• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಪಿ ಕುಂಭಮೇಳ ಖರ್ಚಿನ ಬಗ್ಗೆ ಪ್ರಶ್ನೆ ಎತ್ತಿದ ಸಿಎಜಿ ವರದಿ

|
Google Oneindia Kannada News

ಲಕ್ನೋ, ಆಗಸ್ಟ್‌ 24: ಉತ್ತರ ಪ್ರದೇಶ ಸರ್ಕಾರವು ರಾಜ್ಯ ವಿಪತ್ತು ನಿರ್ವಹಣೆ ನಿಧಿಯಿಂದ ಸುಮಾರು 67.87 ರೂಪಾಯಿ ಕೋಟಿಯನ್ನು 2019 ರಲ್ಲಿ ಕುಂಭ ಮೇಳಕ್ಕೆ ರಕ್ಷಣಾ ಸಾಧನಗಳ ಖರೀದಿ ಮಾಡಲು ಬಳಸಿಕೊಂಡಿದೆ ಎಂದು ಭಾರತದ ಪರಿಶೋಧಕ ಹಾಗೂ ಮಹಾಲೇಖಪಾಲರ (ಪರಿಶೋಧಕ ಹಾಗೂ ಮಹಾಲೇಖಪಾಲ- ಸಿಎಜಿ) ವರದಿಯು ಆರೋಪ ಮಾಡಿದೆ.

ಕುಂಭ ಮೇಳಕ್ಕೆ ರಕ್ಷಣಾ ಸಾಧನಗಳ ಖರೀದಿ ಮಾಡುವ ಉದ್ದೇಶಕ್ಕಾಗಿ ಹಣವನ್ನು ರಾಜ್ಯ ಬಜೆಟ್‌ನಿಂದ ಪಡೆಯಬೇಕು ಎಂದು ವರದಿ ಹೇಳಿದೆ. ಹಾಗೆಯೇ ಲೋಕೋಪಯೋಗಿ ಇಲಾಖೆಯು ಸುಮಾರು 1.69 ಕೋಟಿ ರೂಪಾಯಿಯ ಆರು ಕಾರ್ಯಗಳನ್ನು ಮಾಡಿದೆ. ಲೋಕೋಪಯೋಗಿ ಇಲಾಖೆಯು ರಸ್ತೆ ದುರಸ್ತಿ ಹಾಗೂ ಬೀದಿ ಬದಿಯ ಮರಗಳಿಗೆ ಬಣ್ಣ ಬಳಿಯಲು ಕಾರ್ಯವನ್ನು ಆರ್ಥಿಕ ಮಂಜೂರಾತಿ ಆಗದೆಯೇ ಸುಮಾರು 1.69 ಕೋಟಿ ರೂಪಾಯಿ ವೆಚ್ಚದಲ್ಲಿ ಮಾಡಿದೆ ಎಂದು ಪರಿಶೋಧಕ ಹಾಗೂ ಮಹಾಲೇಖಪಾಲ ವರದಿಯು ವಿವರಿಸಿದೆ.

ಕಲ್ಯಾಣ್‌ ಅಂತಿಮ ನಮನದ ವೇಳೆ ರಾಷ್ಟ್ರ ಧ್ವಜದ ಮೇಲೆ ಬಿಜೆಪಿ ಧ್ವಜ: ತೀವ್ರ ವಿವಾದ ಸೃಷ್ಟಿಕಲ್ಯಾಣ್‌ ಅಂತಿಮ ನಮನದ ವೇಳೆ ರಾಷ್ಟ್ರ ಧ್ವಜದ ಮೇಲೆ ಬಿಜೆಪಿ ಧ್ವಜ: ತೀವ್ರ ವಿವಾದ ಸೃಷ್ಟಿ

ಇನ್ನು ಕುಂಭಮೇಳ ಅಧಿಕಾರಿಯ (ಕೆಎಂಎ) ವಿರುದ್ದವು ಮಹಾಲೇಖಪಾಲ ವರದಿಯು ಉಲ್ಲೇಖ ಮಾಡಿದೆ. ಕುಂಭಮೇಳ ಅಧಿಕಾರಿಯು ಡೇರೆಗಳು ಮತ್ತು ಪೀಠೋಪಕರಣಗಳ ಮೇಲ್ವಿಚಾರಣೆಯನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ಇದರಿಂದಾಗಿ ಇದರಿಂದಾಗಿ ಮಾರಾಟಗಾರರು ಕಾಣೆಯಾದ ವಸ್ತುಗಳ ಮೇಲೆ 21.75 ಕೋಟಿ ರೂ.ಗಳ ಪರಿಹಾರವನ್ನು ನೀಡಬೇಕು ಎಂದು ಹೇಳಿದ್ದಾರೆ. ಆದರೆ ಕಾಣೆಯಾದ ವಸ್ತುಗಳಿಗೆ ಖಾತೆಯಿಂದ ಎಷ್ಟು ಪಾವತಿ ಮಾಡಬೇಕು ಎಂಬ ಬಗ್ಗೆ ಕೆಎಂಎ ಖಚಿತಪಡಿಸಿಲ್ಲ ಎಂದು ವರದಿಯು ಹೇಳಿದೆ.

ಲೆಕ್ಕಪರಿಶೋಧನೆಯು ರಸ್ತೆ ಕೆಲಸಗಳಿಗಾಗಿ ರೂ 3.11 ಕೋಟಿ ಅಂದಾಜು ಮಾಡಿದೆ ಮತ್ತು ಗುತ್ತಿಗೆದಾರರಿಗೆ ಅನಿಯಮಿತ ಕೆಲಸವನ್ನು ನೀಡುವುದನ್ನು ಗಮನಿಸಿದೆ. ತಡೆಗೋಡೆ ಕೆಲಸಗಳಿಗೆ (3.24 ಕೋಟಿ) ಮತ್ತು ಫೈಬರ್ ರಿನ್ಫೋರ್ಸ್ ಪ್ಲಾಸ್ಟಿಕ್ ಶೌಚಾಲಯದ ಕೆಲಸಗಳಿಗೆ (8.75 ಕೋಟಿ) ಮತ್ತು ಗುತ್ತಿಗೆದಾರರಿಗೆ ಹೆಚ್ಚುವರಿ ಪಾವತಿ (ರೂ 1.27 ಕೋಟಿ) ನೀಡಲಾಗಿದೆ ಎಂದು ಕೂಡಾ ವರದಿಯು ತಿಳಿಸಿದೆ.

ಕುಂಭ ಮೇಳದ ಆರಂಭದ ಸಂದರ್ಭದಲ್ಲಿ 58 ಶಾಶ್ವತ ಮತ್ತು 11 ತಾತ್ಕಾಲಿಕ ಕಾರ್ಯಗಳನ್ನು (ಶೇಕಡ 15 ಕೆಲಸಗಳು) ಪೂರ್ಣಗೊಳಿಸದ ಕಾರಣ ರಾಜ್ಯ ಸರ್ಕಾರವು ನಿಗದಿತ ವೇಳಾಪಟ್ಟಿಯನ್ನು ಪಾಲಿಸಿಲ್ಲ ಎಂದು ಸಿಎಜಿ ತಿಳಿಸಿದೆ. ಹಾಗೆಯೇ ಗೃಹ ಇಲಾಖೆಯ ಅಸಮರ್ಪಕ ಖರೀದಿ ಪ್ರಕ್ರಿಯೆಯಿಂದಾಗಿ, ಸುಮಾರು ರೂ. 7.83 ಕೋಟಿ ವೆಚ್ಚದ ಅಗ್ನಿಶಾಮಕ ವಾಹನಗಳು, ಬ್ಯಾಗೇಜ್ ಸ್ಕ್ಯಾನರ್‌ಗಳು, ಡಿಜಿಟಲ್ ರೇಡಿಯೋ ಎಚ್‌ಎಫ್ ಸೆಟ್‌ಗಳು ಮತ್ತು ಡ್ರೋನ್ ಕ್ಯಾಮೆರಾಗಳನ್ನು ಕುಂಭ ಮೇಳದ ಸಮಯದಲ್ಲಿ ಬಳಸಿಕೊಳ್ಳಲಿಲ್ಲ ಅಥವಾ ಪಡೆದಿಲ್ಲ ಎಂದು ವರದಿಗಳು ತಿಳಿಸಿದೆ.

ಭಾರತ ಸ್ವಾತಂತ್ರ್ಯ ಹೋರಾಟಗಾರರಿಗೆ ತಾಲಿಬಾನ್‌ ಹೋಲಿಕೆ: ಎಸ್‌ಪಿ ಸಂಸದರ ವಿರುದ್ದ ದೇಶದ್ರೋಹ ಪ್ರಕರಣಭಾರತ ಸ್ವಾತಂತ್ರ್ಯ ಹೋರಾಟಗಾರರಿಗೆ ತಾಲಿಬಾನ್‌ ಹೋಲಿಕೆ: ಎಸ್‌ಪಿ ಸಂಸದರ ವಿರುದ್ದ ದೇಶದ್ರೋಹ ಪ್ರಕರಣ

ಮುನ್ಸಿಪಾಲ್‌ಗಳು ಘನ ತ್ಯಾಜ್ಯ (ಎಂಎಸ್‌ಡಬ್ಲ್ಯೂ) ನಿರ್ವಹಣೆಯ ಸಮಸ್ಯೆಯನ್ನು ಸರಿಯಾದ ರೀತಿಯಲ್ಲಿ ಬಗೆಹರಿಸಿಲ್ಲ ಎಂದು ಕೂಡಾ ವರದಿಯು ಉಲ್ಲೇಖ ಮಾಡಿದೆ. ಕಾರ್ಯನಿರ್ವಹಿಸದ ಎಂಎಸ್‌ಡಬ್ಲ್ಯೂ ಸಂಸ್ಕರಣಾ ಘಟಕದಿಂದಾಗಿ, ಕುಂಭ ಮೇಳಕ್ಕೆ ಮುನ್ನ ಬನ್ಸ್‌ವರ್ ಪ್ಲಾಂಟ್ ಸ್ಥಳದಲ್ಲಿ ಬೃಹತ್‌ ಘನತ್ಯಾಜ್ಯ ಇತ್ತು. ಈ ಘನತ್ಯಾಜ್ಯವು ಜನವರಿ 2019 ಮತ್ತು ಮಾರ್ಚ್ 2019 ರ ನಡುವೆ 52,727 ಮೆಟ್ರಿಕ್ ಟನ್ ಅಧಿಕವಾಗಿದೆ ಎಂದು ಕೂಡಾ ವರದಿಯು ವಿವರಿಸಿದೆ.

2012 ಮತ್ತು 2019 ರ ನಡುವೆ ಉತ್ತರ ಪ್ರದೇಶದಲ್ಲಿ ಇಂಡೋ-ನೇಪಾಳ ಗಡಿ ರಸ್ತೆ ಯೋಜನೆಯ (ಐಎನ್‌ಬಿಆರ್‌ಪಿ) ಪೂರ್ವಸಿದ್ಧತಾ ಹಂತ, ಪ್ರಾಜೆಕ್ಟ್ ಎಕ್ಸಿಕ್ಯೂಶನ್, ಮಾನಿಟರಿಂಗ್ ಮತ್ತು ಹಣಕಾಸು ನಿರ್ವಹಣೆಯಲ್ಲಿ ಸಿಎಜಿ ನ್ಯೂನತೆಗಳನ್ನು ಭಾರತದ ಪರಿಶೋಧಕ ಹಾಗೂ ಮಹಾಲೇಖಪಾಲರ ವರದಿಯು ಬಹಿರಂಗಪಡಿಸಿದೆ. ಈ ಯೋಜನೆಯನ್ನು ಪಿಡಬ್ಲ್ಯೂಡಿ ಜಾರಿಗೊಳಿಸಿದೆ. ಉತ್ತರ ಪ್ರದೇಶ ರಾಜ್ಯದ 640 ಕಿಮೀ ಇಂಡೋ-ನೇಪಾಳ ಗಡಿ (ಐಎನ್‌ಬಿ) ರಸ್ತೆಯ ಆರಂಭಿಕ ಜೋಡಣೆಯನ್ನು ಸಮೀಕ್ಷೆಯ ನಂತರ 574.59 ಕಿಮೀಗೆ ಪರಿಷ್ಕರಣೆ ಮಾಡಲಾಗಿದೆ.

(ಒನ್‌ ಇಂಡಿಯಾ ಸುದ್ದಿ)

English summary
UP govt diverted SDRF fund for buying Kumbh mela rescue equipment says CAG report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X