ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾವು ಉಕ್ರೇನ್ ಸರ್ಕಾರವನ್ನು ಬದಲಿಸುವ ಪ್ರಯತ್ನದಲ್ಲಿದೆ: ಬ್ರಿಟನ್

|
Google Oneindia Kannada News

ಲಂಡನ್, ಜನವರಿ 24: ರಷ್ಯಾವು ಉಕ್ರೇನ್ ಸರ್ಕಾರವನ್ನು ಬದಲಿಸುವ ಪ್ರಯತ್ನದಲ್ಲಿದೆ ಎಂದು ಬ್ರಿಟನ್ ಸರ್ಕಾರ ಗಂಭೀರ ಆರೋಪ ಮಾಡಿದೆ.

ರಷ್ಯಾ 100,000 ಸೈನಿಕರನ್ನು ಉಕ್ರೇನ್‌ನೊಂದಿಗಿನ ತನ್ನ ಗಡಿಯ ಸಮೀಪಕ್ಕೆ ಸ್ಥಳಾಂತರಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಉಕ್ರೇನ್ ಅನ್ನು "ಆಕ್ರಮಣ ಮಾಡಿ ವಶಪಡಿಸಿಕೊಳ್ಳಬೇಕೆ" ಎನ್ನುವ ಗೊಂದಲದಲ್ಲಿ ರಷ್ಯಾದ ಸರ್ಕಾವಿದೆ, ಈ ಹಿನ್ನೆಲೆಯಲ್ಲಿ ಕೈವ್‌ನಲ್ಲಿ ರಷ್ಯಾದ ಪರ ನಾಯಕನನ್ನು ನೇಮಕ ಮಾಡಲು ನೋಡುತ್ತಿದೆ FCDO ಹೇಳಿದೆ.

ಈ ಕುರಿತು ತನ್ನ ಕಳವಳ ವ್ಯಕ್ತಪಡಿಸಿರುವ ಬ್ರಿಟನ್, ಉಕ್ರೇನ್‌ ಸರ್ಕಾರವನ್ನು ಬದಲಿಸಿ ಮಾಸ್ಕೊ ಪರ ಆಡಳಿತವನ್ನು ತರಲು ರಷ್ಯಾ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದು ಉಕ್ರೇನ್‌ನ ಮಾಜಿ ಶಾಸಕ ಯೆವ್ಹೆನಿ ಮುರಾಯೆವ್ ಅವರನ್ನು ಸಂಭಾವ್ಯ ಅಭ್ಯರ್ಥಿಯಾಗಿ ಪರಿಗಣಿಸಿದೆ ಎಂದು ಬ್ರಿಟನ್‌ ಸರ್ಕಾರ ಆರೋಪಿಸಿದೆ.

Britain Warns Of Russian Plot To Replace Ukraine Government

" ಬಿಡುಗಡೆ ಮಾಡಲಾದ ಮಾಹಿತಿಯು ಉಕ್ರೇನ್ ಅನ್ನು ಬುಡಮೇಲು ಮಾಡಲು ವಿನ್ಯಾಸಗೊಳಿಸಿದ ರಷ್ಯಾದ ಚಟುವಟಿಕೆಯ ವ್ಯಾಪ್ತಿಯ ಮೇಲೆ ಬೆಳಕು ಚೆಲ್ಲುತ್ತದೆ ಮತ್ತು ಕ್ರೆಮ್ಲಿನ್ ಚಿಂತನೆಯ ಒಳನೋಟವಾಗಿದೆ" ಎಂದು ಯುಕೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಶನಿವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮುರಾಯೆವ್‌ ರಷ್ಯಾ ಪರ ಸಣ್ಣ ಪಕ್ಷವಾದ ನಾಶಿಯ ಮುಖ್ಯಸ್ಥರಾಗಿದ್ದಾರೆ. ನಾಶಿ ಪಕ್ಷವು ಸದ್ಯ ಉಕ್ರೇನಿನ ಸಂಸತ್ತಿನಲ್ಲಿ ಯಾವುದೇ ಸ್ಥಾನಗಳನ್ನು ಹೊಂದಿಲ್ಲ. ರಷ್ಯಾದ ಗುಪ್ತಚರ ಸೇವೆಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿರುವ ಉಕ್ರೇನ್‌ನ ಹಲವಾರು ರಾಜಕಾರಣಿಗಳನ್ನು ಬ್ರಿಟನ್‌ ವಿದೇಶಾಂಗ ಕಚೇರಿ ಶನಿವಾರ ಹೆಸರಿಸಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಬ್ರಿಟನ್ ಈ ಆರೋಪ ಮಾಡಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವು ತಟಸ್ಥ ನಿಲುವು ತಾಳಿದೆ. ಉಕ್ರೇನ್ ಮತ್ತು ರಷ್ಯಾ ನೂರಾರು ವರ್ಷಗಳಿಂದ ಸಾಂಸ್ಕೃತಿಕ, ಭಾಷಾ ಮತ್ತು ಕೌಟುಂಬಿಕ ಸಂಬಂಧಗಳನ್ನು ಹಂಚಿಕೊಂಡು ಬಂದಿವೆ. ರಷ್ಯಾದ ಬಳಿಕ, ಉಕ್ರೇನ್ ಎರಡನೇ ಅತ್ಯಂತ ಶಕ್ತಿಶಾಲಿ ಸೋವಿಯತ್ ಗಣರಾಜ್ಯವಾಗಿತ್ತು. ಸೋವಿಯತ್ ಒಕ್ಕೂಟದಿಂದ ಉಕ್ರೇನ್ ಬೇರ್ಪಟ್ಟಾಗಿನಿಂದ ಉಕ್ರೇನ್​ನಲ್ಲಿ ತನ್ನ ಅಧಿಕಾರ ಸ್ಥಾಪಿಸಲು ರಷ್ಯಾ ಪ್ರಯತ್ನಿಸುತ್ತಲೇ ಬಂದಿದೆ.

ಅಮೆರಿಕದ ಜೊತೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದಕ್ಕೆ ಮುಂದಾಗಿದ್ದ ಉಕ್ರೇನ್ ರಷ್ಯಾದ ಮಾತನ್ನು ಕೇಳಿರಲಿಲ್ಲ. ಇದರ ಜೊತೆಗೆ ಯುರೋಪ್‌ನ ಕೆಲವು ರಾಷ್ಟ್ರಗಳಿಂದ ಪರೋಕ್ಷವಾಗಿ ರಷ್ಯಾಗೆ ಧಮ್ಕಿ ಹಾಕಿಸಲು ಯತ್ನಿಸಿತ್ತು ಎಂಬ ಆರೋಪವಿದೆ. ಇದೆಲ್ಲಾ ರಷ್ಯಾದ ನಾಯಕರನ್ನ ಹಾಗೂ ರಷ್ಯಾ ಅಧ್ಯಕ್ಷ ಪುಟಿನ್‌ರನ್ನು ಕೆಣಕಿದೆ.

ಹಲವು ಒತ್ತಡಕ್ಕೆ ಮಣಿದು ರಷ್ಯಾ ತನ್ನ ಸೇನೆಯನ್ನು ಹಿಂದಕ್ಕೆ ಪಡೆದಿತ್ತು. ರಷ್ಯಾ ಕಪ್ಪು ಸಮುದ್ರದ ಮೇಲೆ ನಿರ್ಬಂಧ ಹೇರಿ ಉಕ್ರೇನ್ ಬಂದರುಗಳ ಮೇಲೆ ನಿಯಂತ್ರಣ ಸಾಧಿಸುತ್ತಿದೆ ಎಂದು ಅಮೆರಿಕ ಆರೋಪ ಮಾಡಿತ್ತು.

ಉಕ್ರೇನ್ ಬೆಂಬಲಕ್ಕೆ ನಿಂತಿದ್ದ ಬ್ರಿಟನ್, ಯುದ್ಧ ನೌಕೆಯನ್ನ ಕಪ್ಪು ಸಮುದ್ರಕ್ಕೆ ಕಳುಹಿಸಲು ಮುಂದಾಗಿತ್ತು. ಈ ಹಿಂದಿನ ಸೋವಿಯೆಟ್ ರಿಪಬ್ಲಿಕ್ ಭೂ ಭಾಗವನ್ನು ಪರಿಗಣಿಸಿದರೆ, ಈಗ ಪರಿಸ್ಥಿತಿ ಹದಗೆಟ್ಟಿರುವುದು ಪೂರ್ವ ಭಾಗದಲ್ಲಿ ಎಂದು ಹೇಳಬಹುದು. ಸುಮಾರು 100,000 ಸೈನಿಕರ ತುಕಡಿಯನ್ನು ರಷ್ಯಾ ಈ ಗಡಿಯಲ್ಲಿ ನಿಯೋಜಿಸಿದೆ.

ರಷ್ಯಾ ಹಾಗೂ ಉಕ್ರೇನ್ ಗಡಿಯಲ್ಲಿ ಪರಿಸ್ಥಿತಿ ಇನ್ನೂ ಸುಧಾರಿಸಿಲ್ಲ. ಉಕ್ರೇನ್ ಮೇಲೆ ಮಾಸ್ಕೋ ಆಕ್ರಮಣ ನಡೆಸುವ ಬೆದರಿಕೆಯೊಡ್ಡಿದೆ. ಈ ಹಿನ್ನೆಲೆ ರಷ್ಯಾ ಮತ್ತು ಅಮೆರಿಕ ಎರಡೂ ರಾಷ್ಟ್ರಕ್ಕೂ ಬೆಂಬಲ ನೀಡದೇ ಭಾರತ (ತಟಸ್ಥ ನೀತಿ) ರಾಜತಾಂತ್ರಿಕ ನಿಲುವನ್ನು ಕಾಯ್ದುಕೊಳ್ಳುವ ಸಾಧ್ಯತೆಯಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದರಂತೆ 2014ರಲ್ಲಿ ಯುಕ್ರೇನ್‌ನಿಂದ ಕ್ರಿಮಿಯಾ ಪ್ರದೇಶವನ್ನು ರಷ್ಯಾ ವಶಪಡಿಸಿಕೊಂಡಿತು. ಎರಡನೇ ಮಹಾಯುದ್ಧದ ನಂತರ ಯುರೋಪಿಯನ್ ದೇಶವೊಂದು ಮತ್ತೊಂದು ದೇಶದ ಪ್ರದೇಶ ಸ್ವಾಧೀನಪಡಿಸಿಕೊಂಡಿದ್ದು ಇದೇ ಮೊದಲಾಗಿತ್ತು.

ಉಕ್ರೇನ್ ಬೆಂಬಲಕ್ಕೆ ಅಮೆರಿಕ, ಜಪಾನ್, ಹಂಗೇರಿ, ಬಲ್ಗೇರಿಯಾ, ಫ್ರಾನ್ಸ್​ ಸೇರಿದಂತೆ ಅನೇಕ ರಾಷ್ಟ್ರಗಳು ನಿಂತಿವೆ. ಆದರೆ, ಭಾರತ ರಷ್ಯಾ ಮತ್ತು ಯುನೈಟೆಡ್ ಅಮೆರಿಕದೊಂದಿಗೆ ನವದೆಹಲಿಯ ಸಮೀಕರಣ ಒಪ್ಪಂದ ಮಾಡಿಕೊಂಡಿರುವುದರಿಂದ ತಟಸ್ಥವಾಗಿ ಉಳಿಯುವ ಸಾಧ್ಯತೆಯಿದೆ.

ಈ ಮೂಲಕ ರಷ್ಯಾವನ್ನು ಅಸಮಾಧಾನಗೊಳಿಸುವುದಿಲ್ಲ ಅಥವಾ ಅಮೆರಿಕವನ್ನು ನಿರಾಶೆಗೊಳಿಸುವುದಿಲ್ಲ. 2014 ರಲ್ಲಿ ರಷ್ಯಾ ಕ್ರಿಮಿಯಾವನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಾಗ ನವದೆಹಲಿಯು ಈ ಕ್ರಮವನ್ನು ಟೀಕಿಸಲಿಲ್ಲ ಎಂಬುದನ್ನು ಇಲ್ಲಿ ಗಮನಿಸುವುದು ಸೂಕ್ತ ಎಂದು ಜೆಎನ್‌ಯು ಸ್ಕೂಲ್ ಆಫ್ ರಷ್ಯನ್ ಮತ್ತು ಸೆಂಟ್ರಲ್ ಏಷ್ಯನ್ ಸ್ಟಡೀಸ್​ನ ಡಾ. ರಾಜನ್ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇತ್ತ ಉಕ್ರೇನ್ ಅನ್ನು ನ್ಯಾಟೋಗೆ ಸೇರಿಸಿಕೊಳ್ಳಲು ಅಮೆರಿಕ ಯತ್ನಿಸುತ್ತಿದೆ. ಇದನ್ನು ವಿರೋಧಿಸಿರುವ ರಷ್ಯಾ ನ್ಯಾಟೋಗೆ ಉಕ್ರೇನ್​ ಸೇರಿಸಿಕೊಳ್ಳದಂತೆ ಭರವಸೆ ನೀಡುವಂತೆ ಅಮೆರಿಕ​ ಬಳಿ ಕೇಳಿದೆ. ಆದರೆ, ಈ ಮನವಿಯನ್ನು ಜೋ ಬೈಡನ್​​​ ತಿರಸ್ಕರಿಸಿದ್ದಾರೆ. ಹೀಗಾಗಿ ಉಕ್ರೇನ್​ ಮೇಲೆ ಯುದ್ಧ ಸಾರಿ ಅಲ್ಲಿನ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ರಷ್ಯಾ ಸಿದ್ಧತೆ ನಡೆಸುತ್ತಿದೆ.

English summary
Britain's Foreign Office released a press release late Saturday accusing Russia of seeking to install a pro-Russian leader in Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X