• search
  • Live TV
ಲಂಡನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ರಿಟನ್‌ನಲ್ಲಿ 58 ಸಾವಿರ ರೂಪಾಂತರಿ ಕೊರೊನಾ ಸೋಂಕಿತರು ಪತ್ತೆ

|

ಲಂಡನ್, ಜನವರಿ 05: ಬ್ರಿಟನ್‌ನಲ್ಲಿ 58 ಸಾವಿರ ರೂಪಾಂತರಿ ಕೊರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.

ಬ್ರಿಟನ್‌ನಲ್ಲಿ ರೂಪಾಂತರಿ ಕೊರೊನಾ ಸೋಂಕು ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ಬೋರಿಸ್ ಜಾನ್ಸರ್ ಅವರು, ಇಂಗ್ಲೆಂಡ್‌ನಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್‌ಡೌನ್ ಘೋಷಣೆ ಮಾಡಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಸುಮಾರು 27 ಸಾವಿರ ಜನರು ಆಸ್ಪತ್ರೆಯಲ್ಲಿದ್ದಾರೆ. ಕಳೆದ ವರ್ಷ ಏಪ್ರಿಲ್ ನಲ್ಲಿ ಕಾಣಿಸಿಕೊಂಡ ಮೊದಲನೇ ಅಲೆಯಿಂದಾಗಿ ಶೇ.40 ಕ್ಕೂ ಹೆಚ್ಚು ಜನರು ಗಂಭೀರ ಸ್ಥಿತಿಗೆ ತಲುಪಿದ್ದಾರೆ. ಕಳೆದ ಮಂಗಳವಾರ 80 ಸಾವಿರಕ್ಕು ಹೆಚ್ಚು ಜನರು ಕೇವಲ 24 ಗಂಟೆಗಳಲ್ಲಿ ಸೋಂಕು ಕಾಣಿಸಿಕೊಂಡಿದೆ.

ಭಾರತದಲ್ಲಿ ಕೊರೊನಾ ಲಸಿಕೆ ಬಂದ ಬಳಿಕ ಮುಂದೇನು?

ಈಗಾಗಲೇ ಅನೇಕ ರಾಷ್ಟ್ರಗಳು ಅತಿ ಕಠಿಣವಾದ ನಿರ್ಧಾರಗಳನ್ನು ಜಾರಿ ಮಾಡಿದೆ. ರೂಪಾಂತರಿ ಕೊರೊನಾ ವೈರಸ್'ನ್ನು ನಿಯಂತ್ರಣಕ್ಕೆ ತರಲು ಲಸಿಕೆ ಇದ್ದರೂ ಕೂಡ ಇಂತಹದ್ದೇ ನಿರ್ಧಾರವನ್ನು ಅನುಸರಿಸಬೇಕಾಗುತ್ತದೆ. ನಾಳೆಯಿಂದಲೇ ಇಂಗ್ಲೆಂಡ್ ಮತ್ತೊಮ್ಮೆ ಸಂಪೂರ್ಣ ಸ್ತಬ್ಧವಾಗಲಿದೆ ಎಂದು ತಿಳಿಸಿದ್ದಾರೆ.

ಸೋಂಕಿನ ಸರಪಳಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಫೆಬ್ರವರಿ ಮಧ್ಯದವರೆಗೂ ಲಾಕ್ಡೌನ್ ಮುಂದುವರೆಯುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಇಂಗ್ಲೆಂಡಿನಲ್ಲಿ ಸುಮಾರು 56 ಮಿಲಿಯನ್ ರಷ್ಟು ಜನರಿದ್ದಲೂ ಎಲ್ಲರೂ ಲಾಕ್ಡೌನ್'ಗೆ ಒಳಪಡಲಿದ್ದಾರೆ. ಫೆಬ್ರವರಿ ಮಧ್ಯದವರೆಗೂ ಲಾಕ್ಡೌನ್ ಜಾರಿಯಲ್ಲಿರಲಿದ್ದು, ಬುಧವಾರದಿಂದ ಎಲ್ಲಾ ಶಾಲಾ-ಕಾಲೇಜುಗಳು ಬಂದ್ ಆಗಲಿವೆ.

ಇಂಗ್ಲೆಂಡ್'ನಲ್ಲಿ ಕೊರೊನಾ ಮರಣ ದರ ಅತ್ಯಧಿಕವಾಗಿದ್ದು, ಈಗಾಗಲೇ ಮುಕ್ಕಾಲು ಭಾಗದಷ್ಟು ಜನರು ಸೋಂಕಿಗೆ ಒಳಗಾಗಿದ್ದಾರೆಂದು ಹೇಳಲಾಗುತ್ತಿದೆ. ಆದ್ದರಿಂದ ಮೊದಲ ಲಾಕ್ಡೌನ್ ಗಿಂತಲೂ ಕಠಿಣ ನಿಯಮಗಳು ಈ ಬಾರಿ ಜಾರಿಯಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಬೋರಿಸ್ ಮನವಿ ಮಾಡಿದ್ದಾರೆ.

English summary
UK has reported another 58,784 new coronavirus cases, which is the highest daily spike in the nation since the beginning of the pandemic. UK has imposed a nationwide lockdown amid the massive spike in coronavirus cases after the emergence of new mutant coronavirus strain.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X