒಬ್ಬಾತನನ್ನು ಸಿಬಿಐ ಮಂಗಳವಾರ ಬಂಧಿಸಿದೆ.

ಬಂಧಿತ ಆರೋಪಿಯು ಉತ್ತರ ಪ್ರದೇಶದ ನೀರಾವರಿ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಈ ವರ್ಷದ ಆರಂಭದಲ್ಲಿ ಇಂತಹ ಚಟುವಟಿಕೆಗಳ ಬಗ್ಗೆ ಸಿಬಿಐಗೆ ಮಾಹಿತಿ ನೀಡಲಾಗಿತ್ತು. ಉತ್ತರ ಪ್ರದೇಶದ ಬಂದಾ, ಚಿತ್ರಕೂಟ ಮತ್ತು ಹಮೀರ್‌ಪುರ ಜಿಲ್ಲೆಗಳಲ್ಲಿ ಬಾಲಕಿಯರನ್ನು ಲೈಂಗಿಕವಾಗಿ ಶೋಷಿಸುತ್ತಿರುವ ಘಟನೆಗಳಲ್ಲಿ ಅನಾಮಧೇಯ ಶಂಕಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಬಾಲಕಿಯರ ಲೈಂಗಿಕ ಶೋಷಣೆಯ ಜತೆಗೆ ಆರೋಪಿಗಳು ತಮ್ಮ ಹೀನ ಕೃತ್ಯಗಳನ್ನು ಅವರ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್ ಮತ್ತು ಇತರೆ ವಿದ್ಯುನ್ಮಾನ ಉಪಕರಣಗಳಲ್ಲಿ ಚಿತ್ರೀಕರಿಸುತ್ತಿದ್ದರು.

 CBI Arrests UP Engineer For Filming, Sexually Abusing 50 Minors Over 10 Years

'ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದಂತಹ ಅಂಶಗಳನ್ನು ಒಳಗೊಂಡ ಈ ಫೋಟೊಗ್ರಾಫ್‌ಗಳು ಮತ್ತು ವಿಡಿಯೋಗಳನ್ನು ಆರೋಪಿಗಳು ಅಂತರ್ಜಾಲದ ವಿವಿಧ ತಾಣಗಳಿಗೆ ರವಾನಿಸುವ ಮತ್ತು ಅವುಗಳನ್ನು ಅಲ್ಲಿ ಪ್ರಕಟಿಸುವ ಕೆಲಸಗಳನ್ನು ಮಾಡುತ್ತಿದ್ದರು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಕಂಟೆಂಟ್‌ಗಳನ್ನು ಇತರೆ ವ್ಯಕ್ತಿಗಳ ಜತೆ ಹಂಚಿಕೊಳ್ಳಲು, ಮಾರಾಟ ಮಾಡಲು ಮತ್ತು ರವಾನಿಸಲು ಡಾರ್ಕ್ ವೆಬ್ ಬಳಸುತ್ತಿದ್ದರು' ಎಂದು ಸಿಬಿಐ ಹೇಳಿಕೆ ನೀಡಿದೆ.

ಆರೋಪಿ ರಾಂಭವನ್‌ನ ನಿವಾಸದಲ್ಲಿ ಮಂಗಳವಾರ ಪರಿಶೀಲನೆ ನಡೆಸಿದ ಸಿಬಿಐ ಅಧಿಕಾರಿಗಳು ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್, ವೆಬ್ ಕ್ಯಾಮೆರಾಗಳು ಹಾಗೂ ಪೆನ್‌ಡ್ರೈವ್, ಮೆಮೋರಿ ಕಾರ್ಡ್‌ಗಳು ಮತ್ತು ವಿವಿಧ ಸೆಕ್ಸ್ ಆಟಿಕೆಗಳು ಸೇರಿದಂತೆ ಇತರೆ ವಿದ್ಯುನ್ಮಾನ ಸಂಗ್ರಹ ಉಪಕರಣಗಳ ಜತೆಗೆ ಎಂಟು ಲಕ್ಷ ರೂ ನಗದು ವಶಪಡಿಸಿಕೊಂಡಿದ್ದಾರೆ.

ರಾಂಭವನ್ ಈ ಗ್ಯಾಡ್ಜೆಟ್‌ಗಳು ಮತ್ತು ವಿದ್ಯುನ್ಮಾನ ಉಪಕರಣಗಳ ಮೂಲಕ ವಿವಿಧ ಆಸೆ ತೋರಿಸಿ 5-16 ವರ್ಷ ವಯಸ್ಸಿನ ಸುಮಾರು 50 ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸುಮಾರು ಹತ್ತು ವರ್ಷಗಳಿಂದ ಆತ ಇಂತಹ ದೌರ್ಜನ್ಯದ ವಿಡಿಯೋಗಳನ್ನು ಚಿತ್ರೀಕರಿಸಿದ್ದಾನೆ ಎಂದು ಸಿಬಿಐ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+