ಸಿಎಎ; ಯುಪಿಯಲ್ಲಿ 40 ಸಾವಿರ ಹಿಂದೂ ವಲಸಿಗರು

Recommended Video

      CAA in action in UP , government releases refuge count to central | UP | CAA | ONEINDIA KANNADA

      ಲಕ್ನೋ, ಜನವರಿ 13 : ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಉತ್ತರ ಪ್ರದೇಶ ಸರ್ಕಾರ ದೇಶದಲ್ಲೇ ಮೊದಲ ಬಾರಿಗೆ ಜಾರಿಗೆ ತರುತ್ತಿದೆ. 19 ಜಿಲ್ಲೆಗಳಲ್ಲಿ ವಾಸವಾಗಿರುವ ಹಿಂದೂ ನಿರಾಶ್ರಿತರ ಪಟ್ಟಿಯನ್ನು ಕೇಂದ್ರ ಗೃಹ ಇಲಾಖೆಗೆ ಕಳುಹಿಸಿದೆ.

      ಸಮೀಕ್ಷೆ ನಡೆಸಿದ ಬಳಿಕ ಉತ್ತರ ಪ್ರದೇಶ ಸರ್ಕಾರ ಅಂಕಿಸಂಖ್ಯೆಗಳನ್ನು ಕಳುಹಿಸಿದೆ. 40 ಸಾವಿರ ಮುಸ್ಲಿಂಮೇತರ ವಲಸಿಗರು ರಾಜ್ಯದಲ್ಲಿ ನೆಲೆಸಿದ್ದಾರೆ. 30 ರಿಂದ 35 ಸಾವಿರ ಜನರು ಪಿಲಿಬಿಟ್ ಜಿಲ್ಲೆಯಲ್ಲಿಯೇ ಇದ್ದಾರೆ.

      ಪಿಟಿಐ ಸುದ್ದಿಸಂಸ್ಥೆಯ ವರದಿ ಪ್ರಕಾರ ರಾಜ್ಯ ಸರ್ಕಾರ 116 ಪುಟಗಳ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಕೆ ಮಾಡಿದೆ. ಉತ್ತರ ಪ್ರದೇಶ ಸರ್ಕಾರ ಸಲ್ಲಿಕೆ ಮಾಡಿರುವ ಇದನ್ನು ಗೃಹ ಇಲಾಖೆ ಪರಿಣನೆಗೆ ತೆಗೆದುಕೊಳ್ಳಲಿದೆಯೇ? ಎಂದು ಕಾದು ನೋಡಬೇಕಿದೆ.

      CAA Uttar Pradesh Sent Hindu refugees List To Union Govt

      ಸಚಿವ ಶ್ರೀಕಾಂತ್ ಶರ್ಮಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಇದು ನಿರಂತರವಾಗಿ ನಡೆಯುವ ಪ್ರಕ್ರಿಯೆ. ಎಲ್ಲಾ ಜಿಲ್ಲೆಗಳ ಮ್ಯಾಜಿಸ್ಟ್ರೇಟ್‌ಗಳಿಗೆ ಸಮೀಕ್ಷೆ ಬಳಿಕ ಅಂಕಿ ಸಂಖ್ಯೆಗಳನ್ನು ನೀಡುವಂತೆ ಸೂಚಿಸಲಾಗಿದೆ. ಅದನ್ನು ಕೇಂದ್ರ ಸರ್ಕಾರದ ಜೊತೆ ಹಂಚಿಕೊಳ್ಳಲಾಗುತ್ತದೆ" ಎಂದು ಹೇಳಿದ್ದಾರೆ.

      ವರದಿ ಪ್ರಕಾರ 40 ಸಾವಿರ ಮುಸ್ಲಿಂಮೇತರ ವಲಸಿಗರು ಉತ್ತರ ಪ್ರದೇಶದ 19 ಜಿಲ್ಲೆಗಳಲ್ಲಿ ಇದ್ದಾರೆ. ಆಗ್ರಾ, ರಾಯ್ ಭರೇಲಿ, ಗೋರಖ್‌ಪುರ, ರಾಂಪುರ, ವಾರಣಾಸಿ, ಝಾನ್ಸಿ, ಲಕ್ನೋ, ಮೀರತ್ ಮುಂತಾದ ಕಡೆ ಅವರು ವಾಸಿಸುತ್ತಿದ್ದಾರೆ. ಆದರೆ, ಸರ್ಕಾರ ಇನ್ನೂ ಅಧಿಕೃತ ಸಂಖ್ಯೆಯನ್ನು ಬಿಡುಗಡೆ ಮಾಡಬೇಕಿದೆ.

      ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದಲ್ಲಿಯೂ ಬೃಹತ್ ಪ್ರತಿಭಟನೆ ನಡೆದಿತ್ತು. 19 ಜನರು ರಾಜ್ಯದಲ್ಲಿ ಮೃತಪಟ್ಟಿದ್ದರು. ಗಲಭೆಯಿಂದ ಆದ ಹಾನಿಯ ವೆಚ್ಚ ಭರಿಸಲು ಆರೋಪಿಗಳ ಆಸ್ತಿಯನ್ನು ಜ್ತಪಿ ಮಾಡಿ ಸರ್ಕಾರ ವಿವಾದ ಹುಟ್ಟುಹಾಕಿತ್ತು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+