ಶಿಕ್ಷಕನ ಮೇಲೆ ಗುಂಡು ಹಾರಿಸಿದ 10ನೇ ತರಗತಿ ವಿದ್ಯಾರ್ಥಿ

ಲಕ್ನೋ, ಸೆಪ್ಟೆಂಬರ್ 24: ಶಿಕ್ಷಕರೊಬ್ಬರು ನಿಂದಿಸಿದರು ಎಂಬ ಕಾರಣಕ್ಕೆ 10ನೇ ತರಗತಿ ವಿದ್ಯಾರ್ಥಿಯೊಬ್ಬ ಶಿಕ್ಷಕರ ಮೇಲೆ ಗುಂಡು ಹಾರಿಸಿರುವ ಘಟನೆಯೊಂದು ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ.

10 ತರಗತಿ ವಿದ್ಯಾರ್ಥಿಯು ತನ್ನ ಸ್ನೇಹಿತನ ಜೊತೆಗೆ ಜಗಳವಾಡಿದ್ದು, ಇದಕ್ಕೆ ಶಿಕ್ಷಕರು ಆತನನ್ನು ಬೈದಿದ್ದರು. ಇದರಿಂದ ಮನನೊಂದಿದ್ದ ವಿದ್ಯಾರ್ಥಿಯು ದೇಶೀ ಪಿಸ್ತೂಲ್ ಬಳಸಿಕೊಂಡು ಶಿಕ್ಷಕನ ಮೇಲೆ ಫೈರಿಂಗ್ ಮಾಡಿದ್ದಾನೆ ಎಂದು ಗೊತ್ತಾಗಿದೆ.

ಆರೋಪಿ ವಿದ್ಯಾರ್ಥಿಯು ಶಿಕ್ಷಕರ ಮೇಲೆ ಬಂದೂಕಿನಿಂದ ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

10 Class Student Shoots Teacher Thrice In Uttar Pradeshs Sitapur

ಪ್ರಾಣಾಪಾಯದಿಂದ ಶಿಕ್ಷಕ ಬಚಾವ್:

ವಿದ್ಯಾರ್ಥಿ ಹಾರಿಸಿದ ಗುಂಡಿನಿಂದ ಗಂಭೀರವಾಗಿ ಗಾಯಗೊಂಡಿದ್ದರೂ, ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ದೀಕ್ಷಿತ್ ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಶಿಕ್ಷಕರನ್ನು ಲಕ್ನೋಗೆ ಕಳುಹಿಸಲಾಗಿದೆ ಎಂದಿದ್ದಾರೆ.

ಸಿಸಿ ಕ್ಯಾಮರಾದಲ್ಲಿ ಇಡೀ ಘಟನೆ ಸೆರೆ:

ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕ್ಲಿಪ್ ವಿದ್ಯಾರ್ಥಿಯು ಕೈಯಲ್ಲಿ ಗನ್ ಹಿಡಿದು ಶಿಕ್ಷಕರನ್ನು ಹಿಂಬಾಲಿಸುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಆದರೆ ಕೆಲವೇ ಕ್ಷಣಗಳಲ್ಲಿ ಅವನ ಕೈಯಲ್ಲಿದ್ದ ಪಿಸ್ತೂಲ್ ಕಸಿದುಕೊಳ್ಳಲು ಪ್ರಯತ್ನಿಸುತ್ತಾರೆ. ವಿದ್ಯಾರ್ಥಿಯು ತನ್ನ ಪಿಸ್ತೂಲಿನಿಂದ ಆತನ ಮೇಲೆ ಹಲ್ಲೆ ನಡೆಸುತ್ತಿರುವಾಗ ಶಿಕ್ಷಕನು ಮತ್ತೆ ಪ್ರತಿರೋಧ ತೋರುತ್ತಿರುವುದನ್ನು ನೋಡಬಹುದು. ನಂತರ ಕೆಲವು ಸ್ಥಳೀಯರು ಧಾವಿಸಿ ಬಂದು ವಿದ್ಯಾರ್ಥಿಯನ್ನು ತಡೆಯಲು ಪ್ರಯತ್ನಿಸಿದ್ದು, ಒಬ್ಬರು ಮರದ ಕೋಲು ಹಿಡಿದು ಅವನನ್ನು ಬೆದರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+