ಮಹಿಳೆಯಿಂದ ಮಸಾಜ್ ಮಾಡಿಸಿಕೊಂಡಿದ್ದನ್ನು ಒಪ್ಪಿಕೊಂಡ ಬಿಜೆಪಿ ಮುಖಂಡ

ಲಖನೌ, ಸೆಪ್ಟೆಂಬರ್ 20: "ನಾನು ಆಕೆಯಿಂದ ಮಸಾಜ್ ಮಾಡಿಸಿಕೊಂಡಿದ್ದು ಹೌದು" ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಚಿನ್ಮಯಾನಂದ ವಿಶೇಷ ತನಿಖಾ ತಂಡದ ಎದುರು ಒಪ್ಪಿಕೊಂಡಿದ್ದಾರೆ. ಆದರೆ ದೂರುದಾರ ಮಹಿಳೆ ಮಾಡಿದ ಅತ್ಯಾಚಾರ ಆರೋಪವನ್ನು ಒಪ್ಪಿಕೊಂಡಿಲ್ಲ.

ಉತ್ತರಪ್ರದೇಶದ ಶಹಜಹಾನ್ ಪುರ್ ನಲ್ಲಿ ಇರುವ ಬಿಜೆಪಿ ನಾಯಕ ಚಿನ್ಮಯಾನಂದ ಮನೆಯಲ್ಲಿ ಶುಕ್ರವಾರ ಬೆಳಗ್ಗೆ ಎಸ್ ಐಟಿಯಿಂದ ಬಂಧಿಸಲಾಯಿತು. ಆರೋಪಿ ಚಿನ್ಮಯಾನಂದ ತಪ್ಪು ಒಪ್ಪಿಕೊಂಡಿರುವ ಬಗ್ಗೆ ಎಸ್ ಐಟಿ ಮುಖ್ಯಸ್ಥ ಮಾಹಿತಿ ನೀಡಿದ್ದಾರೆ. ಶಹಜಹಾನ್ ಪುರ್ ನ ಜಿಲ್ಲಾ ಕಾರಾಗೃಹಕ್ಕೆ ಶುಕ್ರವಾರ ಮಧ್ಯಾಹ್ನ ಚಿನ್ಮಯಾನಂದ ಅವರನ್ನು ಕರೆದೊಯ್ದು, ಅಲ್ಲಿನ ಆಸ್ಪತ್ರೆಯಲ್ಲಿ ದಾಖಲಿಸಲಾಯಿತು.

ಚಿನ್ಮಯಾನಂದಗೆ ಸೇರಿದ ಟ್ರಸ್ಟ್ ನಿಂದ ನಡೆಸುವ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಇಪ್ಪತ್ಮೂರು ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪ ಆತನ ಮೇಲಿದೆ. "ನಾನು ಮಾಡಿದ ಕೃತ್ಯದಿಂದ ನಾಚಿಕೆ ಆಗುತ್ತಿದೆ" ಎಂದು ಚಿನ್ಮಯಾನಂದ ಹೇಳಿದ್ದಾಗಿ ಎಸ್ ಐಟಿ ಮುಖ್ಯಸ್ಥರು ತಿಳಿಸಿದ್ದಾರೆ.

BJP Leader Swami Chinmayananda Admitted Massage Allegation Of Woman

ಚಿನ್ಮಯಾನಂದ ಹಾಗೂ ಮಹಿಳೆ ಮಧ್ಯೆ ಇನ್ನೂರು ಫೋನ್ ಕರೆಗಳು ವಿನಿಮಯ ಆಗಿವೆ. ಡೇಟಾವನ್ನು ಸಂಗ್ರಹಿಸುವ ಸಲುವಾಗಿ ಚಿನ್ಮಯಾನಂದ ಮೊಬೈಲ್ ಫೋನ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಎಂದು ಕೂಡ ಅವರು ಮಾಹಿತಿ ನೀಡಿದ್ದಾರೆ.

ಇನ್ನು ಬೆದರಿಸಿ ಹಣ ವಸೂಲಿ ಮಾಡಲು ಯತ್ನಿಸಿದ ದೂರನ್ನು ಚಿನ್ಮಯಾನಂದ ದೂರು ದಾಖಲಿಸಿದ್ದು, ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಈ ಹಣ ವಸೂಲಿ ಬೆದರಿಕೆ ಪ್ರಕರಣದಲ್ಲಿ ದೂರುದಾರ ಮಹಿಳೆ ಕೂಡ ಆರೋಪಿಯಾಗಿದ್ದಾರೆ. ಸಂಜಯ್ ಸಿಂಗ್, ಸಚಿನ್ ಸಿಂಗ್ ಹಾಗೂ ವಿಕ್ರಮ್ ಬಂಧಿತರು. ಐದು ಕೋಟಿ ರುಪಾಯಿ ನೀಡದಿದ್ದರೆ ಆಕ್ಷೇಪಾರ್ಹ ವಿಡಿಯೋ ಬಿಡುಗಡೆ ಮಾಡುವುದಾಗಿ ಚಿನ್ಮಯಾನಂದಗೆ ಬೆದರಿಕೆ ಹಾಕಿದ್ದರು ಎಂದು ದೂರಲಾಗಿದೆ.

ದೂರುದಾರ ಮಹಿಳೆಯು ಸಂಜಯ್ ಸಿಂಗ್ ಜತೆಗೆ ನಿರಂತರ ಸಂಪರ್ಕದಲ್ಲಿ ಇದ್ದರು. ಇವರಿಬ್ಬರ ಮಧ್ಯೆ ಈ ವರ್ಷದ ಜನವರಿಯಿಂದಾ ಈಚೆಗೆ ನಾಲ್ಕು ಸಾವಿರಕ್ಕೂ ಹೆಚ್ಚು ಫೋನ್ ಕರೆಗಳು ವಿನಿಮಯ ಆಗಿವೆ ಎಂದು ಅರೋರಾ ತಿಳಿಸಿದ್ದಾರೆ. ಸಂಜಯ್ ಹಾಗೂ ಮಹಿಳೆಯು ಬಳಸಿದ ಫೋನ್ ಇನ್ನೂ ವಶಕ್ಕೆ ಪಡೆದಿಲ್ಲ. ವಶಕ್ಕೆ ಪಡೆದ ನಂತರ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+