• search
 • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಾಕಿಸ್ತಾನ ಗೆಲುವಿಗೆ ಇಸ್ಲಾಂ ಧರ್ಮಕ್ಕೆ ಏನು ಸಂಬಂಧ: ಅಸಾದುದ್ದೀನ್ ಓವೈಸಿ

|
Google Oneindia Kannada News

ಲಕ್ನೋ, ಅಕ್ಟೋಬರ್ 28: ಐಸಿಸಿ ಟಿ-20 ವಿಶ್ವಕಪ್​​​ನಲ್ಲಿ ಭಾರತದ ವಿರುದ್ಧ ಪಾಕ್​ ಗೆಲುವು ಕುರಿತು ಪಾಕಿಸ್ತಾನ ಸಚಿವರ ಹೇಳಿಕೆಗೆ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ.

ಇದು ಪಾಕಿಸ್ತಾನದ ಗೆಲುವಲ್ಲ, ಇಸ್ಲಾಮಿನ ಗೆಲುವು ಎಂದು ಪಾಕ್​ ಸಚಿವ ಶೇಖ್ ರಶೀದ್ ಅಹ್ಮದ್ ಹೇಳಿಕೆ ನೀಡಿದ್ದರು. ಇದಕ್ಕೆ ಅಸಾದುದ್ದೀನ್​ ಓವೈಸಿ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ನಮ್ಮ ಯೋಧರು ಸಾಯುತ್ತಿರುವಾಗ ಟಿ-20 ಪಂದ್ಯ ಬೇಕೇ?: ಕೇಂದ್ರದ ವಿರುದ್ಧ ಚಾಟಿ ಬೀಸಿದ ಓವೈಸಿನಮ್ಮ ಯೋಧರು ಸಾಯುತ್ತಿರುವಾಗ ಟಿ-20 ಪಂದ್ಯ ಬೇಕೇ?: ಕೇಂದ್ರದ ವಿರುದ್ಧ ಚಾಟಿ ಬೀಸಿದ ಓವೈಸಿ

ಉತ್ತರ ಪ್ರದೇಶದ ಮುಜಾಫರ್​ನಗರದಲ್ಲಿ ಮಾತನಾಡಿದ ಓವೈಸಿ, ರಾಜ್ಯ ರಾಜಕೀಯದಲ್ಲಿ ಮುಸ್ಲಿಮರ ಪ್ರಭಾವ ಕ್ಷೀಣಿಸಲು ಕಾಂಗ್ರೆಸ್​, ಎಸ್​ಪಿ, ಬಿಎಸ್​​ಪಿ ,ತ್ತು ಆರ್​ಎಲ್​ಡಿ ನೇರ ಕಾರಣವಾಗಿವೆ.ರಾಜ್ಯದಲ್ಲಿ ಸಮಾಜವಾದಿ ಸರ್ಕಾರದ ಅವಧಿಯಲ್ಲಿ 70 ಮುಸ್ಲಿಂ ಶಾಸಕರು ವಿಧಾನಸಭೆಯಲ್ಲಿದ್ದರು.

ಮುಜಾಫರ್​ನಗರ ಗಲಭೆ ವೇಳೆ ಎಲ್ಲರೂ ಮೌನವಹಿಸಿದ್ದರು. 2022ರ ವಿಧಾನಸಭೆ ಚುನಾವಣೆಯಲ್ಲಿ ಮುಸ್ಲಿಮರು ತಮ್ಮ ಮತ ವಿಭಜನೆಯಾಗಲು ಬಿಡಬೇಡಿ ಎಂದರು.

ಪಾಕಿಸ್ತಾನದ ಗೆಲುವು ಇಸ್ಲಾಮಿನ ಗೆಲುವು ಎಂದು ನೇರೆಯ ದೇಶದ ಸಚಿವರು ಹೇಳಿಕೆ ನೀಡಿದ್ದಾರೆ. ಇಸ್ಲಾಂ ಧರ್ಮಕ್ಕೂ ಕ್ರಿಕೆಟ್​​​ ಪಂದ್ಯಗಳಿಗೂ ಏನು ಸಂಬಂಧ? ಎಂದು ಪ್ರಶ್ನೆ ಮಾಡಿರುವ ಓವೈಸಿ, ಭಾರತದ ವಿಚಾರದಲ್ಲಿ ಪಾಕಿಸ್ತಾನ ಹಸ್ತಕ್ಷೇಪ ಮಾಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಪಾಕ್​ ಸಚಿವರಿಗೆ ತಿರುಗೇಟು ನೀಡಿದ ಓವೈಸಿ: ಇದೇ ವೇಳೆ ಎನ್​​ಆರ್​ಸಿ ಮತ್ತು ಸಿಎಎ ವಿರುದ್ಧ ಮುಸ್ಲಿಮರು ನಡೆಸುತ್ತಿರುವ ಪ್ರತಿಭಟನೆ ಒಳ್ಳೆಯದು ಎಂದಿರುವ ಅವರು, ಈ ಕಪ್ಪು ಕಾನೂನುಗಳ ಪ್ರತಿಗಳನ್ನ ಸಂಸತ್ತಿನಲ್ಲಿ ನಾನೇ ಹರಿದು ಹಾಕಿದ್ದೇನೆ ಎಂದರು. ಮುಂದಿನ ವರ್ಷ ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈಗಾಗಲೇ ಎಲ್ಲ ಪಕ್ಷಗಳು ಭರದ ತಯಾರಿಯಲ್ಲಿ ಮಗ್ನವಾಗಿವೆ.

ಭಾರತದ ಸೋಲಿಗೆ ಸಂಭ್ರಮಿಸಿದರೆ ಕೋಪವೇಕೆ ಎಂದ ಮುಫ್ತಿ: ಕಳೆದ ಭಾನುವಾರ ನಡೆದ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತ ವಿರುದ್ಧ ಬಾಬರ್ ನೇತೃತ್ವದ ಪಾಕ್ ತಂಡದ ಗೆಲುವನ್ನು ಜಮ್ಮು ಮತ್ತು ಕಾಶ್ಮೀರದ ಕೆಲವೆಡೆ ಸಂಭ್ರಮಿಸಲಾಯಿತು. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಹಾಗೂ ಫೋಟೋಗಳನ್ನು ಅಪ್ ಲೋಡ್ ಮಾಡಿರುವ ಬಗ್ಗೆ ವರದಿಯಾಗಿದೆ.

ಕೇಂದ್ರಾಡಳಿತ ಪ್ರದೇಶದಲ್ಲಿನ ಪಾಕ್ ಗೆಲುವಿನ ಸಂಭ್ರಮವನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಕಠಿಣ ಶಬ್ಧಗಳಲ್ಲಿ ಭಾರತೀಯರು ಟೀಕಿಸುತ್ತಿದ್ದಾರೆ. ಆದರೆ, ಈ ಸಂಭ್ರಮವನ್ನು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಮರ್ಥನೆ ಮಾಡಿಕೊಂಡಿದ್ದಾರೆ.

ಪಾಕಿಸ್ತಾನದ ವಿಜಯವನ್ನು ಸಂಭ್ರಮಿಸುವ ಕಾಶ್ಮೀರಿಗಳ ವಿರುದ್ಧ ನಿಮಗೆ ಏಕೆ ಇಷ್ಟೊಂದು ಕೋಪ? ಸಂತಸ ವ್ಯಕ್ತಪಡಿಸುವವರ ವಿರುದ್ಧ ಕೊಲೆ ಮಾಡುವ ಘೋಷಣೆ ಮಾಡುತ್ತಿದ್ದಾರೆ. ದೇಶ ದ್ರೋಹಿಗಳನ್ನು ಕೊಲೆ ಮಾಡಿ, ಗುಂಡಿಕ್ಕಿ ಅಂತಾ ಕರೆ ನೀಡುತ್ತಿದ್ದಾರೆ. ಆದರೆ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತುಕೊಂಡಾಗ ಇದೇ ಜನ ಸಿಹಿ ಹಂಚಿ ಸಂಭ್ರಮಿಸಿದ್ದರು. ಕೊಲೆ ಮಾಡಿ ಅನ್ನೋ ಈಗಿನ ಜನ, ಅಂದು ಏಕೆ ಜಮ್ಮು-ಕಾಶ್ಮೀರದ ಜನರ ಪರ ನಿಲ್ಲಲಿಲ್ಲ ಅಂತಾ ಮೆಹಬೂಬಾ ಮುಫ್ತಿ ಟ್ವೀಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಇದಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್, ಪಟಾಕಿ ಸಿಡಿಸಿ ಪಾಕಿಸ್ತಾನದ ಗೆಲುವಿಗೆ ಸಂಭ್ರಮಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ದೀಪಾವಳಿ ಹಬ್ಬದಲ್ಲಿ ಪಟಾಕಿ ಸಿಡಿಸಲು ನಿಷೇಧ ಹೇರಲಾಗಿದೆ. ಆದರೆ, ಭಾರತದ ವಿರುದ್ಧ ಪಾಕ್ ಗೆದ್ದಾಗ ಪಟಾಕಿ ಸಿಡಿಸಲಾಗಿದೆ. ಈ ಬೂಟಾಟಿಕೆ ಏಕೆ ಅಂತಾ ವೀರೇಂದ್ರ ಸೆಹ್ವಾಗ್ ಟ್ವೀಟ್ ನಲ್ಲಿ ಕಟುವಾಗಿ ಟೀಕಿಸಿದ್ದರು.

ಈ ಮಧ್ಯೆ ಭಾರತ ಹಾಗೂ ಪಾಕಿಸ್ತಾನದ ಕ್ರಿಕೆಟ್ ಪಂದ್ಯದ ನಂತರ ಗಲಾಟೆ ನಡೆದಿರುವ ಸುದ್ದಿಗಳು ಬೆಳಕಿಗೆ ಬರುತ್ತಿವೆ. ಪಂಜಾಬ್ ನ ಸಂಗ್ರೂರ್ ಜಿಲ್ಲೆಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲ ಕಾಶ್ಮೀರಿ ವಿದ್ಯಾರ್ಥಿಗಳು ಹಾಗೂ ಯುಪಿ ಮತ್ತು ಬಿಹಾರಿ ವಿದ್ಯಾರ್ಥಿಗಳ ಮಧ್ಯೆ ಜಟಾಪಟಿ ನಡೆದಿರುವ ಬಗ್ಗೆಯೂ ವರದಿಯಾಗಿದೆ. ಪಂದ್ಯ ಮುಕ್ತಾಯವಾದ ನಂತರ ದೇಶ ವಿರೋಧಿ ಘೋಷಣೆಗಳನ್ನು ಕೆಲ ವಿದ್ಯಾರ್ಥಿಗಳು ಕೂಗಿದರು. ಇದು ಗಲಾಟೆಗೆ ಕಾರಣವಾಯಿತು ಅಂತಾ ಪಂಜಾಬ್ ಪೊಲೀಸರು ತಿಳಿಸಿದ್ದಾರೆ.

   Hardik Pandya ಮುಂದಿನ ಪಂದ್ಯದಲ್ಲಿ ಆಡೇ ಆಡ್ತಾರೆ | Oneindia Kannada
   English summary
   All India Majlis-e-Ittehadul Muslimeen (AIMIM) chief Asaduddin Owaisi on Wednesday condemned Pakistan Interior Minister Sheikh Rasheed's statement on the country's win against India in T20 World Cup Match and asked, "What does Islam have to do with cricket matches?".
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X