ಅಮೇಥಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಕಣಕ್ಕಿಳಿದ ಕಾಂಗ್ರೆಸ್ ನಾಯಕನ ಪುತ್ರ
Recommended Video

ಅಮೇಥಿ, ಮಾರ್ಚ್ 26: ಒಂದು ಕಾಲದಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಆಪ್ತರಾಗಿದ್ದ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರನೇ ಈ ಬಾರಿ ಅಮೇಥಿಯಲ್ಲಿ ರಾಹುಲ್ ಗಾಂಧಿ ಅವರ ವಿರುದ್ಧ ಸ್ಪರ್ಧಿಸಲಿದ್ದಾರೆ.
1991 ರ ಚುನಾವಣೆಯ್ಲಿ ರಾಜೀವ್ ಗಾಂಧಿ ಅವರ ನಾಮಪತ್ರಕ್ಕೆ ಪ್ರಸ್ತಾಪಕರಾಗಿ ಸಹಿ ಮಾಡಿದ್ದ ಹಾಜಿ ಸುಲ್ತಾನ್ ಖಾನ್, 1999 ರಲ್ಲಿ ಸೋನಿಯಾ ಗಾಂಧಿ ಅವರ ನಾಮಪತ್ರಕ್ಕೂ ಪ್ರಸ್ತಾಪಕರಾಗಿ ಸಹಿ ಮಾಡಿದ್ದರು. ಇದೀಗ ಇವರ ಪುತ್ರ ಹಾಜಿ ಹಾರೂನ್ ರಶೀದ್ ಅವರು ಅಮೇಥಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದಾರೆ.
ಪಕಗ್ಷದಲ್ಲಿ ನಮ್ಮನ್ನು ಮೂಲೆಗುಂಪು ಮಾಡಲಾಗುತ್ತಿದ್ದು, ನಮ್ಮ ಇಡೀ ಸಮುದಾಯಕ್ಕೂ ನ್ಯಾಯ ಒದಗಿಸುವ ನಿಟ್ತಿನಲ್ಲಿ ನಾನು ಚುನಾವಣೆಗೆ ಸ್ಪರ್ಧಿಸಿದ್ದೇನೆ ಎಂದು ಹಾಜಿ ಹಾರೂನ್ ರಶೀದ್ ತಿಳಿಸಿದ್ದಾರೆ.

ಅಮೇಥಿಯಲ್ಲಿ 6.5 ಲಕ್ಷ ಮತದಾರರಿದ್ದಾರೆ. ನಾವೆಲ್ಲರೂ ಕಾಂಗ್ರೆಸ್ ವಿರುದ್ಧ ಮತ ಚಲಾಯಿಸಲು ಚಿಂತನೆ ನಡೆಸಿದ್ದೇವೆ ಎಂದು ಹಾಜಿ ಹಾರೂನ್ ರಶೀದ್ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಅಮೇಥಿಯಿಂದ ಕಾಂಗ್ರೆಸ್ ನಿಂದ ರಾಹುಲ್ ಗಾಂಧಿ ಮತ್ತು ಬಿಜೆಪಿಯಿಂದ ಕೇಂದ್ರ ಸಚಿವೆ ಸ್ಮೃತಿ ಇರಾನಿ ಕಣಕ್ಕಿಳಿದಿದ್ದಾರೆ.












Click it and Unblock the Notifications