Get Updates
Get notified of breaking news, exclusive insights, and must-see stories!

ವಿಶ್ವಸುಂದರಿ ಪಟ್ಟಕ್ಕೇರಿದ ಜಮೈಕಾದ ಸುಂದರಿ ಟೋನಿ ಸಿಂಗ್

ಲಂಡನ್, ಡಿಸೆಂಬರ್ 15: ಜಮೈಕಾ ಮೂಲದ ಟೋನಿ ಆನ್ ಸಿಂಗ್ ಅವರು 2019ನೇ ಸಾಲಿನ ವಿಶ್ವ ಸುಂದರಿ ಪಟ್ಟಕ್ಕೇರಿದ್ದಾರೆ. ಎಕ್ಸೆಲ್ ಲಂಡನ್ ನಲ್ಲಿ ನಡೆದ ಸಮಾರಂಭದಲ್ಲಿ ವಿಶ್ವಸುಂದರಿಯನ್ನು ಘೋಷಿಸಲಾಯಿತು.

ಮೆಕ್ಸಿಕೋದ ಸುಂದರಿ, ಹಾಲಿ ಸುಂದರಿಯ ವೆನೆಸ್ಸಾ ಪೊನ್ಸ್ ಅವರು ಹೊಸ ಸುಂದರಿ ಟೋನಿ ಸಿಂಗ್ ಗೆ ಕಿರೀಟ ಧಾರಣೆ ಮಾಡಿದರು. ಟೋನಿ ಸಿಂಗ್ ಸಂತೋಷದಿಂದ ಆನಂದಭಾಷ್ಪ ಸುರಿಸಿದರು. ಇದೇ ಸಂದರ್ಭದಲ್ಲಿ ಎರಡನೇ ಸ್ಥಾನ ಪಡೆದ ಫ್ರಾನ್ಸಿನ ಓಫ್ಲೆ ಮೆಜಿನೋ ಹಾಗೂ ಮೂರನೇ ಸ್ಥಾನ ಪಡೆದ ಭಾರತದ ಸುಮನ್ ರಾವ್ ಅವರು ಜೊತೆಗಿದ್ದರು.

Miss World 2019 winner is Miss Jamaica Tony-Ann Singh, Indias Suman Rao is second runner-up

ರಾಜಸ್ಥಾನ ಮೂಲದ 20 ವರ್ಷದ ಸುಂದರಿ ಸುಮನ್ ರಾವ್ ಅವರು ಜೂನ್ ತಿಂಗಳಿನಲ್ಲಿ ಮಿಸ್ ಇಂಡಿಯಾ 2019 ಕಿರೀಟ ಧರಿಸಿದರು. ನಟಿಯಾಗುವ ಆಸೆ ಇರಿಸಿಕೊಂಡಿರುವ ಸುಮನ್ ಅವರು ಮಾಡೆಲಿಂಗ್ ಹಾಗೂ ವ್ಯಾಸಂಗ ಎರಡರಲ್ಲೂ ತೊಡಗಿಸಿಕೊಂಡಿದ್ದಾರೆ. ಲಿಂಗ ಸಮಾನತೆ ಹಾಗೂ ಜಾಗತಿಕವಾಗಿ ಈ ಬಗ್ಗೆ ಹೋರಾಟಕ್ಕೆ ಸಿದ್ಧ ಎಂದಿದ್ದಾರೆ.

Miss World 2019 winner is Miss Jamaica Tony-Ann Singh, Indias Suman Rao is second runner-up

ಬ್ರಿಟಿಷ್ ಪ್ರಸಾರಕ ಪಿಯರ್ಸ್ ಮೊರ್ಗನ್ ಅವರು ಮುಖ್ಯ ಜಡ್ಜ್ ಆಗಿದ್ದ ಈ ಕಾರ್ಯಕ್ರಮ 69ನೇ ಆವೃತ್ತಿಯದ್ದಾಗಿದೆ. 120 ದೇಶಗಳಿಂದ ಸ್ಪರ್ಧಿಗಳು ನವೆಂಬರ್ 20 ರಿಂದ ವಿವಿಧ ಹಂತದ ಸ್ಪರ್ಧೆಗಳಲ್ಲಿ ತೊಡಗಿಕೊಂಡಿದ್ದರು. ಡಿಸೆಂಬರ್ 14ರಂದು ಅಂತಿಮ ವಿಜೇತರನ್ನು ಘೋಷಿಸಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+