ಅಪ್ರಾಪ್ತ ಸಹೋದರರಿಂದ 6 ವರ್ಷದ ತಂಗಿಯ ಮೇಲೆ ಅತ್ಯಾಚಾರ, ಕೊಲೆ
ಲಕ್ನೋ, ಆಗಸ್ಟ್ 22: ಅಪ್ರಾಪ್ತ ಸಹೋದರರಿಬ್ಬರು 6 ವರ್ಷದ ತಂಗಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವ ಮನಕಲಕುವ ಘಟನೆ ಲಕ್ನೋನಲ್ಲಿ ನಡೆದಿದೆ.
ಆಟವಾಡುತ್ತಿದ್ದ ಬಾಲಕಿಯು ಏಕಾಏಕಿ ಕಾಣೆಯಾಗಿದ್ದಳು, ಮಗಳು ಕಾಣದಿದ್ದಾಗ ಪೋಷಕರು ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಬಾಲಕಿ ಒಂದನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ಪೊಲೀಸರು ತಕ್ಷಣವೇ ಬಾಲಕಿಯನ್ನು ಹುಡುಕಲು ಆರಂಭಿಸಿದ್ದರು, ರಾತ್ರಿಯಾದರೂ ಬಾಲಕಿಯ ಸುಳಿವಿರಲಿಲ್ಲ.

ಬಳಿಕ ಬುಧವಾರ ಬೆಳಗ್ಗೆ ಆರೋಪಿಗಳ ತಾಯಿಯೇ ಬಂದು ಪೊಲೀಸರಿಗೆ ಶರಣಾಗಿದ್ದಾಳೆ, ಮಕ್ಕಳು ಮಗುವಿನ ಕತ್ತು ಹಿಸುಕಿ ಕೊಲೆ ಮಾಡಿದ್ದರು ಶವವನ್ನು ಎಸೆಯಲು ತಾನು ಸಹಾಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ.
ಆರೋಪಿಗಳು 15 ಹಾಗೂ 12 ವರ್ಷದವರಾಗಿದ್ದು, ಶಾಲೆಯನ್ನು ಬಿಟ್ಟಿದ್ದಾರೆ. ಇವರ ತಂದೆ-ತಾಯಿ ಕೂಲಿ ಕಾರ್ಮಿಕರಾಗಿದ್ದು, ಬಾಲಕರು ಚಿಂದಿ ಆಯುವ ಕೆಲಸ ಮಾಡುತ್ತಿದ್ದರು. ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಮನೆಯಿಂದ ಸುಮಾರು 200 ಮೀ. ದೂರದಲ್ಲಿದ್ದ ಬಾಲಕಿಯ ದೇಹವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಆರೋಪಿ ಬಾಲಕರನ್ನು ವಿಚಾರಣೆ ನಡೆಸಿದ್ದು, ಕ್ಯಾಂಡಿ ಆಮಿಷ ಒಡ್ಡಿ ಬಾಲಕಿಯನ್ನು ಕರೆದುಕೊಂಡು ಹೋಗಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಪೊಲೀಸರು ಇಬ್ಬರು ಸಹೋದರರು ಹಾಗೂ ತಾಯಿಯನ್ನು ಬಂಧಿಸಿದ್ದಾರೆ.












Click it and Unblock the Notifications