ಬಿಜೆಪಿ ಮುಖಂಡನನ್ನು ಉಗ್ರರಿಗೆ ಹೋಲಿಸಿದ ಕಾಂಗ್ರೆಸ್ ನಾಯಕ

ಲಕ್ನೋ, ಜನವರಿ 04: "ಭಾರತದಲ್ಲಿ ರಕ್ಷಣೆ ಇಲ್ಲ ಎನ್ನುವವರಿಗೆ ಬಾಂಬ್ ಹಾಕಬೇಕು, ನನಗೆ ಸಚಿವ ಸ್ಥಾನ ನೀಡಿದರೆ ಇವರಿಗೆಲ್ಲ ಬಾಂಬ್ ಹಾಕುತ್ತೇನೆ" ಎಂದ ಬಿಜೆಪಿ ಶಾಸಕ ವಿಕ್ರಮ್ ಸೈನಿ ಅವರನ್ನು ಉತ್ತರ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ತರಾಟೆಗೆ ತೆಗೆದುಕೊಂಡಿದ್ದಾರೆ.

"ಕೇಸರಿ ಪಕ್ಷದ ಮುಖಂಡ ಸೈನಿ ಭಯೋತ್ಪಾದಕರ ಹಾಗೆ ಮಾತನಾಡುತ್ತಾರೆ. ಅವರಿಗೆ ಭಯೋತ್ಪಾದಕರ ಸಂಪರ್ಕ ಇರುವಂತೆ ಕಾಣುತ್ತದೆ. ಅವರ ವಿರುದ್ಧ ತನಿಖೆಯಾಗಬೇಕು" ಎಂದು ಬಬ್ಬರ್ ಆಗ್ರಹಿಸಿದ್ದಾರೆ.

"ಭಯೋತ್ಪಾದಕರಂತೆ ಈ ರೀತಿ ಪ್ರಚೋದನಾಕಾರಿಯಾಗಿ ಮಾತನಾಡುವವರನ್ನು ಮೊದಲು ಜೈಲಿಗಟ್ಟಿ ಶಿಕ್ಷೆ ನೀಡಬೇಕು. ಇವರಿಗೆ ಉಗ್ರರ ಲಿಂಕ್ ಇದ್ದಂತಿದೆ" ಎಂದು ಅವರು ಹೇಳಿದ್ದಾರೆ.

BJPs Vikram Saini speaking like a terrorist: Raj Babbar

ಭಾರತದಲ್ಲಿ ಮತ್ತೆ ಅಸಹಿಷ್ಣುತೆ ಇದೆ ಎಂಬ ಕೂಗು ಕೇಳಿಬಂದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿದ್ದ ಮುಜಾಫರ್ ನಗರ ಬಿಜೆಪಿ ಶಾಸಕ ವಿಕ್ರಂ ಸೈನಿ, "ನನ್ನ ವೈಯಕ್ತಿಕ ಅಭಿಪ್ರಾಯ ಏನು ಎಂದರೆ, ಭಾರತದಲ್ಲಿ ಯಾರು ಅಸುರಕ್ಷಿತರು ಎನ್ನುತ್ತಾರೋ, ಭಯವಿದೆ ಎನ್ನುತ್ತಾರೋ ಅಂಥವರಿಗೆ ಬಾಂಬ್ ಹಾಕಬೇಕು. ನನಗೆ ಸಚಿವ ಸ್ಥಾನ ನೀಡಿ. ನಾವು ಅಂಥವರನ್ನೊಬ್ಬರನ್ನೂ ಬಿಡದೆ ಬಾಂಬ್ ಹಾಕುತ್ತೇನೆ" ಎಂದು ಅವರು ವಿಡಿಯೋದಲ್ಲಿ ಹೇಳಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾಕಷ್ಟು ವಿವಾದ ಸೃಷ್ಟಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+