• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಲಸಿಕೆ ಹಾಕಿಸಿಕೊಂಡ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್

|

ಲಂಡನ್, ಮಾರ್ಚ್ 20: ಒಂದೆಡೆ ಕೊರೊನಾ ಲಸಿಕೆ ಕುರಿತು ಜನರಿಂದಲೇ ಅಪಸ್ವರ ಕೇಳಿಬರುತ್ತಿದ್ದು, ಇದರ ನಡುವೆಯೂ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

ನಾನು ನನ್ನ ಮೊದಲ ಆಕ್ಸ್ ಫರ್ಡ್ - ಅಸ್ಟ್ರಾಜೆನೆಕಾ ಲಸಿಕೆ ಸ್ವೀಕರಿಸಿದ್ದೇನೆ. ಇದನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿದ ಎಲ್ಲ ಅದ್ಬುತ ವಿಜ್ಞಾನಿಗಳು, ಎನ್ ಎಚ್ ಎಸ್ ಸಿಬ್ಬಂದಿ ಮತ್ತು ಸ್ವಯಂ ಸೇವಕರಿಗೆ ಧನ್ಯವಾದಗಳು.

ಕೊವಿಡ್ 19: ಮಾರ್ಚ್ 19ರಂದು ಯಾವ ದೇಶದಲ್ಲಿ ಹೆಚ್ಚು ಗುಣಮುಖ?

ಲಸಿಕೆ ಪಡೆಯುವುದು ನಾವು ಸಹಜ ಜೀವನಕ್ಕೆ ಮರಳಲು ಮಾಡಬಹುದಾದ ಅತ್ಯುತ್ತಮ ಕೆಲಸ ಹೀಗಾಗಿ ಎಲ್ಲರೂ ಲಸಿಕೆ ಪಡೆದು ಆರೋಗ್ಯವಂತರಾಗಲಿ, ಎಂದಿನಂತೆ ಸಹಜ ಜೀವನ ನಡೆಸಲಿ ಎಂದು ಪ್ರಧಾನಿ ಜಾನ್ಸನ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.

ಜನರ ಅಪನಂಬಿಕೆಯ ನಡುವೆಯೂ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅಸ್ಟ್ರಾಜೆನೆಕಾ ಕೊರೋನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಕೊರೊನಾ ಸೋಂಕಿನ ಚಿಕಿತ್ಸೆ ಪಡೆದಿದ್ದ ಪ್ರಧಾನಿ, ಈ ವಾರದ ಆರಂಭದಲ್ಲಿ ಲಸಿಕೆ ಹಾಕಿಸಿಕೊಳ್ಳುವುದಾಗಿ ಹೇಳಿದ್ದರು.

ಆಸ್ಪತ್ರೆಯಲ್ಲಿ ಲಸಿಕೆ ಶಾಟ್ ಸ್ವೀಕರಿಸುವ ಫೋಟೋವನ್ನು ಸಹ ಅವರು ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದಾರೆ. ದೇಶದಲ್ಲಿ ಪ್ರಸ್ತುತ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ. ಇದರಲ್ಲಿ 56 ವರ್ಷದ ಪ್ರಧಾನಿ ಜಾನ್ಸನ್ ಸೇರಿದ್ದಾರೆ.

English summary
British Prime Minister Boris Johnson on Friday received his first dose of AstraZeneca's COVID-19 vaccine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X