Times Now Veto Survey: ಉತ್ತರ ಪ್ರದೇಶದಲ್ಲಿ ಕಡಿಮೆ ಬಹುಮತದೊಂದಿಗೆ ಬಿಜೆಪಿ ಗೆಲುವು
ಲಕ್ನೋ, ಫೆಬ್ರವರಿ 9: ಉತ್ತರ ಪ್ರದೇಶದಲ್ಲಿ ಕಡಿಮೆ ಬಹುಮತದೊಂದಿಗೆ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಟೈಮ್ಸ್ ನೌ ವಿಟೋ ಸಮೀಕ್ಷೆ ಹೇಳಿದೆ.
ಫೆಬ್ರವರಿ 10ರಂದು ಉತ್ತರ ಪ್ರದೇಶದಲ್ಲಿ ಮೊದಲ ಹಂತದ ಮತದಾನ ಶುರುವಾಗಲಿದೆ, ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ.
2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಸ್ತುತ ಬಿಜೆಪಿ 222-234 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಸಮಾಜವಾದಿ ಪಕ್ಷ, ಪಾಲುದಾರ ಪಕ್ಷವು 138-160 ಸ್ಥಾನಗಳನ್ನು ಗೆಲ್ಲಲಿದೆ.ಮಾಯಾವತಿ ನೇತೃತ್ವದ ಬಿಎಸ್‌ಪಿ 11-16, ಕಾಂಗ್ರೆಸ್ 8-9 ಹಾಗೂ ಇತರೆ 2-6 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ.

ಬಿಜೆಪಿಯ ಭದ್ರಕೋಟೆಯಾದ ಉತ್ತರ ಪ್ರದೇಶ ಪ್ರಶ್ಚಿಮ ಭಾಗದಲ್ಲಿ ಬಿಜೆಪಿ 50-51 ಸ್ಥಾನಗಳನ್ನು ಗೆಲ್ಲಲಿದೆ, ಆದರೂ ಪರಿಸ್ಥಿತಿ ಬದಲಾಗಿದೆ, ಎಸ್‌ಪಿ ಸುಮಾರು 40-42 ಕ್ಷೇತ್ರಗಳನ್ನು ಗೆಲ್ಲುವ ನಿರೀಕ್ಷೆ ಇದೆ.ಬಿಜೆಪಿ 2-3 ಸ್ಥಾನಗಳು, ಕಾಂಗ್ರೆಸ್ 3 ಹಾಗೂ ಇತರೆ 1-2 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಲಾಗಿದೆ.
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗಳ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ಇವುಗಳ ಪೈಕಿ ಅತಿ ಹೆಚ್ಚು ಕುತೂಹಲ ಕೆರಳಿಸಿರುವುದು ಉತ್ತರ ಪ್ರದೇಶ ಮತ್ತು ಪಂಜಾಬ್ ವಿಧಾನಸಭೆ ಚುನಾವಣೆ.
403 ಸೀಟುಗಳು ಇರುವ ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10 ರಿಂದ ಆರಂಭವಾಗುವ ಚುನಾವಣೆ, ಮಾರ್ಚ್ 10ರಂದು ಫಲಿತಾಂಶ ಪ್ರಕಟದೊಂದಿಗೆ ಮುಕ್ತಾಯವಾಗಲಿದೆ.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆ ಫೆಬ್ರವರಿ 10ರಂದು ನಡೆಯಲಿದೆ. ಎರಡನೇ ಹಂತದ ಮತದಾನ ಫೆ. 14ರಂದು, ಮೂರನೇ ಹಂತದ ಚುನಾವಣೆ ಫೆ. 20ರಂದು, ನಾಲ್ಕನೇ ಹಂತದ ಮತದಾನ ಫೆ. 23ರಂದು ಹಾಗೂ ಐದನೇ ಹಂತದ ಚುನಾವಣೆ ಫೆ. 27ರಂದು ನಡೆಯಲಿದೆ. ಆರು ಮತ್ತು ಏಳನೇ ಹಂತದ ಚುನಾವಣೆಗಳು ಕ್ರಮವಾಗಿ ಮಾರ್ಚ್ 3 ಹಾಗೂ 7ರಂದು ನಡೆಯಲಿದೆ.
ಐದು ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆ: ಚುನಾವಣಾ ಆಯೋಗದ ನಿಯಮಗಳೇನು?
ಮೊದಲ ಹಂತ
ಅಧಿಸೂಚನೆ ಪ್ರಕಟ: ಜನವರಿ 14
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಜನವರಿ 21
ನಾಮಪತ್ರ ಪರಿಶೀಲನೆ: ಜನವರಿ 24
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜನವರಿ 27
ಮತದಾನದ ದಿನಾಂಕ: ಫೆಬ್ರವರಿ 10
ಎರಡನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 21
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಜನವರಿ 28
ನಾಮಪತ್ರ ಪರಿಶೀಲನೆ: ಜನವರಿ 29
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಜನವರಿ 31
ಮತದಾನದ ದಿನಾಂಕ: ಫೆಬ್ರವರಿ 14
ಮೂರನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 25
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 1
ನಾಮಪತ್ರ ಪರಿಶೀಲನೆ: ಫೆಬ್ರವರಿ 2
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 4
ಮತದಾನದ ದಿನಾಂಕ: ಫೆಬ್ರವರಿ 20
ನಾಲ್ಕನೇ ಹಂತ
ಅಧಿಸೂಚನೆ ಪ್ರಕಟ: ಜನವರಿ 27
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 3
ನಾಮಪತ್ರ ಪರಿಶೀಲನೆ: ಫೆಬ್ರವರಿ 4
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 7
ಮತದಾನದ ದಿನಾಂಕ: ಫೆಬ್ರವರಿ 23
ಐದನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 1
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 8
ನಾಮಪತ್ರ ಪರಿಶೀಲನೆ: ಫೆಬ್ರವರಿ 9
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 11
ಮತದಾನದ ದಿನಾಂಕ: ಫೆಬ್ರವರಿ 27
ಆರನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 4
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 11
ನಾಮಪತ್ರ ಪರಿಶೀಲನೆ: ಫೆಬ್ರವರಿ 14
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 16
ಮತದಾನದ ದಿನಾಂಕ: ಮಾರ್ಚ್ 3
ಏಳನೇ ಹಂತ
ಅಧಿಸೂಚನೆ ಪ್ರಕಟ: ಫೆಬ್ರವರಿ 10
ನಾಮಪತ್ರ ಸಲ್ಲಿಕೆ ಕೊನೆಯ ದಿನ: ಫೆಬ್ರವರಿ 17
ನಾಮಪತ್ರ ಪರಿಶೀಲನೆ: ಫೆಬ್ರವರಿ 18
ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ: ಫೆಬ್ರವರಿ 21
ಮತದಾನದ ದಿನಾಂಕ: ಮಾರ್ಚ್ 7
ಪಂಚ ರಾಜ್ಯ ಚುನಾವಣೆ ಘೋಷಣೆ, ಉ. ಪ್ರದೇಶದಲ್ಲಿ 7 ಹಂತಗಳಲ್ಲಿ ಮತದಾನ, ಮಾರ್ಚ್ 10ಕ್ಕೆ ಫಲಿತಾಂಶ












Click it and Unblock the Notifications