ಪರಿಚಯವಿದೆ ಎಂದು ಹೋದರೆ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದೇಬಿಟ್ರು
ಲಕ್ನೋ, ಜೂನ್ 16: ಏಳು ವರ್ಷದ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಗೋರಖ್‌ಪುರದಲ್ಲಿ ಈ ಘಟನೆ ನಡೆದಿದೆ. ಈ ಪ್ರದೇಶವು ಸಿಕ್ರಿಗಂಜ್ ಗೆ ಒಳಪಟ್ಟಿದೆ.48 ವರ್ಷದ ವ್ಯಕ್ತಿ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎನ್ನುವ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.
ಆತ ಬಾಲಕಿಯ ತಂದೆಗೆ ಪರಿಚಯಸ್ಥನೇ ಆಗಿದ್ದ, ಬಾಲಕಿಗೆ ಚಾಕೊಲೇಟ್ ನೀಡುವ ಆಸೆ ತೋರಿಸಿ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ. ನಿರ್ಜನ ಪ್ರದೇಶಕ್ಕೆ ಬೈಕಿನಲ್ಲಿ ಕರೆದೊಯ್ದಿದ್ದಾನೆ, ಬಳಿಕ ಅತ್ಯಾಚಾರವೆಸಗಿ ಆಕೆಯನ್ನು ಕೊಲೆ ಮಾಡಿ ಬಳಿಕ ಶವವನ್ನು ಎಸೆದು ಪರಾರಿಯಾಗಿದ್ದ.

ಪಪ್ಪು ರೈ ಅತ್ಯಾಚಾರ ಎಸಗಿದ ಕಾಮುಕ. ಆರೋಪಿಯನ್ನು ಸಿಕ್ರಿಗಂಜ್ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಬಾಲಕಿ ಅಳಲು ಆರಂಭಿಸುತ್ತಿದ್ದಂತೆ ಆಕೆಯನ್ನು ಹೊಡೆದು ಕೊಲೆ ಮಾಡಿ, ಮೃತ ದೇಹವನ್ನು ಬೀಸಾಡಿ ಹೋಗಿದ್ದಾನೆ.
ಬಾಲಕಿ ಕಾಣೆಯಾಗಿರುವ ಕುರಿತು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.ಆರೋಪಿ ಪಪ್ಪು ವಿರುದ್ಧ ಪೊಕ್ಸೊ ಸೇರಿದಂತೆ ಐಪಿಸಿ ಸೆಕ್ಷನ್ 364 (ಅಪಹರಣ), 376 (ಅತ್ಯಾಚಾರ) ಹಾಗೂ 302 (ಕೊಲೆ) ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಪಪ್ಪುನನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಆರೋಪಿ ತನ್ನ ತಪ್ಪು ಒಪ್ಪಿಕೊಂಡು ಕೃತ್ಯ ಎಸಗಿದ ಜಾಗಕ್ಕೆ ಪೊಲೀಸರನ್ನು ಕರೆದುಕೊಂಡು ಹೋಗಿದ್ದನು. ಆಗ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅದನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.












Click it and Unblock the Notifications