ಯುಪಿ: 5ನೇ ಹಂತದ ರಣಕಣದಲ್ಲಿ 185 ಅಭ್ಯರ್ಥಿಗಳಿಗೆ ಕ್ರಿಮಿನಲ್ ಹಿನ್ನಲೆ
ಲಕ್ನೋ ಫೆಬ್ರವರಿ 21: ಉತ್ತರಪ್ರದೇಶದಲ್ಲಿ ಈಗಾಗಲೇ ಮೂರನೇ ಹಂತದ ಮತದಾನ ಮುಗಿದಿದ್ದು, ಫೆಬ್ರವರಿ 23ರಂದು ನಾಲ್ಕನೇ ಹಂತದ ಮತದಾನ ನಡೆಯಲಿದೆ. ಈ ನಡುವೆ ಐದನೇ ಹಂತದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ 685 ಅಭ್ಯರ್ಥಿಗಳ ಪೈಕಿ 185 ಮಂದಿ ತಮ್ಮ ವಿರುದ್ಧ ಬಾಕಿ ಇರುವ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ. 141 (21%) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಹೇಳುತ್ತದೆ.
ಪ್ರಮುಖ ಪಕ್ಷಗಳ ಪೈಕಿ, ಎಸ್‌ಪಿಯಿಂದ 59 ಅಭ್ಯರ್ಥಿಗಳಲ್ಲಿ 42 (71%), ಅಪ್ನಾ ದಳ್ 7 ಅಭ್ಯರ್ಥಿಗಳಲ್ಲಿ 4 (57%), ಬಿಜೆಪಿಯಿಂದ ವಿಶ್ಲೇಷಿಸಲಾದ 52 ಅಭ್ಯರ್ಥಿಗಳಲ್ಲಿ 25 (48%), BSP ಯಿಂದ ವಿಶ್ಲೇಷಿಸಲಾದ 61 ಅಭ್ಯರ್ಥಿಗಳಲ್ಲಿ 23 (38%), INC ಯಿಂದ ವಿಶ್ಲೇಷಿಸಲಾದ 61 ಅಭ್ಯರ್ಥಿಗಳಲ್ಲಿ 23 (38%) ಮತ್ತು AAP ಯಿಂದ ವಿಶ್ಲೇಷಿಸಲಾದ 52 ಅಭ್ಯರ್ಥಿಗಳಲ್ಲಿ 10 (19%) ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.

ಗಂಭೀರ ಕ್ರಿಮಿನಲ್ ಪ್ರಕರಣಗಳು
ಪ್ರಮುಖ ಪಕ್ಷಗಳ ಪೈಕಿ, ಎಸ್‌ಪಿಯಿಂದ 59 ಅಭ್ಯರ್ಥಿಗಳಲ್ಲಿ 29 (49%), ಅಪ್ನಾ ದಳ್ ಸೋನಿಲಾಲ್‌ನಿಂದ 7 ಅಭ್ಯರ್ಥಿಗಳಲ್ಲಿ 2 (29%), ಬಿಜೆಪಿಯಿಂದ ವಿಶ್ಲೇಷಿಸಲಾದ 52 ಅಭ್ಯರ್ಥಿಗಳಲ್ಲಿ 22 (42%), BSP ಯಿಂದ ವಿಶ್ಲೇಷಿಸಲಾದ 61 ಅಭ್ಯರ್ಥಿಗಳಲ್ಲಿ 17 (28%), INC ಯಿಂದ ವಿಶ್ಲೇಷಿಸಲಾದ 61 ಅಭ್ಯರ್ಥಿಗಳಲ್ಲಿ 17 (28%) ಮತ್ತು AAP ಯಿಂದ ವಿಶ್ಲೇಷಿಸಲಾದ 52 ಅಭ್ಯರ್ಥಿಗಳಲ್ಲಿ 7 (14%) ತಮ್ಮ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಹೊಂದಿದ್ದಾರೆ.

12 ಅಭ್ಯರ್ಥಿಗಳ ಕ್ರಿಮಿನಲ್ ಹಿನ್ನಲೆ
12 ಅಭ್ಯರ್ಥಿಗಳು ಮಹಿಳೆಯರ ಮೇಲಿನ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೊಂದಿದ್ದಾರೆ. 12 ಅಭ್ಯರ್ಥಿಗಳಲ್ಲಿ 1 ಅಭ್ಯರ್ಥಿಯು ಅತ್ಯಾಚಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಘೋಷಿಸಿದ್ದಾರೆ (IPC ಸೆಕ್ಷನ್-376). 8 ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆ (ಐಪಿಸಿ ಸೆಕ್ಷನ್-302) ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ. 31 ಅಭ್ಯರ್ಥಿಗಳು ತಮ್ಮ ವಿರುದ್ಧ ಕೊಲೆ ಯತ್ನ (ಐಪಿಸಿ ಸೆಕ್ಷನ್-307) ಪ್ರಕರಣಗಳನ್ನು ಘೋಷಿಸಿಕೊಂಡಿದ್ದಾರೆ.
ಇನ್ನೂ ಐದನೇ ಹಂತದ ಚುನಾವಣೆಯ 61 ಕ್ಷೇತ್ರಗಳಲ್ಲಿ 39(64%) ರೆಡ್ ಅಲರ್ಟ್ ಕ್ಷೇತ್ರಗಳಾಗಿವೆ. ರೆಡ್ ಅಲರ್ಟ್ ಕ್ಷೇತ್ರಗಳೆಂದರೆ 3 ಅಥವಾ ಅದಕ್ಕಿಂತ ಹೆಚ್ಚು ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳನ್ನು ಘೋಷಿಸಿಕೊಂಡಿದ್ದಾರೆ.

ಐದನೇ ಹಂತದ ಅಭ್ಯರ್ಥಿಗಳ ಆಸ್ತಿಪಾಸ್ತಿ ವಿವರ
ಐದನೇ ಹಂತದ 685 ಅಭ್ಯರ್ಥಿಗಳಲ್ಲಿ 246 (36%) ಅಭ್ಯರ್ಥಿಗಳು ಕೋಟ್ಯಾಧಿಪತಿಗಳಿದ್ದಾರೆ. ಪ್ರಮುಖ ಪಕ್ಷಗಳ ಪೈಕಿ ಬಿಜೆಪಿಯಿಂದ ವಿಶ್ಲೇಷಿಸಲಾದ 52 ಅಭ್ಯರ್ಥಿಗಳಲ್ಲಿ 47(90%) ಅಭ್ಯರ್ಥಿಗಳು, ಅಪ್ನಾ ದಳ ಸೋನಿಲಾಲ್‌ನಿಂದ 7 ಅಭ್ಯರ್ಥಿಗಳಲ್ಲಿ 6(86%), ಎಸ್‌ಪಿಯಿಂದ ವಿಶ್ಲೇಷಿಸಲಾದ 59 ಅಭ್ಯರ್ಥಿಗಳಲ್ಲಿ 49(83%), BSP ಯಿಂದ ವಿಶ್ಲೇಷಿಸಲಾದ 61 ಅಭ್ಯರ್ಥಿಗಳಲ್ಲಿ 44(72%), INC ಯಿಂದ ವಿಶ್ಲೇಷಿಸಲಾದ 61 ಅಭ್ಯರ್ಥಿಗಳಲ್ಲಿ 30 (49%) ಮತ್ತು AAP ಯಿಂದ ವಿಶ್ಲೇಷಿಸಲಾದ 52 ಅಭ್ಯರ್ಥಿಗಳಲ್ಲಿ 11 (21%)ಅಭ್ಯರ್ಥಿಗಳು 1 ಕೋಟಿಗಿಂತ ಹೆಚ್ಚು ಮೌಲ್ಯದ ಆಸ್ತಿಯನ್ನು ಘೋಷಿಸಿದ್ದಾರೆ.
ಉತ್ತರ ಪ್ರದೇಶ ಅಸೆಂಬ್ಲಿ ಚುನಾವಣೆ 2022 5 ನೇ ಹಂತದಲ್ಲಿ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯ ಸರಾಸರಿ 2.48 ಕೋಟಿ ರೂ. ಆಸ್ತಿಯನ್ನು ಹೊಂದಿದ್ದಾರೆ. ಪ್ರಮುಖ ಪಕ್ಷಗಳಲ್ಲಿ 52 ಬಿಜೆಪಿಯ ಪ್ರತಿ ಅಭ್ಯರ್ಥಿಯ ಸರಾಸರಿ ಆಸ್ತಿ ರೂ. 9.95 ಕೋಟಿ, 59 ಎಸ್‌ಪಿ ಅಭ್ಯರ್ಥಿಗಳು 5.90 ಕೋಟಿ ರೂ., 61 ಬಿಎಸ್‌ಪಿ ಅಭ್ಯರ್ಥಿಗಳು 4.63 ಕೋಟಿ ರೂ. ಸರಾಸರಿ ಆಸ್ತಿ ಹೊಂದಿದ್ದಾರೆ. 61 ಐಎನ್‌ಸಿ ಅಭ್ಯರ್ಥಿಗಳು ರೂ. 2.90 ಕೋಟಿ ಸರಾಸರಿ ಆಸ್ತಿ ಹೊಂದಿದ್ದಾರೆ ಮತ್ತು 52 ಎಎಪಿ ಅಭ್ಯರ್ಥಿಗಳು ರೂ. 80.70 ಲಕ್ಷ ರೂ ಆಸ್ತಿ ಹೊಂದಿದ್ದಾರೆ.

ಇತರೆ ವಿವರಗಳು
248 (36%) ಅಭ್ಯರ್ಥಿಗಳು ತಮ್ಮ ವಯಸ್ಸು 25 ರಿಂದ 40 ವರ್ಷಗಳು ಎಂದು ಘೋಷಿಸಿದ್ದಾರೆ ಮತ್ತು 368 (54%) ಅಭ್ಯರ್ಥಿಗಳು ತಮ್ಮ ವಯಸ್ಸನ್ನು 41 ರಿಂದ 60 ವರ್ಷಗಳು ಎಂದು ಘೋಷಿಸಿದ್ದಾರೆ. 69 (10%) ಅಭ್ಯರ್ಥಿಗಳು ತಮ್ಮ ವಯಸ್ಸನ್ನು 61 ರಿಂದ 80 ವರ್ಷಗಳ ನಡುವೆ ಎಂದು ಘೋಷಿಸಿದ್ದಾರೆ. ಇನ್ನೂ 90(13%) ಮಹಿಳಾ ಅಭ್ಯರ್ಥಿಗಳು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022 ರ ಐದನೇ ಹಂತದಲ್ಲಿ ಸ್ಪರ್ಧಿಸುತ್ತಿದ್ದಾರೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications