ಉತ್ತರಪ್ರದೇಶದಲ್ಲಿ ಪೂರ್ವ ಎಕ್ಸ್‌ಪ್ರೆಸ್ ರೈಲು ಪಲ್ಟಿ, 20 ಮಂದಿಗೆ ಗಾಯ
ಖಾನ್‌ಪುರ, ಏ.20: 12 ಬೋಗಿಗಳುಳ್ಳ ಪೂರ್ವಿಕಾ ಎಕ್ಸ್‌ಪ್ರೆಸ್ ಖಾನ್‌ಪುರದ ರೂಮಾ ರೈಲ್ವೆ ನಿಲ್ದಾಣದ ಬಳಿ ಹಳಿ ತಪ್ಪಿದ್ದು ಘಟನೆಯಲ್ಲಿ 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿವೆ.
ರೈಲು ಹಳಿ ತಪ್ಪಿದ ಕಾರಣ 20 ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ಉತ್ತರಪ್ರದೇಶದ ಖಾನ್‌ಪುರದಲ್ಲಿ ಶುಕ್ರವಾರ ಮಧ್ಯರಾತ್ರಿ 12 ಗಂಟೆ ಸುಮಾರಿಗೆ ನಡೆದಿದೆ.

12 ಬೋಗಿಗಳ ಪೈಕಿ 4 ಬೋಗಿಗಳು ಪಲ್ಟಿ ಹೊಡೆದಿವೆ. ರೈಲು ಪ್ರಯಾಗದಿಂದ ದೆಹಲಿಗೆ ತೆರಳುತ್ತಿತ್ತು. ಈ ರೈಲು ಹೌರಾದಿಂದ ದಹಲಿಗೆ ತೆರಳುತ್ತಿತ್ತು.
ಈ ರೈಲು ಗಂಟೆಗೆ 100 ಕಿ.ಮೀ ದೂರ ಕ್ರಮಿಸಬಹುದಾಗಿದೆ. ಈಗಾಗಲೇ ಸ್ಥಳಗ್ಗೆ 10ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಧಾವಿಸಿದ್ದು ರಕ್ಷಣಾ ಕಾರ್ಯ ಮುಂದುವರೆದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ.












Click it and Unblock the Notifications