ಭಿಕ್ಷುಕನಿಗೆ ಡೆಬಿಟ್ ಕಾರ್ಡ್, ಪಿನ್ ನಂಬರ್ ಕೊಟ್ಟ ಕರುಣಾಮಯಿ!

ಲಂಡನ್, ಮಾರ್ಚ್ 19: ರಸ್ತೆಯಲ್ಲಿ ನಡೆದು ಹೋಗುವಾಗ ಯಾರಾದರೂ ಭಿಕ್ಷುಕರು ಎದುರು ಬಂದರೆ ಚಿಲ್ಲರೆ ಹುಡುಕುವವರು ಒಂದಷ್ಟು ಜನರಾದರೆ, ಮತ್ತೆಷ್ಟೋ ಜನ ಕಂಡೂ ಕಾಣದಂತೆಯೇ ಹೋಗುವುದೇ ಹೆಚ್ಚು.

ಆದರೆ ಬೇಡುತ್ತ ಬಂದ ವ್ಯಕ್ತಿಗೆ ಯಾರಾದರೂ ತಮ್ಮ ಡೆಬಿಟ್ ಕಾರ್ಡ್, ಮತ್ತು ಪಿನ್ ನಂಬರ್ ಅನ್ನೂ ಕೊಟ್ಟು ಕಳಿಸಿದ ಬಗ್ಗೆ ಕೇಳಿದ್ದೀರಾ?

ಲಂಡನ್ನಿನ ನ್ಯೂಕ್ಯಾಸಲ್ ನ ವ್ಯಕ್ತಿಯೊಬ್ಬರು, ತಮ್ಮ ಬಳಿ ಹಣ ಕೇಳುತ್ತ ಬಂದ ನಿರಾಶ್ರಿತ ವ್ಯಕ್ತಿಯೊಬ್ಬರಿಗೆ ತಮ್ಮ ಬ್ಯಾಂಕ್ ಕಾರ್ಡ್ (ಡೆಬಿಟ್) ಮತ್ತು ಪಿನ್ ನಂಬರ್ ಅನ್ನು ಕೊಟ್ಟು 20 ಪೌಂಡ್ (1840 ರೂ.) ಗಳನ್ನು ಡ್ರಾ ಮಾಡಿಕೊಂಡು ಬರುವಂತೆ ಹೇಳಿದ್ದರು.

Man gives his bank card and pin number to a homeless man

ಹೀಗೆ ಡೆಬಿಟ್ ಕಾರ್ಡ್ ಅನ್ನು ಅಪರಿಚಿತ ವ್ಯಕ್ತಿಗೆ ನೀಡಿದರೂ, ಆತ ಮಾತ್ರ ಕೇವಲ 20 ಪೌಂಡ್ ಹಣವನ್ನಷ್ಟೇ ಡ್ರಾ ಮಾಡಿಕೊಂಡು, ಅದರ ರಿಸಿಪ್ಟ್ ಅನ್ನೂ ವಾಪಸ್ ಅದೇ ವ್ಯಕ್ತಿಗೆ ತಂದು ಕೊಟ್ಟಿದ್ದಾನೆ.

ಈ ದೃಶ್ಯವನ್ನು ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ.

"ಜೇಬಿನಲ್ಲಿ ಹಣವಿಲ್ಲದ ಕಾರಣ ತಮ್ಮ ಡೆಬಿಟ್ ಕಾರ್ಡ್ ಅನ್ನೇ ಈ ವ್ಯಕ್ತಿ ಭಿಕ್ಷುಕನಿಗೆ ಕೊಟ್ಟು ಕಳಿಸಿದ್ದರು. ನಂಬಿಕೆ ಎಂಬ ಪದಕ್ಕೆ ಇದ್ದಕಿಂತ ಉದಾಹರಣೆ ಬೇಕೆ? ಆತ ಕಾರ್ಡ್ ಪಿನ್ ನಂಬರ್ ಕೊಟ್ಟಿದ್ದರೂ, ಭಿಕ್ಷುಕ ಮಾತ್ರ 20 ಪೌಂಡ್ ಅಷ್ಟನ್ನೇ ಡ್ರಾ ಮಾಡಿಕೊಂಡು, ಕಾರ್ಡ್ ಅನ್ನು ವಾಪಸ್ ತಂದು ಕೊಟ್ಟಿದ್ದಾನೆ. ಆ ನಂಬಿಕೆ ಇಟ್ಟುಕೊಂಡ ವ್ಯಕ್ತಿಯೂ ಕಾರ್ಡ್ ಕೊಟ್ಟಿದ್ದಾನೆ. ಈ ಘಟನೆಗೆ ನಾನು ಸಾಕ್ಷಿಯಾದೆ. ಜಗತ್ತಿನಲ್ಲಿ ನ್ಯೂಕ್ಯಾಸಲ್ ಗಿಂತ ಉತ್ತಮ ಪ್ರದೇಶ ಯಾವುದಿದೆ?" ಎಂದು ಈ ದೃಶ್ಯವನ್ನು ಚಿತ್ರೀಕರಿಸಿದ ವ್ಯಕ್ತಿ ಬರೆದುಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+