ಬ್ರಿಟನ್ ಸಂಸತ್ತಿನಲ್ಲಿ ಕಾಶ್ಮೀರದ ಚರ್ಚೆ: ಬೇಸರ ವ್ಯಕ್ತಪಡಿಸಿದ ಭಾರತ
ಲಂಡನ್, ಜನವರಿ 14:ಬ್ರಿಟನ್ ಸಂಸತ್ತಿನಲ್ಲಿ ಕಾಶ್ಮೀರ ಕುರಿತು ಕೆಲವು ಸಂಸದರು ಮಂಡಿಸಿರುವ ಚರ್ಚೆಗೆ ಭಾರತ ಬೇಸರ ವ್ಯಕ್ತಪಡಿಸಿದೆ.
ಬುಧವಾರ ಸಂಜೆ ಹೌಸ್ ಆಫ್ ಕಾಮನ್ಸ್‌ನ ವೆಸ್ಟ್ ಮಿನಿಸ್ಟರ್ ಹಾಲ್‌ನಲ್ಲಿ ಬ್ರಿಟಿಷ್ ಸಂಸದರು ಆಯೋಜಿಸಿದ್ದ ಈ ಚರ್ಚೆಗೆ ಕಾಶ್ಮೀರದ ರಾಜಕೀಯ ಪರಿಸ್ಥಿತಿ ಎಂಬ ಶೀರ್ಷಿಕೆ ಇಡಲಾಗಿದ್ದು, ಈ ಶೀರ್ಷಿಕೆಯೇ ಸಮಸ್ಯಾತ್ಮಕವಾಗಿದೆ ಎಂದು ಲಂಡನ್‌ನಲ್ಲಿರುವ ಭಾರತ ಹೈಕಮಿಷನ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಲಂಡನ್‌ನ ಸಂಸತ್ತಿನಲ್ಲಿ ನಡೆದ ಈ ಚರ್ಚೆಯಲ್ಲಿ ಆಧಾರರಹಿತವಾದ ಸುಳ್ಳುಗಳು ಕೇಳಿಬಂದಿದೆ ಎಂದು ಭಾರತ ಆರೋಪಿಸಿದೆ.ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿರುವ ವಾಸ್ತವ ಅಂಶಗಳನ್ನು ಕೈಬಿಟ್ಟು ಸುಳ್ಳು ವಿಚಾರಗಳನ್ನು ಬ್ರಿಟನ್ ಸಂಸದರು ಚರ್ಚೆಯಲ್ಲಿ ಪ್ರತಿಪಾದಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವ ಅಗತ್ಯವಿದೆ ಎಂದು ಭಾರತೀಯ ಹೈಕಮಿಷನ್ ಹೇಳಿದೆ.
ಒಟ್ಟಿನಲ್ಲಿ ಬ್ರಿಟನ್ ಸಂಸತ್ತಿನಲ್ಲಿ ಜಮ್ಮು ಮತ್ತು ಕಶ್ಮೀರದ ಕುರಿತು ನಡೆಸಿರುವ ಚರ್ಚೆ ಯಿಂದ ಬೇಸರವಾಗಿದೆ ಎಂದಿದೆ.












Click it and Unblock the Notifications