ಉತ್ತರ ಪ್ರದೇಶದ ಈ ಶಾಲೇಲಿ 'ಭಾರತ್ ಮಾತಾ ಕೀ ಜೈ' ಅಂದ್ರೆ ಅಪರಾಧ!
Recommended Video

ಬಲ್ಲಿಯ(ಉತ್ತರ ಪ್ರದೇಶ), ಅಕ್ಟೋಬರ್ 06: 'ಭಾರತ್ ಮಾತಾ ಕೀ ಜೈ' ಎಂದು ಘೋಷಣೆ ಕೂಗುವ ಮಕ್ಕಳಿಗೆ ಶಿಕ್ಷೆ ನೀಡುತ್ತಿರುವ ಘಟನೆ ಉತ್ತರ ಪ್ರದೇಶದ ಬೆಳಕಿಗೆ ಬಂದಿದೆ.
ಇಲ್ಲಿನ ಸಾಮಾಜಿಕ ಸಂಘಟನೆಯೊಂದರ ಸದಸ್ಯರು ಶಾಲೆಗೆ ತೆರಳಿದ್ದ ಸಂದರ್ಭದಲ್ಲಿ ಈ ವಿಚಾರ ಬೆಳಕಿಗೆ ಬಂದಿದ್ದು, ಅವರು ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ, 'ನಾವು ಭಾರತ್ ಮಾತಾ ಕೀ ಜೈ ಎಂದು ಘೋಷಣೆ ಕೂಗಿದರೆ ನಮ್ಮನ್ನು ಶಿಕ್ಷಿಸಲಾಗುತ್ತದೆ' ಎಂದು ವಿದ್ಯಾರ್ಥಿಗಳೇ ಹೇಳಿಕೊಂಡಿದ್ದಾರೆ.
'ಇದೊಂದು ಸರ್ಕಾರಿ ಶಾಲೆಯಾಗಿದ್ದು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಶಿಕ್ಷಕರೇ ಇದ್ದಾರೆ. ಅವರಿಗೆ ವಿದ್ಯಾರ್ಥಿಗಳು ಭಾರತದ ಕುರಿತು ದೇಶಭಕ್ತಿ ತೋರುವುದು ಇಷ್ಟವಿಲ್ಲ. ಅದಕ್ಕಾಗಿ ಈಗಾಗಲೇ ಹಲವು ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿದೆ' ಎಂದು ಶಾಲೆಯ ಶಿಕ್ಷಕ ಸಂಜಯ್ ಪಾಂಡೆ ದೂರಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿದ ಶಾಲೆಯ ಪ್ರಾಂಶುಪಾಲ ಮಜಿದ್ ನಸ್ಸೆರ್, 'ಇಂಥ ಯಾವುದೇ ಪ್ರಕರಣಗಳು ನ್ಮ ಶಾಲೆಯಲ್ಲಿ ನಡೆದಿಲ್ಲ. ನಮ್ಮ ಶಾಲೆಯಲ್ಲಿ ಎಲ್ಲಾ ರಾಷ್ತ್ರೀಯ ಹಬ್ಬಗಳನ್ನೂ ಉತ್ಸಾಹದಿಂದ ಆಚರಿಸುತ್ತೇವೆ. ದೇಶಭಕ್ತಿಯನ್ನು ಸ್ಫುರಿಸುವ ಎಷ್ಟೋ ಕಾರ್ಯಕ್ರಮಗಳಲ್ಲಿ ನಾನೇ ಖುದ್ದಾಗಿ ಭಾಗವಹಿಸಿದ್ದೇನೆ. ಅ.2 ರಂದು ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ, ಸ್ವಚ್ಛಭಾರತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ನಮ್ಮ ಶಾಲೆಯ ಬಗ್ಗೆ ಯಾರೋ ಬೇಕೆಂದೇ ಈ ರೀತಿ ಸುಳ್ಳು ಆರೋಪ ಹೊರಿಸುತ್ತಿದ್ದಾರೆ' ಎಂದಿದ್ದಾರೆ.












Click it and Unblock the Notifications